ಜಮ್ಮು ಕಾಶ್ಮೀರ: ಜೈಲುಗಳ ಉಸ್ತುವಾರಿ ಹೊಂದಿದ್ದ ಹಿರಿಯ ಪೊಲೀಸ್ ಅಧಿಕಾರಿಯ ಹತ್ಯೆ

Update: 2022-10-04 02:49 GMT
Photo credit: NDTV

ಹೊಸದಿಲ್ಲಿ: ಜಮ್ಮು ಕಾಶ್ಮೀರದ(Jammu And Kashmir) ಕಾರಾಗೃಹಗಳ ಹೊಣೆ ಹೊತ್ತಿದ್ದ ಉನ್ನತ ಪೊಲೀಸ್ ಅಧಿಕಾರಿ ಹೇಮಂತ್ ಲೋಹಿಯಾ(Hemant Lohia) ಅವರನ್ನು ಸೋಮವಾರ ಮನೆಯಲ್ಲೇ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.

57 ವರ್ಷ ವಯಸ್ಸಿನ ಲೋಹಿಯಾ 1992ನೇ ಬ್ಯಾಚ್ ಐಪಿಎಸ್(IPS) ಅಧಿಕಾರಿ. ಜಮ್ಮು ಹೊರವಲಯದ ಉದಯ್‍ವಾಲಾದ ಅವರ ಮನೆಯಲ್ಲಿ ಹೇಮಂತ್ ಅವರನ್ನು ಕತ್ತು ಸೀಳಿ ಹತ್ಯೆ ಮಾಡಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಕಾರಾಗೃಹಗಳ ಮಹಾ ನಿರ್ದೇಶಕರಾಗಿ ಅವನ್ನು ಆಗಸ್ಟ್ ನಲ್ಲಿ ನಿಯುಕ್ತಿ ಮಾಡಲಾಗಿತ್ತು.

ಘಟನೆ ಬಳಿಕ ಮನೆಯಲ್ಲಿ ಸಹಾಯಕನಾಗಿದ್ದ ವ್ಯಕ್ತಿ ತಲೆ ಮರೆಸಿಕೊಂಡಿದ್ದು, ಆತನಿಗೆ ಹುಡುಕಾಟ ನಡೆದಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಮುಕೇಶ್ ಸಿಂಗ್ ಹೇಳಿದ್ದಾರೆ. ವಿಧಿವಿಜ್ಞಾನ ಮತ್ತು ಅಪರಾಧ ಪತ್ತೆ ತಂಡಗಳು ಸ್ಥಳಕ್ಕೆ ಧಾವಿಸಿವೆ ಎಂದು ಅವರು ವಿವರ ನೀಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾಶ್ಮೀರಕ್ಕೆ ಭೇಟಿ ನೀಡುವ ದಿನದಂದೇ ಈ ಹತ್ಯೆ ನಡೆದಿದೆ.

ಇದನ್ನೂ ಓದಿ: ತನ್ನ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ ವ್ಯಕ್ತಿ!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News