×
Ad

ಜೆಇಇ ಪರೀಕ್ಷೆಯಲ್ಲಿ 820 ಅಭ್ಯರ್ಥಿಗಳ ವಂಚನೆಗೆ ಸಹಾಯ ಮಾಡಿದ ರಷ್ಯಾ ಹ್ಯಾಕರ್; ಸಿಬಿಐ

Update: 2022-10-04 20:27 IST
Photo: Ndtv

ಹೊಸದಿಲ್ಲಿ: ಜೆಇಇ ಪರೀಕ್ಷೆಯಲ್ಲಿ ಅಕ್ರಮ ಮಾಡಿದ ಆರೋಪದ ಮೇಲೆ ರಷ್ಯಾದ ಪ್ರಜೆ ಮಿಖಾಯಿಲ್ ಶಾರ್ಗೀನ್‌ ರನ್ನು ಸಿಬಿಐ ಬಂಧಿಸಿದೆ. ಐಐಟಿಗಳಂತಹ ಭಾರತದ ಉನ್ನತ ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಪರೀಕ್ಷೆಯಾದ ಜೆಇಇ-ಮೇನ್ ಅನ್ನು ಪರೀಕ್ಷೆಯಲ್ಲಿ ಅಕ್ರಮ ಎಸಗಲು ಸಹಾಯ ಮಾಡಿದ ಆರೋಪದ ಮೇಲೆ ರಷ್ಯಾದ ಹ್ಯಾಕರ್ ಮಿಖಾಯಿಲ್ ಶಾರ್ಗಿನ್ ಅವರನ್ನು ದಿಲ್ಲಿ ನ್ಯಾಯಾಲಯವು ಎರಡು ದಿನಗಳ ಕಾಲ ಸಿಬಿಐ ಕಸ್ಟಡಿಗೆ ಕಳುಹಿಸಿದೆ.

ಈ ಪ್ರಕರಣದಲ್ಲಿ ಇದುವರೆಗೆ 24 ಮಂದಿಯನ್ನು ಬಂಧಿಸಲಾಗಿದೆ. 25 ವರ್ಷದ ಮಿಖಾಯಿಲ್ ಮಿಖಾಯಿಲ್ ಶಾರ್ಗೀನ್‌  820 ಅಭ್ಯರ್ಥಿಗಳಿಗೆ ಜೆಇಇಯಲ್ಲಿ ವಂಚನೆಗೆ ಸಹಾಯ ಮಾಡಿದ್ದಾನೆ ಪ್ರಾಥಮಿಕ ತನಿಖೆಯಿಂದ ಈ ಮಾಹಿತಿ ಗೊತ್ತಾಗಿದೆ. ಈ ಸಂಖ್ಯೆ ಇನ್ನು ಹೆಚ್ಚಾಗಬಹುದು. ಮಿಖಾಯಿಲ್ ಶಾರ್ಗೀನ್‌  ತನಿಖೆಗೆ ಸಹಕರಿಸುತ್ತಿಲ್ಲ ಎಂದು ಸಿಬಿಐ ಹೇಳಿದೆ.

 "ಆತ ವೃತ್ತಿಪರ ಹ್ಯಾಕರ್,  iLeon ಸಾಫ್ಟ್‌ವೇರ್‌ ಹ್ಯಾಕ್‌ ಮಾಡಿ ಅಭ್ಯರ್ಥಿಗಳಿಗೆ ವಂಚನೆ ಮಾಡಲು ಸಹಾಯ ಮಾಡಿದ್ದಾನೆ" ಎಂದು ಸಿಬಿಐ ಹೇಳಿದೆ.

ಸಿಬಿಐ ಅಧಿಕಾರಿಗಳು ನಿನ್ನೆ ಭಾರತಕ್ಕೆ ಬಂದಿಳಿದ ಮಿಕೇಲ್‌ ಶಾರ್ಗಿನ್‌ನನ್ನು ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರು.ಈ ವ್ಯಕ್ತಿಯ ಕುರಿತು ಸಿಬಿಐ ಲುಕ್‌ ಔಟ್‌ ನೋಟಿಸ್‌ ಹೊರಡಿಸಿತ್ತು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News