ಟಿ-90 ಟ್ಯಾಂಕ್‌ನ ಬ್ಯಾರೆಲ್ ಸಿಡಿದು ಇಬ್ಬರು ಸೇನಾ ಸಿಬ್ಬಂದಿಗಳ ಸಾವು

Update: 2022-10-07 16:35 GMT

ಝಾನ್ಸಿ (ಮ.ಪ್ರ),ಅ.7: ಇಲ್ಲಿಗೆ ಸಮೀಪದ ಬಬಿನಾ ಫೀಲ್ಡ್ ಫೈರಿಂಗ್ ರೇಂಜ್‌ನಲ್ಲಿ ಗುರುವಾರ ವಾರ್ಷಿಕ ಫೈರಿಂಗ್ ಕವಾಯತಿನ ಸಂದರ್ಭದಲ್ಲಿ ಟಿ-90 ಯುದ್ಧಟ್ಯಾಂಕ್‌ನ ಬ್ಯಾರೆಲ್ ಸಿಡಿದು ಇಬ್ಬರು ಸೇನಾ ಸಿಬ್ಬಂದಿಗಳು ಮೃತಪಟ್ಟಿದ್ದಾರೆ.

ಗಾಯಾಳುಗಳಿಗೆ ತಕ್ಷಣ ವೈದ್ಯಕೀಯ ನೆರವು ಒದಗಿಸಲಾಗಿತ್ತು ಮತ್ತು ಬಬಿನಾದ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಕಮಾಂಡರ್ ಮತ್ತು ಗನ್ನರ್ ತೀವ್ರ ಸುಟ್ಟಗಾಯಗಳಿಂದ ಮೃತಪಟ್ಟಿದ್ದಾರೆ. ಚಾಲಕ ಅಪಾಯದಿಂದ ಪಾರಾಗಿದ್ದು,ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.

ಮೂವರು ಸೇನಾ ಸಿಬ್ಬಂದಿಗಳು ಟ್ಯಾಂಕನ್ನು ನಿರ್ವಹಿಸುತ್ತಿದ್ದರು. ಘಟನೆಯ ಕುರಿತು ತನಿಖೆ ನಡೆಯುತ್ತಿದೆ ಎಂದು ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News