×
Ad

ಉತ್ತರಪ್ರದೇಶ: ದಸರಾ ರ‍್ಯಾಲಿಯಲ್ಲಿ ಕತ್ತಿಗಳು, ಬಂದೂಕುಗಳನ್ನು ಝಳಪಿಸಿದ ಜನ,ಇದೊಂದು 'ಸಂಪ್ರದಾಯ'ಎಂದ ಪೊಲೀಸರು

Update: 2022-10-07 11:55 IST
Photo:NDTV

ಸಿದ್ಧಾರ್ಥ್ ನಗರ: ಉತ್ತರ ಪ್ರದೇಶದಲ್ಲಿ ಬುಧವಾರ ನಡೆದ ದಸರಾ ರ್ಯಾಲಿಯಲ್ಲಿ ಸೇರಿದ್ದ ಭಾರೀ ಜನ ಸಮೂಹವು ಕೇಸರಿ ಧ್ವಜಗಳನ್ನು ಹಿಡಿದು “ಜೈ ಶ್ರೀ ರಾಮ್” ಎಂದು ಘೋಷಣೆಗಳನ್ನು ಕೂಗುತ್ತಾ ಕತ್ತಿ ಹಾಗೂ ಬಂದೂಕುಗಳನ್ನು ಝಳಪಿಸಿದೆ  ಎಂದು NDTV ವರದಿ ಮಾಡಿದೆ.

ದಸರಾ ಅಥವಾ ವಿಜಯ ದಶಮಿಯಂದು ಇಂತಹ ಮೆರವಣಿಗೆಗಳನ್ನು ಕೈಗೊಳ್ಳುವುದು ಸಾಂಪ್ರದಾಯಿಕ ಪದ್ಧತಿಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಉತ್ತರ ಪ್ರದೇಶದ ಸಿದ್ಧಾರ್ಥ್ ನಗರ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದೆ.

ಈಗ ವ್ಯಾಪಕ ವೈರಲ್ ಆಗಿರುವ ಕೆಲವು ವೀಡಿಯೊಗಳಲ್ಲಿ ರ್ಯಾಲಿಯಲ್ಲಿ ಭಾಗವಹಿಸಿದ್ದವರು ತಮ್ಮ ಕತ್ತಿಗಳು ಹಾಗೂ ಬಂದೂಕುಗಳನ್ನು ಝಳಪಿಸುತ್ತಿರುವುದು ಕಂಡುಬಂದಿದೆ

ಕತ್ತಿ, ಬಂದೂಕುಗಳನ್ನು ಹಿಡಿದಿದ್ದ ವ್ಯಕ್ತಿಗಳು ಧಾರ್ಮಿಕ ಗೀತೆಗಳಿಗೆ ನೃತ್ಯ ಮಾಡುತ್ತಿರುವುದು ಹಾಗೂ  "ಜೈ ಶ್ರೀ ರಾಮ್" ಘೋಷಣೆಗಳನ್ನು ಕೂಗುತ್ತಿರುವುದು ಕಂಡುಬಂದಿದೆ.

ಕೆಲವರು ವಿಡಿಯೋ ಮಾಡುತ್ತಿದ್ದು, ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಕಂಡು ಬಂದಿದೆ.

ಕತ್ತಿ ಹಾಗೂ ಬಂದೂಕುಗಳನ್ನು ಹಿಡಿದು ರ್ಯಾಲಿಯಲ್ಲಿ ಭಾಗವಹಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಲವು ಮಂದಿ ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಿದ್ದಾರೆ.

ಅಂತಹ ಒಂದು ಟ್ವೀಟ್‌ಗೆ ಪ್ರತಿಕ್ರಿಯಿಸಿದ ಪೊಲೀಸರು, ದಸರಾದಂದು ಆಯುಧಗಳೊಂದಿಗೆ ಮೆರವಣಿಗೆ ನಡೆಸುವುದು ಸಂಪ್ರದಾಯವಾಗಿದೆ ಎಂದು ಹೇಳಿದ್ದಾರೆ.

ಇತರ ಆರೋಪಗಳ ಕುರಿತು ತನಿಖೆ ನಡೆಸಲು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News