ದಿನಕ್ಕೆ 2 ಮಿಲಿಯನ್ ಬ್ಯಾರೆಲ್ ತೈಲ ಉತ್ಪಾದನೆ ಕಡಿತಕ್ಕೆ ಒಪೆಕ್ ಒಪ್ಪಿಗೆ

Update: 2022-10-06 17:30 GMT

ರಿಯಾದ್, ಅ.6: ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ(ಒಪೆಕ್) ಹಾಗೂ ರಶ್ಯ ಸೇರಿದಂತೆ ಅದರ ಮಿತ್ರರಾಷ್ಟ್ರಗಳು ನವೆಂಬರ್ನಿಂದ ದಿನಕ್ಕೆ 2 ಮಿಲಿಯನ್ ಬ್ಯಾರೆಲ್ ತೈಲ ಉತ್ಪಾದನೆ ಕಡಿತಕ್ಕೆ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ತೈಲ ದರದಲ್ಲಿ ಏರಿಕೆಯಾಗಿದೆ ಎಂದು ವರದಿಯಾಗಿದೆ.

‌ವಿಯೆನ್ನಾದಲ್ಲಿ ನಡೆದ ಒಪೆಕ್ +(ಒಪೆಕ್ ಹಾಗೂ ಅದರ ಮಿತ್ರರಾಷ್ಟ್ರಗಳು) ಜಂಟಿ ಸಚಿವರ ಮೇಲ್ವಿಚಾರಣಾ ಸಮಿತಿಯ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಈ ನಿರ್ಧಾರವು ಜಾಗತಿಕ ಆರ್ಥಿಕ ಹಿಂಜರಿತ, ಅಮೆರಿಕದ ಬಡ್ಡಿದರ ಏರಿಕೆ, ಡಾಲರ್ ಬಲಿಷ್ಟಗೊಳ್ಳುವ ಭಯದಿಂದ 3 ತಿಂಗಳ ಹಿಂದೆ 120 ಡಾಲರ್ನಿಂದ 90 ಡಾಲರ್ಗೆ ಕುಸಿದ ತೈಲ ದರದಲ್ಲಿ ಚೇತರಿಕೆಗೆ ಪ್ರೇರೇಪಿಸಬಹುದು ಎಂದು ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.

ಸೌದಿ ಅರೆಬಿಯಾದಂತಹ ಸದಸ್ಯ ದೇಶಗಳಿಂದ ಸ್ವಯಂಪ್ರೇರಿತ  ಕಡಿತಗಳು ಇದರಲ್ಲಿ ಸೇರಿವೆಯೇ ಎಂಬುದು ಸ್ಪಷ್ಟವಾಗಿಲ್ಲ . ಈ ನಿರ್ಧಾರ ಪ್ರಕಟವಾದೊಡನೆ, ತೈಲ ದರದಲ್ಲಿ ಏರಿಕೆಯಾಗಿದ್ದು ಬ್ರೆಂಟ್ ಕಚ್ಛಾತೈಲದ ದರ 0.38% ಏರಿದೆ ಎಂದು ವರದಿ ಹೇಳಿದೆ. ಸಭೆಯ ಬಳಿಕ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಸೌದಿ ಅರೆಬಿಯಾದ ಇಂಧನ ಸಚಿವ ಯುವರಾಜ ಅಬ್ದುಲಝೀಝ್ ಬಿನ್ ಸಲ್ಮಾನ್, ಸುಸ್ಥಿರ ತೈಲ ಮಾರುಕಟ್ಟೆಯನ್ನು ಉಳಿಸಿಕೊಳ್ಳುವುದಕ್ಕೆ ಸಂಘಟನೆ ಆದ್ಯತೆ ನೀಡುತ್ತದೆ ಎಂದಿದ್ದಾರೆ.

ಹೆಚ್ಚುವರಿ ತೈಲ ಉತ್ಪಾದನೆಗೆ ಅಮೆರಿಕದ ಒತ್ತಡದ ನಡುವೆಯೇ ಒಪೆಕ್ನ ಈ ನಿರ್ಧಾರ ಹೊರಬಿದ್ದಿದ್ದು ಈ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾಕ್ ಸುಲಿವಾನ್ ` ದೂರದೃಷ್ಟಿಯ ಕೊರತೆಯಿರುವ ಒಪೆಕ್+ನ ನಿರ್ಧಾರದಿಂದ ಅಧ್ಯಕ್ಷರು ನಿರಾಶೆಗೊಂಡಿದ್ದಾರೆ' ಎಂದಿದ್ದಾರೆ. ಉಕ್ರೇನ್ ಮೇಲಿನ ರಶ್ಯದ ಆಕ್ರಮಣದಿಂದ  ಜಾಗತಿಕ ಆರ್ಥಿಕತೆಯು ನಿರಂತರ ಋಣಾತ್ಮಕ ಪರಿಣಾಮ ಎದುರಿಸುತ್ತಿರುವ ಸಂದರ್ಭದಲ್ಲಿ ಮತ್ತು ಈಗಾಗಲೇ ಅಧಿಕ  ತೈಲ ದರದಿಂದ ಕಂಗೆಟ್ಟಿರುವ ದೇಶಗಳಿಗೆ ಈ ನಿರ್ಧಾರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಅಮೆರಿಕ ಅಧ್ಯಕ್ಷ  ಬೈಡನ್ ಅವರ ಮುಖ್ಯ ಆರ್ಥಿಕ ಸಲಹೆಗಾರ ಬ್ರಿಯಾನ್ ಡೀಸ್ ಹೇಳಿದ್ದಾರೆ.

ಮಾರುಕಟ್ಟೆಯಲ್ಲಿ ಇಂಧನ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಹಾಗೂ ತೈಲ ದರ ಕಡಿಮೆಯಾಗುವಂತೆ ಅಮೆರಿಕ ಕ್ರಮ ಕೈಗೊಳ್ಳಲಿದೆ ಎಂದು ಅಮೆÉಕ್ ಒ¥ಅನ್ನು ರಾಜಕೀಯ ಸಂಘಟನೆಯಾಗಿ ಬಳಸುತ್ತಿಲ್ಲ ಮತ್ತು ತಾಂತ್ರಿಕವಾಗಿ ನಿರ್ಧಾರ ಕೈಗೊಳ್ಳಲಾಗುತ್ತದೆಯೇ ಹೊರತು ಯಾವುದೇ ರಾಜಕೀಯ ರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಹೇಳಿದ್ದಾರೆ. ನಿರ್ಧಾರಕ್ಕೆ ಅವಕಾಶವಿಲ್ಲ ಎಂದು ಯುಎಇಯ ಇಂಧನ ಸಚಿವ ಸುಹಾಲಿ ಅಲ್-ಮಝ್ರೂಯಿ ಸುದ್ಧಿಗೋಷ್ಟಿಯಲ್ಲಿ  ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News