ಎಲಾನ್ ಮಸ್ಕ್ ಖರೀದಿ ಆಫರ್ ದೃಢಪಡಿಸಿದ ಟ್ವಿಟ್ಟರ್

Update: 2022-10-05 02:36 GMT
ಎಲಾನ್ ಮಸ್ಕ್ (Photo-Wikipedia)

ಸ್ಯಾನ್‍ಫ್ರಾನ್ಸಿಸ್ಕೊ: ಟ್ವಿಟ್ಟರ್ ಸಂಸ್ಥೆಯನ್ನು ಒಪ್ಪಿಕೊಂಡ ಮೂಲ ಬೆಲೆಯಲ್ಲಿ ಖರೀದಿಸುವ ಪ್ರಸ್ತಾವವನ್ನು ಮುಂದುವರಿಸಲು ಎಲಾನ್ ಮಸ್ಕ್ ನಿರ್ಧರಿಸಿದ್ದಾರೆ. ಒಪ್ಪಂದದಿಂದ ಹಿಂದೆ ಸರಿಯುವ ಪ್ರಸ್ತಾವದ ವಿರುದ್ಧ ಸಂಸ್ಥೆ ನ್ಯಾಯಾಲಯದಲ್ಲಿ ಹೂಡಿರುವ ದಾವೆಯ ವಿಚಾರಣೆಗೆ ಎರಡು ವಾರ ಬಾಕಿ ಇರುವಂತೆಯೇ ಈ ದಿಢೀರ್ ನಿರ್ಧಾರ ಅಚ್ಚರಿ ಮೂಡಿಸಿದೆ.

ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್‍ಗೆ ಸಲ್ಲಿಸಿರುವ ಹೇಳಿಕೆಯಲ್ಲಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ, ಟ್ವಿಟ್ಟರ್ ಜತೆಗಿನ ಒಪ್ಪಂದ ಗೌರವಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

ಕಳೆದ ಏಪ್ರಿಲ್‍ನಲ್ಲಿ ಟೆಸ್ಲಾ ಮುಖ್ಯಸ್ಥರು ಮಾಡಿಕೊಂಡಿದ್ದ ಖರೀದಿ ಒಪ್ಪಂದವನ್ನು ರದ್ದುಪಡಿಸುವ ಸಂಬಂಧ ನಡೆಯುತ್ತಿದ್ದ ವಿವಾದಕ್ಕೆ ಇದೀಗ ಹೊಸ ಟ್ವಿಸ್ಟ್ ಲಭಿಸಿದಂತಾಗಿದೆ. ಈ ಅತ್ಯಂತ ಪ್ರಭಾವಿ ಸಾಮಾಜಿಕ ಜಾಲತಾಣದ ಮಾಲಕತ್ವ ಎಲಾನ್ ಮಸ್ಕ್ ಕೈ ಸೇರಿದರೆ, ಅದು ಮತ್ತಷ್ಟು ನಿಂದತಾತ್ಮಕ ಹಾಗೂ ತಪ್ಪು ಮಾಹಿತಿಗಳ ಪೋಸ್ಟ್‌ಗೆ ಬಾಗಿಲು ತೆರೆದಂತಾಗುತ್ತದೆ ಎಂಬ ಆತಂಕವನ್ನು ಹಲವು ಮಂದಿ ಹೋರಾಟಗಾರರು ವ್ಯಕ್ತಪಡಿಸಿದ್ದರು.

ಎಲಾನ್ ಮಸ್ಕ್ ಅವರ ಹೊಸ ನಿರ್ಧಾರದಿಂದಾಗಿ ಟ್ವಿಟ್ಟರ್ ಷೇರುಗಳ ಮೌಲ್ಯ ಏರಿಕೆಯಾಗಿದೆ. ನಿಯಂತ್ರಣಾತ್ಮಕ ಫೈಲಿಂಗ್ ಬಳಿಕ ಪುನಾರಂಭವಾಗಿದ್ದ ಟ್ವಿಟ್ಟರ್ ಷೇರು ವಹಿವಾಟನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ.

ಟೆಸ್ಲಾ ಮುಖ್ಯಸ್ಥ ಈ ಹಿಂದೆ ಮಾಡಿಕೊಂಡಿದ್ದ ಒಪ್ಪಂದದ ಮೊತ್ತವಾದ ಪ್ರತಿ ಷೇರಿಗೆ 54.20 ಡಾಲರ್ ದರದಲ್ಲಿ ಖರೀದಿಸುವ ಇಗಿತವನ್ನು ಎಲಾನ್ ಮಸ್ಕ್ ತಮ್ಮ ಪತ್ರದಲ್ಲಿ ವ್ಯಕ್ತಪಡಿಸಿದ್ದಾರೆ ಎಂದು ಟ್ವಿಟ್ಟರ್ ದೃಢಪಡಿಸಿದೆ. ಈ ಬಗ್ಗೆ ndtv.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News