×
Ad

ಭೌತಶಾಸ್ತ್ರ ನೊಬೆಲ್ ಪುರಸ್ಕಾರವನ್ನು ಹಂಚಿಕೊಂಡ ಮೂವರು ವಿಜ್ಞಾನಿಗಳು

Update: 2022-10-04 16:30 IST
Photo: Twitter/@NobelPrize

ಸ್ಟಾಕ್ಹೋಂ: 2022ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ವಿಜ್ಞಾನಿಗಳಾದ ಅಲೈನ್ ಆಸ್ಪೆಕ್ಟ್, ಜಾನ್ ಎಫ್ ಕ್ಲೌಸರ್ ಮತ್ತು ಆಂಟನ್ ಝೈಲಿಂಗರ್ ಅವರಿಗೆ ನೀಡಲಾಗುವುದು ಎಂದು ನೊಬೆಲ್ ಪ್ರಶಸ್ತಿಯ ಅಧಿಕೃತ ಸಾಮಾಜಿಕ ತಾಣ ಖಾತೆ ತಿಳಿಸಿದೆ.

ಪ್ರಶಸ್ತಿ ವಿಜೇತರು ನಡೆಸಿದ ಅಭಿವೃದ್ಧಿಯು ಕ್ವಾಂಟಮ್ ತಂತ್ರಜ್ಞಾನದ ಹೊಸ ಯುಗಕ್ಕೆ ಅಡಿಪಾಯ ಹಾಕಿದೆ" ಎಂದು ಪ್ರಕಟಣೆ ತಿಳಿಸಿದೆ.

"ಎಂಟಾಂಗಲ್ಡ್ ಫೋಟೋನ್ಸ್ ಪ್ರಯೋಗಗಳಿಗಾಗಿ, ಬೆಲ್ ಅಸಮಾನತೆಗಳ ಉಲ್ಲಂಘನೆಗಳನ್ನು ದೃಢಪಡಿಸಿದ್ದಕ್ಕಾಗಿ ಹಾಗೂ ಕ್ವಾಂಟಮ್ ಇನ್ಫಾರ್ಮೇಶನ್ ಸಾಯನ್ಸ್ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆಗಳಿಗಾಗಿ,'' ಈ ಮೂವರನ್ನು ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.

ಸ್ವೀಡನ್‍ನ  ಕರೋಲಿನ್ಸ್ಕಾ ಇನ್‍ಸ್ಟಿಟ್ಯೂಟ್‍ನ ನೋಬೆಲ್ ಅಸೆಂಬ್ಲಿ ಕೊಡಮಾಡುವ ಈ ಪ್ರಶಸ್ತಿಯ ಭಾಗವಾಗಿ 10 ಮಿಲಿಯನ್ ಸ್ವೀಡಿಷ್ ಕ್ರೌನ್ಸ್ ನಗದು ಬಹುಮಾನ ನೀಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News