ಕಾಸರಗೋಡು: ಅ.8, 9ರಂದು ‘ಕಲೋಪಾಸನೆ’

Update: 2022-10-06 11:23 GMT

ಕಾಸರಗೋಡು: ಕರ್ನಾಟಕ ಗಮಕ ಕಲಾ ಪರಿಷತ್‌ನ ಕೇರಳ ಗಡಿನಾಡ ಘಟಕ, ಕಾಸರಗೋಡು ಇದರ ವತಿಯಿಂದ ಗಮಕ-ಸಂಗೀತ-ಹರಿಕಥೆ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ‘ಕಲೋಪಾಸನೆ’ ಅ.8 ಮತ್ತು 9ರಂದು ಕಾಸರಗೋಡಿನ ಬದಿಬಾಗಿಲುವಿನಲ್ಲಿರುವ ಹವ್ಯಕ ಸಭಾಭವನದಲ್ಲಿ ಜರುಗಲಿದೆ.

ಅ.8ರಂದು ಅಪರಾಹ್ನ 2ಕ್ಕೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ ಕಾರ್ಯಕ್ರಮ ಉದ್ಘಾಟಿಸುವರು. ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಟಿ.ಶಂಕರನಾಯಣ ಭಟ್ ಅಧ್ಯಕ್ಷತೆ ವಹಿಸುವರು. 3:30ರಿಂದ ಶ್ರೀರಾಮ ನಿರ್ಯಾಣ ಹರಿಕತೆ ನಡೆಯಲಿದೆ. 4:30ಕ್ಕೆ ಗಮಕ ವಾಚನ-ವ್ಯಾಖ್ಯಾನ ನಡೆಯಲಿದೆ.

ಅ.9ರಂದು ಬೆಳಗ್ಗೆ ಕರ್ನಾಟಕ ಯಕ್ಷಗಾನ ಅಕಾಡಮಿಯ ಅಧ್ಯಕ್ಷ ಕರ್ನಾಟಕ ಯಕ್ಷನಾ ಅಕಾಡಮಿಯ ಅಧ್ಯಕ್ಷ ಡಾ.ಬಿ.ಎಲ್.ಹೆಗಡೆ ದೀಪ ಪ್ರಜ್ವಲನ ಮಾಡುವರು. ಬಳಿಕ ಸಾಂಪ್ರದಾಯಿಕ ಹಾಡುಗಾರಿಕೆ, ಗಮಕ ವಾಚನ-ವ್ಯಾಖ್ಯಾನ ಜರುಗಲಿದೆ. ಮಧ್ಯಾಹ್ನ 1:30ಕ್ಕೆ ‘ಕರ್ಣಾರ್ಜುನ’ ತಾಳೆಮದ್ದಲೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News