ಉಡುಪಿ: ಅ.11ರಂದು ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

Update: 2022-10-07 15:23 GMT

ಉಡುಪಿ, ಅ.7: ಇದೇ ಅ.11ರಂದು ಉಡುಪಿ ಜಿಲ್ಲೆಯ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.

110ಕೆವಿ ಕಾರ್ಕಳ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆವಿ ಮುಂಡ್ಲಿ ಫೀಡರ್‌ನಲ್ಲಿ ಲೈನಿನ ನಿರ್ವಹಣೆ ಕಾರ್ಯ ಹಮ್ಮಿಕೊಂಡಿರುವುದರಿಂದ ಬೆಳಗ್ಗೆ 9ರಿಂದ ಅಪರಾಹ್ನ 3 ಗಂಟೆಯವರೆಗೆ ಮುಂಡ್ಲಿ, ದುರ್ಗ, ತೆಳ್ಳಾರ್, ಪೊಲ್ಲಾರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಉಡುಪಿ ನಿಟ್ಟೂರಿನಲ್ಲಿರುವ 1­X10 ಎಂವಿಎ, 110/11ಕೆವಿ ಪರಿವರ್ತಕ ವನ್ನು 1X20 ಎಂವಿಎಗೆ  ಉನ್ನತೀಕರಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಸದರಿ ಕಾಮಗಾರಿಗೆ ಸಂಬಂಧಿಸಿದಂತೆ 11ಕೆ ಯು.ಜಿ ಕೇಬಲ್ ಹಾಗೂ ಕಂಟ್ರೋಲ್ ಕೇಬಲ್‌ಗಳನ್ನು ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ, 110/33/11ಕೆವಿ ನಿಟ್ಟೂರು  ಸ್ಥಾವರದಿಂದ ಹೊರಡುವ ಎಲ್ಲಾ 11ಕೆವಿ ಫೀಡರಿನಲ್ಲಿ ಉಡುಪಿ ನಗರ ಪ್ರದೇಶಗಳಾದ ಅಂಬಲಪಾಡಿ, ಕಿನ್ನಿಮುಲ್ಕಿ, ಕನ್ನರ್ಪಾಡಿ, ಅಜ್ಜರಕಾಡು, ಬನ್ನಂಜೆ, ಕೊಡವೂರು, ಆದಿಉಡುಪಿ, ಮೂಡಬೆಟ್ಟು, ಕಂಗನಬೆಟ್ಟು, ಕಲ್ಮಾಡಿ, ಮೇಲ್ಪೇಟೆ, ಮಲ್ಪೆ, ತೆಂಕನಿಡಿಯೂರು, ಬಡಾ ನಿಡಿಯೂರು, ಕೊಳ, ತೊಟ್ಟಂ, ನಿಟ್ಟೂರು, ಅಡ್ಕದಕಟ್ಟೆ, ಬಾಳಿಗ ಫಿಶ್‌ನೆಟ್, ಪುತ್ತೂರು, ಪೆರಂಪಳ್ಳಿ, ದೊಡ್ಡಣಗುಡ್ಡೆ, ಕಲ್ಯಾಣಪುರ, ಶಾಂತಿವನ, ಪೊಟ್ಟುಕೆರೆ, ಗರಡಿಮಜಲು, ತೆಂಕನಿಡಿಯೂರು, ಸುಬ್ರಹ್ಮಣ್ಯನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 9ರಿಂದ ಸಂಜೆ 5ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

110/33/11ಕೆವಿ ಮಣಿಪಾಲ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆವಿ ಕೆ.ಎಂ.ಎಫ್ ಮತ್ತು ಮೂಡುಬೆಳ್ಳೆ ಫೀಡರಿನಲ್ಲಿ ಹಾಗೂ 110/33/11ಕೆವಿ ಹಿರಿಯಡ್ಕ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆವಿ ಮಾಣೈ ಫೀಡರಿನಲ್ಲಿ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಈಶ್ವರನಗರ, ಸರಳೇಬೆಟ್ಟು, ಅರ್ಬಿ, ಪ್ರಗತಿನಗರ, 80ಬಡಗುಬೆಟ್ಟು, ಮಣಿಪುರ, ಮೂಡುಬೆಳ್ಳೆ, ಮರ್ಣೆ, ಕಟ್ಟಿಂಗೇರಿ, ಕೆಮ್ತೂರು, ಹರಿಖಂಡಿಗೆ, ವಡ್ಜ, ಸಾಣೆಕಲ್ಲು, ಮಾಣೈ, ನವಗ್ರಾಮ, ಪಂಚನಬೆಟ್ಟು, ಮೂಂಡುಜೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಬ್ರಹ್ಮಾವರ ತಾಲೂಕಿನ ಬಾರ್ಕೂರಿನಲ್ಲಿ ಕೊಂಕಣ್ ರೈಲ್ವೆ ಕಾರ್ಪೋರೇಶನ್ ಲಿ.ನವರು ರೈಲ್ವೆ ಮಾರ್ಗದ ವಿದ್ಯುದೀಕರಣಕ್ಕಾಗಿ ನಿರ್ಮಿಸುತ್ತಿರುವ 110/27ಕೆವಿ ವಿದ್ಯುತ್ ಉಪಕೇಂದ್ರಕ್ಕೆ ವಿದ್ಯುತ್ ಸರಬರಾಜು ಮಾಡಲು ನಿರ್ಮಿಸ ಲಾಗುತ್ತಿರುವ 110ಕೆ ವಿದ್ಯುತ್ ಕೇಂದ್ರ(ಮೀಟರಿಂಗ್) ಮತ್ತು 110ಕೆವಿ ಲಿಲೋ ವಿದ್ಯುತ್ ಪ್ರಸರಣ ಮಾರ್ಗದ ಕಾಮಗಾರಿ ಹಮ್ಮಿಕೊಂಡಿರುವುದರಿಂದ 110/11ಕೆವಿ ಮಧುವನ ಉಪವಿದ್ಯುತ್ ಕೇಂದ್ರದಿಂದ ಹೊರಡುವ 11ಕೆವಿ ಬಾರ್ಕೂರು ಎಕ್ಸ್‌ಪ್ರೆಸ್ ಮತ್ತು ಮಂದಾರ್ತಿ ಫೀಡರಿನಲ್ಲಿ ಹೊಸಾಳ, ಕಚ್ಚೂರು, ರಂಗನಕೆರೆ, ಹೇರಾಡಿ, ಹನೆಹಳ್ಳಿ, ಕೂರಾಡಿ, ನಡೂರು, ಪಡು ನೀಲಾವರ, ಬೆಣ್ಣೆಕುದ್ರು, ಹೆಗ್ಗುಂಜೆ, ಮೈರ್‌ಕೋಮೆ, ಶಿರೂರು, ವಾಜನೂರು, ಆವರ್ಸೆ, ಮುದ್ದುಮನೆ, ಕಿರಾಡಿ, ನಂಚಾರು, ಹಿಲಿಯಾಣ, ಆಮ್ರಕಲ್ಲು, ನೀರ್‌ಜೆಡ್ಡು, ಮಂದಾರ್ತಿ, ಮುಂಡಾಡಿ, ಕಾಡೂರು, ನಡೂರು, ಹೆಬ್ಬಾಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 4ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

