ಕೋಟ: ಯುವಕ ಆತ್ಮಹತ್ಯೆ

Update: 2022-10-04 15:33 GMT

ಕೋಟ, ಅ.4: ಕೊರೋನ ಸಮಯದಲ್ಲಿ ವಿದೇಶದಿಂದ ಊರಿಗೆ ಹಿಂದಿರುಗಿ ಊರಿನಲ್ಲಿ ಮೀನುಗಾರಿಕೆ, ಕೂಲಿ ಕೆಲಸ, ತೆಂಗಿನಕಾಯಿ ಸಿಪ್ಪೆ ತೆಗೆಯುವ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬರು ಯಾವುದೋ ಕಾರಣದಿಂದ ಜೀವನದಲ್ಲಿ ಬೇಸರಗೊಂಡು ಮನೆಯ ಬಳಿ ಇರುವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಿಂದ ವರದಿಯಾಗಿದೆ.

ಮೃತರನ್ನು ಪುಟಾರ್ಡೊ (40) ಎಂದು ಗುರುತಿಸಲಾಗಿದೆ.

ಅವರು ನಾಲ್ಕು ವರ್ಷಗಳಿಂದ ವಿದೇಶದಲ್ಲಿದ್ದು, ಕೊರೋನ ಸಮಯದಲ್ಲಿ ಊರಿಗೆ ಹಿಂದಿರುಗಿದ್ದರು. ಆರು ವರ್ಷಗಳ ಹಿಂದೆ ಕಟ್ಟಿದ ಮನೆಯ ಸಾಲವನ್ನು ತೀರಿಸಲಾಗದ ಚಿಂತೆಯಲ್ಲಿ ಅವರು ಸೋಮವಾರ ರಾತ್ರಿ 7.30ರಿಂದ ಮಂಗಳವಾರ ಬೆಳಗ್ಗೆ 10 ಗಂಟೆ ನಡುವಿನ ಅವಧಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News