ಮೂರನೇ ಟಿ-ಟ್ವೆಂಟಿ: ಭಾರತ ತಂಡವನ್ನು ಮಣಿಸಿದ ದಕ್ಷಿಣ ಆಫ್ರಿಕಾ
ಇಂಧೋರ್: ಇಲ್ಲಿನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಕ್ರಿಕೆಟ್ ಪಂದ್ಯಾಟದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 20 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 227 ರನ್ ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ತಲುಪಲು ಸಾಧ್ಯವಾಗದೇ ಭಾರತ ತಂಡವು 178 ರನ್ ಗಳಿಸಿ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತು. ಹೀಗಿದ್ದರೂ, ಮೂರು ಪಂದ್ಯಗಳ ಸರಣಿಯನ್ನು ಭಾರತ ತನ್ನದಾಗಿಸಿಕೊಂಡಿದೆ.
ಮೊದಲೆರಡು ಪಂದ್ಯಗಳಲ್ಲಿ ಭಾರತವು ದಕ್ಷಿಣ ಆಫ್ರಿಕಾ ತಂಡವನನು ಸೋಲಿಸಿತ್ತು. ಮೂರನೇ ಪಂದ್ಯಾಟದಲ್ಕಿ ರುಸ್ಸೋ ಭರ್ಜರಿ ಶತಕದ ಮೂಲಕ ಆಫ್ರಿಕಾ ತಂಡವು ಒಟ್ಟು 227 ರನ್ ಗಳನ್ನು ಗಳಿಸಿತ್ತು. ಗುರಿಯನ್ನು ಬೆನ್ನಟ್ಟಲು ಪ್ರಾರಂಭಿಸಿದ ಭಾರತ ತಂಡವು ಆರಂಭದಲ್ಲೇ ಪ್ರಮುಖ ಎರಡು ವಿಕೆಟ್ ಗಳನ್ನು ಕಳೆದುಕೊಂಡಿತು. ದಿನೇಶ್ ಕಾರ್ತಿಕ್ 46 ಹಾಗೂ ದೀಪಕ್ ಚಾಹರ್ 31 ರನ್ ಗಳಿಸುವ ಮೂಲಕ ತಂಡವು 178 ರನ್ ಗಳಿಸುವಲ್ಲಿ ಸಹಾಯ ಮಾಡಿದರು. ಡ್ವೇನ್ ಪ್ರಿಟೋರಿಯಸ್ ಮೂರು ವಿಕೆಟ್ ಗಳನ್ನು ಕಿತ್ತು ಮಿಂಚಿದರು.