ವೇದಿಕೆಯಲ್ಲಿ ಕುಸಿದು ಮೃತಪಟ್ಟ ಖ್ಯಾತ ಒಡಿಯಾ ಗಾಯಕ ಮುರಳಿ ಮೊಹಾಪಾತ್ರ

Update: 2022-10-04 06:59 GMT
ಮುರಳಿ ಮೊಹಾಪಾತ್ರ (Photo: Twitter)

ಭುಬನೇಶ್ವರ್: ಒಡಿಯಾದ ಖ್ಯಾತ ಗಾಯಕ ಮುರಳಿ ಮೊಹಾಪಾತ್ರ(Odia singer Murali Mohapatra) ಅವರು ರಾಜ್ಯದ ಕೊರಾಪುತ್ ಜಿಲ್ಲೆಯ ಜೇಯೋರ್ ಪಟ್ಟಣದಲ್ಲಿ ದುರ್ಗಾ ಪೂಜೆಯ ನಿಮಿತ್ತ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡುತ್ತಿರುವ ವೇಳೆ ವೇದಿಕೆಯಲ್ಲಿ ಕುಸಿದು ಸಾವನ್ನಪ್ಪಿದ್ದಾರೆ.

ಮೊಹಾಪಾತ್ರ ಅವರಿಗೆ ಅನಾರೋಗ್ಯವಿತ್ತೆಂದು ಹೇಳಲಾಗುತ್ತಿದೆ. ಪ್ರದರ್ಶನದ ವೇಳೆ  ನಾಲ್ಕು ಹಾಡುಗಳನ್ನು ಹಾಡಿದ ನಂತರ ಅವರು ಹಠಾತ್ ಆಗಿ ಅಲ್ಲಿನ ಕುರ್ಚಿಯೊಂದರಲ್ಲಿ ಕುಳಿತು ಇತರ ಗಾಯಕರ ಹಾಡುಗಳನ್ನು ಕೇಳುತ್ತಿರುವಾಗಲೇ ಕುಸಿದರು. ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಅದಾಗಲೇ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದ್ದಾರೆ.

ಅವರ ನಿಧನದ ಸುದ್ದಿ ಹರಡುತ್ತಿದ್ದಂತೆಯೇ ನಗರದಲ್ಲಿ ಶೋಕದ ವಾತಾವರಣ ಮೂಡಿದೆ. ಮೊಹಾಪಾತ್ರ ಅವರು ಜೆಯ್‍ಪೋರ್‍ನ ಅಕ್ಷ್ಯ ಮೊಹಂತಿ ಎಂದೇ ಖ್ಯಾತರಾಗಿದ್ದರು. ಅವರು ಜೇಯ್‍ಪೋರ್ ಸಬ್-ಕಲೆಕ್ಟರ್ ಕಚೇರಿಯಲ್ಲಿ ಉದ್ಯೋಗಲ್ಲಿದ್ದರು ಹಾಗೂ ಒಂಬತ್ತು ತಿಂಗಳಲ್ಲಿ ನಿವೃತ್ತರಾಗಲಿದ್ದರು.

ಇದನ್ನೂ ಓದಿ: ಯೂಟ್ಯೂಬ್ ಚಾನಲ್ ಪ್ರಾರಂಭಿಸಿದ ರವೀಶ್ ಕುಮಾರ್: NDTV ಭವಿಷ್ಯದ ಬಗ್ಗೆ ಮತ್ತೆ ಬಿಸಿಬಿಸಿ ಚರ್ಚೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News