×
Ad

ಲೆಜೆಂಡ್ಸ್ ಲೀಗ್ ಕ್ರಿಕೆಟ್‌: ಮಾತಿನ ಚಕಮಕಿ ಬಳಿಕ ಯೂಸುಫ್ ರನ್ನು ತಳ್ಳಿದ ಜಾನ್ಸನ್; ವೀಡಿಯೊ ವೈರಲ್‌

Update: 2022-10-03 15:18 IST
Videograbs

ಜೈಪುರ: ಎರಡನೇ ಆವೃತ್ತಿಯ  ಲೆಜೆಂಡ್ಸ್ ಲೀಗ್ ಕ್ರಿಕೆಟ್‌ ಕೆಲವು ಶ್ರೇಷ್ಠ ಆಟಗಾರರ ಮುಖಾಮುಖಿಗೆ ಸಾಕ್ಷಿಯಾಗುತ್ತಿದೆ.  ಪ್ರತಿಯೊಬ್ಬರೂ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲು  ಪ್ರಯತ್ನಿಸುತ್ತಿರುವ ಕಾರಣ  ಸ್ಪರ್ಧೆಯು ತೀವ್ರ ಸ್ವರೂಪ ಪಡೆದಿದೆ. ಆದಾಗ್ಯೂ, ರವಿವಾರ ಭಿಲ್ವಾರಾ ಕಿಂಗ್ಸ್‌ನ ಆಲ್‌ರೌಂಡರ್ ಯೂಸುಫ್ ಪಠಾಣ್ ಹಾಗೂ  ಇಂಡಿಯಾ ಕ್ಯಾಪಿಟಲ್ಸ್‌ನ ವೇಗಿ ಮಿಚೆಲ್ ಜಾನ್ಸನ್ ಪಂದ್ಯದ ಸಮಯದಲ್ಲಿ ಪರಸ್ಪರ ವಾಗ್ವಾದದಲ್ಲಿ ತೊಡಗಿದ್ದು, ಒಂದು  ಹಂತದಲ್ಲಿ ಜಾನ್ಸನ್ ಅವರು ಪಠಾಣ್ ರನ್ನು ತಳ್ಳಿರುವ ಘಟನೆಯೂ ನಡೆದಿದೆ.

ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಠಾಣ್ ಹಾಗೂ  ಜಾನ್ಸನ್ ಮೊದಲಿಗೆ ತೀವ್ರ ಮಾತಿನ ಸಮರದಲ್ಲಿ ತೊಡಗಿದರು ಹಾಗೂ  ಇಬ್ಬರೂ ಬಹುತೇಕ ಪರಸ್ಪರ ಮೈಕೈ ತಾಗಿಸಿಕೊಂಡರು. ನಂತರ ಜಾನ್ಸನ್ ಅವರು ಯೂಸುಫ್ ಅವರನ್ನು ತಳ್ಳಿದರು. ಆಗ ಇಬ್ಬರನ್ನು ಬೇರ್ಪಡಿಸಲು ಅಂಪೈರ್‌ಗಳು ಮಧ್ಯಪ್ರವೇಶಿಸಬೇಕಾಯಿತು.

ಜೋಧ್‌ಪುರದ ಬರ್ಕತುಲ್ಲಾ ಖಾನ್ ಕ್ರೀಡಾಂಗಣದಲ್ಲಿ ರವಿವಾರ ನಡೆದ ರೋಚಕ ಅರ್ಹತಾ ಪಂದ್ಯದಲ್ಲಿ ನ್ಯೂಝಿಲೆಂಡ್‌ನ ಮಾಜಿ ನಾಯಕ ರಾಸ್ ಟೇಲರ್ ಹಾಗೂ  ವೆಸ್ಟ್ ಇಂಡೀಸ್ ತಾರೆ ಆಶ್ಲೇ ನರ್ಸ್ ಅದ್ಭುತ ಅರ್ಧಶತಕಗಳನ್ನು ಸಿಡಿಸುವ ಮೂಲಕ ಭಿಲ್ವಾರಾ ಕಿಂಗ್ಸ್ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿ ಇಂಡಿಯಾ ಕ್ಯಾಪಿಟಲ್ಸ್ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಫೈನಲ್‌ಗೆ ಪ್ರವೇಶಿಸಲು ಸಹಾಯ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News