ಕಾಶ್ಮೀರದ ಪಹಾರಿ ಸಮುದಾಯಕ್ಕೆ ಮೀಸಲಾತಿ ಘೋಷಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ

Update: 2022-10-04 13:10 GMT
ಅಮಿತ್ ಶಾ (PTI)

ರಾಜೌರಿ/ಜಮ್ಮು: ಕೇಂದ್ರ ಗೃಹ ಸಚಿವ ಅಮಿತ್ ಶಾ (Union Home Minister Amit Shah) ಅವರು ಇಂದು ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ಗುಜ್ಜರ್ ಮತ್ತು ಬಕರ್ವಾಲ್‌ಗಳ ಜೊತೆಗೆ ಪಹಾರಿ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಪರಿಶಿಷ್ಟ ಪಂಗಡಗಳಾಗಿ (ಎಸ್‌ಟಿ) ಮೀಸಲಾತಿಯನ್ನು ಶೀಘ್ರದಲ್ಲೇ ನೀಡುವುದಾಗಿ ಘೋಷಿಸಿದರು. ಪಹಾರಿ ಜನರು ಎಸ್‌ಟಿ ಸ್ಥಾನಮಾನ ಪಡೆದರೆ, ಅದು ದೇಶದಲ್ಲಿ ಮೀಸಲಾತಿ ಪಡೆದ ಮೊದಲ ಭಾಷಾವಾರು ಸಮುದಾಯವಾಗಲಿದೆ.

ಅದಕ್ಕಾಗಿ ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ರಕ್ಷಣಾ ಕಾಯ್ದೆಗೆ ತಿದ್ದುಪಡಿ ತರಬೇಕಿದೆ.

ರ್ಯಾಲಿಯಲ್ಲಿ ಮಾತನಾಡಿದ ಶಾ, “ಜಿಡಿ ಶರ್ಮಾ ಕಮಿಷನ್ (ಲೆಫ್ಟಿನೆಂಟ್ ಗವರ್ನರ್ ರಚಿತ) ಗುಜ್ಜರ್, ಬಕರ್ವಾಲ್ ಮತ್ತು ಪಹಾರಿ ಸಮುದಾಯಗಳಿಗೆ ಮೀಸಲಾತಿಯನ್ನು ಶಿಫಾರಸು ಮಾಡಿ ವರದಿಯನ್ನು ಕಳುಹಿಸಿದೆ. ಶೀಘ್ರದಲ್ಲೇ ಮೀಸಲಾತಿ ನೀಡಲಾಗುವುದು" ಎಂದರು.  

ಆರ್ಟಿಕಲ್ 370 ರ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ನಂತರವೇ ಅಂತಹ ಮೀಸಲಾತಿ ಸಾಧ್ಯವಾಗಿದೆ ಎಂದು ಅವರು ಹೇಳಿದ್ದಾರೆ. ಈಗ ಅಲ್ಪಸಂಖ್ಯಾತರು, ದಲಿತರು, ಆದಿವಾಸಿಗಳು, ಗುಡ್ಡಗಾಡು ಜನಾಂಗಗಳಿಗೆ ಅವರ ಹಕ್ಕು ಸಿಗಲಿದೆ ಎಂದು ಅವರು ಹೇಳಿದ್ದಾರೆ.

ಸದ್ಯ ಜಮ್ಮು ಕಾಶ್ಮೀರದಲ್ಲಿ ಪಹಾರಿಗಳ ಜನಸಂಖ್ಯೆಯು ಸುಮಾರು 6 ಲಕ್ಷ ಇದೆ ಎಂದು ಅಂದಾಜಿಸಲಾಗಿದೆ, ಅವರಲ್ಲಿ ಶೇಕಡಾ 55 ರಷ್ಟು ಹಿಂದೂಗಳು ಮತ್ತು ಉಳಿದವರು ಮುಸ್ಲಿಮರಾಗಿದ್ದಾರೆ. ಆದರೆ ಈಗಾಗಲೇ ಶೇಕಡಾ 10 ರಷ್ಟು ಎಸ್‌ಟಿ ಕೋಟಾವನ್ನು ಹೊಂದಿರುವ ಗುಜ್ಜರ್ ಮತ್ತು ಬಕರ್ವಾಲ್ ಸಮುದಾಯಗಳು ಪಹಾರಿಗಳಿಗೆ ಬುಡಕಟ್ಟು ಸ್ಥಾನಮಾನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ, ವಿಶೇಷ ವರ್ಗದ ಮುಸ್ಲಿಮರು ಮತ್ತು ಹಿಂದೂಗಳು ಕೇವಲ ಭಾಷೆಯ ಆಧಾರದ ಮೇಲೆ ಕೋಟಾ ಪಡೆಯಬಾರದು ಎಂದು ಅವರು ಅಭಿಪ್ರಾಯಿಸುತ್ತಾರೆ ಎಂದು ndtv.com ವರದಿ ಮಾಡಿದೆ.

ಬುಧವಾರ ಆರಂಭವಾದ ಮೂರು ದಿನಗಳ ಪ್ರವಾಸದ ಭಾಗವಾಗಿ ಅಮಿತ್ ಶಾ ಅವರು ರಾಜೌರಿಯಲ್ಲಿ ಮತ್ತು ಉತ್ತರ ಕಾಶ್ಮೀರದ ಬಾರಾಮುಲ್ಲಾದಲ್ಲಿ ಮತ್ತೊಂದು ರ್ಯಾಲಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News