ಮೂರನೇ ಟಿ-ಟ್ವೆಂಟಿ: ಭಾರತಕ್ಕೆ ಸವಾಲಿನ ಮೊತ್ತದ ಗುರಿಯನ್ನು ನೀಡಿದ ದಕ್ಷಿಣ ಆಫ್ರಿಕಾ
Update: 2022-10-04 20:59 IST
ಇಂಧೋರ್: ಇಲ್ಲಿನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಕ್ರಿಕೆಟ್ ಪಂದ್ಯಾಟದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 20 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 227 ರನ್ ಗಳನ್ನು ಪೇರಿಸಿದೆ. ರಿಲೀ ರೊಸ್ಸೋರವರು ಕೇವಲ 48 ಎಸೆತಗಳಲ್ಲಿ ಶತಕ ದಾಖಲಿಸಿದರು.
ದಕ್ಷಿಣ ಆಫ್ರಿಕಾ ತಂಡದ ಪರ ರಿಲೀ ರುಸ್ಸೋ 100 ರನ್, ಕ್ವಿಂಟನ್ ಡಿʼಕಾಕ್ 68 ರನ್ ಗಳಿಸಿ ಮಿಂಚಿದರು. ಭಾರತ ತಂಡದ ಪರ ಉಮೇಶ್ ಯಾದವ್ ಹಾಗೂ ದೀಪಕ್ ಚಾಹರ್ ತಲಾ ಒಂದು ವಿಕೆಟ್ ಗಳಿಸಿದರು.