ಶೀಘ್ರ ಆರ್‌ಬಿಐನಿಂದ ಪ್ರಾಯೋಗಿಕವಾಗಿ ಡಿಜಿಟಲ್ ರೂಪಾಯಿ ಬಿಡುಗಡೆ

Update: 2022-10-07 16:25 GMT

ಮುಂಬೈ,ಅ.7: ನಿರ್ದಿಷ್ಟ ಬಳಕೆಯ ಪ್ರಕರಣಗಳಿಗಾಗಿ ಡಿಜಿಟಲ್ ರೂಪಾಯಿ ಅಥವಾ ಇ-ರುಪೀಯನ್ನು ಶೀಘ್ರವೇ ಪ್ರಾಯೋಗಿಕವಾಗಿ ಆರಂಭಿಸುವುದಾಗಿ ಆರ್‌ಬಿಐ ಶುಕ್ರವಾರ ಪ್ರಕಟಿಸಿದೆ.

ಇಂತಹ ಪ್ರಾಯೋಗಿಕ ಯೋಜನೆಗಳ ವ್ಯಾಪ್ತಿಯು ವಿಸ್ತರಿಸುತ್ತಿದ್ದಂತೆ ಇ-ರುಪೀಯ ನಿರ್ದಿಷ್ಟ ವೈಶಿಷ್ಟಗಳು ಮತ್ತು ಪ್ರಯೋಜನಗಳ ಬಗ್ಗೆ ಆರ್‌ಬಿಐ ಕಾಲಕಾಲಕ್ಕೆ ಮಾಹಿತಿಗಳನ್ನು ಒದಗಿಸುವುದನ್ನು ಮುಂದುವರಿಸಲಿದೆ ಎಂದು ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ)ಯ ಪರಿಕಲ್ಪನೆ ಟಿಪ್ಪಣಿಯಲ್ಲಿ ಆರ್‌ಬಿಐ ತಿಳಿಸಿದೆ.

ತಂತ್ರಜ್ಞಾನ ಮತ್ತು ವಿನ್ಯಾಸ ಆಯ್ಕೆಗಳು,ಡಿಜಿಟಲ್ ರೂಪಾಯಿಯ ಸಂಭವನೀಯ ಬಳಕೆಗಳು,ವಿತರಣಾ ಕಾರ್ಯವಿಧಾನಗಳು ಸೇರಿದಂತೆ ಪ್ರಮುಖ ಪರಿಗಣನೆಗಳನ್ನೂ ಟಿಪ್ಪಣಿಯಲ್ಲಿ ಚರ್ಚಿಸಲಾಗಿದೆ.

ಬ್ಯಾಂಕಿಂಗ್ ವ್ಯವಸ್ಥೆ,ಹಣಕಾಸು ನೀತಿ,ಹಣಕಾಸು ಸ್ಥಿರತೆಯ ಮೇಲೆ ಸಿಬಿಡಿಸಿ ಜಾರಿಯ ಪರಿಣಾಮಗಳನ್ನು ಪರಿಶೀಲಿಸಲಾಗುವುದು ಮತ್ತು ಗೋಪ್ಯತೆ ವಿಷಯಗಳನ್ನು ವಿಶ್ಲೇಷಿಸಲಾಗುವುದು ಎಂದು ಟಿಪ್ಪಣಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News