110/11ಕೆವಿ ಬ್ರಹ್ಮಾವರ ಉಪವಿದ್ಯುತ್ ಕೇಂದ್ರದಿಂದ ಹೊರಡುವ 11ಕೆವಿ ಚೇರ್ಕಾಡಿ, ಕೊಕ್ಕರ್ಣೆ ಹಾಗೂ 110/11ಕೆವಿ ನಿಟ್ಟೂರು ಉಪವಿದ್ಯುತ್ ಕೇಂದ್ರದಿಂದ ಹೊರಡುವ 11ಕೆವಿ ಕಲ್ಯಾಣಪುರ ಮತ್ತು ಶಾಂತಿವನ ಫೀಡರಿನಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಹೇರೂರು, ಚಾಂತಾರು, ಕುಂಜಾಲು, ಆರೂರು, ಚೇರ್ಕಾಡಿ, ಹಲುವಳ್ಳಿ, ಪಡುನೀಲಾವರ, ಎಳ್ಳಂಪಳ್ಳಿ, ತಡೆಕಲ್ಲು, ಪ್ರಗತಿನಗರ, ಜಾರ್ಜೆಡ್ಡು, ಗಣೇಶ್ ಕಲಾಮಂದಿರ, ಕೆ.ಕೆ. ಫಾರ್ಮ್ಸ್, ಸಂತೆಕಟ್ಟೆ, ನೇಜಾರು, ಮೂಡುತೋನ್ಸೆ, ಕೋಡಿಬೆಂಗ್ರೆ, ಗೋಪಾಲಪುರ, ಶಾಂತಿವನ, ಗರಡಿ ಮಜಲು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 9:30ರಿಂದ ಸಂಜೆ 5:30ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

110/11ಕೆವಿ ನಂದಿಕೂರು ಉಪವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆವಿ ಎಲ್ಲೂರು, ಯಾಶ್‌ಟೆಕ್, ಬೆಳಪು ಫೀಡರಿನಲ್ಲಿ ಹಾಗೂ 110/11ಕೆವಿ ಮಣಿಪಾಲ ಎಂ.ಯು.ಎಸ್.ಎಸ್‌ನಿಂದ ಹೊರಡುವ 11ಕೆವಿ ಉದ್ಯಾವರ-2 ಫೀಡರಿನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಯಾಶ್‌ಟೆಕ್, ಪಣಿಯೂರು, ಬರ್ಪಾಣಿ, ಎಲ್ಲೂರು, ಅದಮಾರು, ಕುಂಜನಗುಡ್ಡೆ, ಗುರುಗುಂಡಿ, ಕುತ್ಯಾರು, ಬೆಳಪು, ಇಂಡಸ್ಟ್ರಿಯಲ್ ಲೇಔಟ್, ಅಚ್ಚಡ, ಕಟಪಾಡಿ, ಮಟ್ಟು, ಯೇಣಗುಡ್ಡೆ, ಕೋಟೆ, ಪೊಸಾರು, ಅಗ್ರಹಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 9ರಿಂದ ಸಂಜೆ 5:30ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

110/33/11ಕೆವಿ ಕುಂದಾಪುರ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆವಿ ಕೋಟೇಶ್ವರ ಮತ್ತು ತೆಕ್ಕಟ್ಟೆ ಮಾರ್ಗಗಳಲ್ಲಿ ಟ್ರೀಟಮ್ಮಿಂಗ್ ಮತ್ತು ಮಾರ್ಗ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಹಂಗ್ಳೂರು, ಕೋಟೇಶ್ವರ, ಕುಂಭಾಶಿ, ತೆಕ್ಕಟ್ಟೆ, ಬೀಜಾಡಿ ಮತ್ತು ಗೋಪಾಡಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆ ಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಮೆಸ್ಕಾಂನೊಂದಿಗೆ ಸಹಕರಿಸುವಂತೆ ಪ್ರಕಟಣೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News