×
Ad

ತಮ್ಮ ಉತ್ತರಾಧಿಕಾರಿಯನ್ನು ನೇಮಿಸುವಂತೆ ಸಿಜೆಐ ಯು.ಯು. ಲಲಿತ್ ಅವರಿಗೆ ಕಾನೂನು ಸಚಿವಾಲಯ ಸೂಚನೆ

Update: 2022-10-07 10:22 IST
ಯು.ಯು. ಲಲಿತ್ (Photo:twitter)

ಹೊಸದಿಲ್ಲಿ, ಅ. 7: ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಹುದ್ದೆಗೆ ಉತ್ತರಾಧಿಕಾರಿ ಶಿಫಾರಸು ಮಾಡುವಂತೆ ಸಿಜೆಐ ಯು.ಯು. ಲಲಿತ್ ಅವರಿಗೆ ಕೇಂದ್ರ ಕಾನೂನು ಹಾಗೂ ನ್ಯಾಯ ಸಚಿವಾಲಯ ಶುಕ್ರವಾರ ಸೂಚಿಸಿದೆ.

‘‘ಸಿಜೆಐ ಹಾಗೂ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರ ನೇಮಕಾತಿ ಕುರಿತ ವಿಧಿ ವಿಧಾನದ ಪ್ರಕಾರ ಕಾನೂನು ಹಾಗೂ ನ್ಯಾಯ ಖಾತೆಯ ಸಚಿವರು ಶುಕ್ರವಾರ ಉತ್ತರಾಧಿಕಾರಿಯ ನೇಮಕಾತಿಗೆ ಶಿಫಾರಸು ಕಳುಹಿಸುವಂತೆ ಸಿಜೆಐಗೆ ಪತ್ರ ರವಾನಿಸಿದ್ದಾರೆ’’ ಎಂದು ಟ್ವಿಟರ್‌ನಲ್ಲಿ ಸಚಿವಾಲಯ ತಿಳಿಸಿದೆ.  ಮುಖ್ಯ ನ್ಯಾಯಮೂರ್ತಿ ಲಲಿತ್ ಅವರು ನವೆಂಬರ್ ೮ರಂದು ನಿವೃತ್ತರಾಗಲಿದ್ದಾರೆ. ಹಿರಿತನದ ಪ್ರಕಾರ ಮುಂದಿನ ಸಾಲಿನಲ್ಲಿ ಇರುವ ನ್ಯಾಯಮೂರ್ತಿ ಡಿ.ವೈ.

ಚಂದ್ರಚೂಡ ಅವರು ಮುಂದಿನ ಸಿಜೆಐ ಆಗಲಿದ್ದಾರೆ. ಒಂದು ವೇಳೆ ಅವರು ಸಿಜೆಐಯಾದರೆ, ಅವರು ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಲಿದ್ದಾರೆ. ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಕೊಲೀಜಿಯಂ ಉಚ್ಚ ನ್ಯಾಯಾಲಯ ಹಾಗೂ ಸುಪ್ರೀಂ ಕೋರ್ಟ್‌ನ ಹುದ್ದೆಗಳಿಗೆ  ನಾಲ್ವರು ವ್ಯಕ್ತಿಗಳ ಹೆಸರನ್ನು ಪರಿಶೀಲಿಸುತ್ತಿರುವಾಗ ಮುಂದಿನ ಸಿಜೆಐಯ ನೇಮಕಾತಿ ಪ್ರಕ್ರಿಯೆ ಆರಂಭಗೊಂಡಿದೆ. ಸಾಮಾನ್ಯವಾಗಿ ಮುಂದಿನ ಸಿಜೆಐಯ ಆಯ್ಕೆ ನಡೆಯುತ್ತಿರುವಾಗ ನ್ಯಾಯಮೂರ್ತಿಗಳ ಹುದ್ದೆಗೆ ಯಾವುದೇ ಶಿಫಾರಸು ಮಾಡುವುದಿಲ್ಲ   ಎಂದು ‘ದಿ ಹಿಂದೂ’ ಹೇಳಿದೆ. ಕೊಲೀಜಿಯಂನ ನ್ಯಾಯಾಧೀಶರಲ್ಲಿ ಒಬ್ಬರು ಸಂಜೆ ವರೆಗೆ ಪ್ರಕರಣದ ವಿಚಾರಣೆ ನಡೆಸಿರುವುದರಿಂದ ಸೆಪ್ಟಂಬರ್ ೩೦ರಂದು ನಡೆಯಲಿದ್ದ ಕೊಲೀಜಿಯಂನ ನಡೆಯಲಿಲ್ಲ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News