ಅ.8ರಂದು ಗಾಂಧಿ ಸೆಂಟರ್‌ನಲ್ಲಿ ವಿನೋಬಾ ಭಾವೆ ಕುರಿತ ಕಾರ್ಯಕ್ರಮ

Update: 2022-10-07 16:30 GMT
ಫೋಟೊ - ವಿಕಿಪೀಡಿಯ

ಉಡುಪಿ, ಅ.7: ಮಾಹೆಯ ಗಾಂಧಿಯನ್ ಸೆಂಟರ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್) ಆಶ್ರಯದಲ್ಲಿ ಆಚಾರ್ಯ ವಿನೋಬಾ ಭಾವೆ ಕುರಿತ ವಿಶೇಷ ಕಾರ್ಯಕ್ರಮವೊಂದು ಅ.8ರ ಶನಿವಾರ ಬೆಳಗ್ಗೆ 11.15ಕ್ಕೆ ಮಣಿಪಾಲದ ಹಳೆಯ ಟ್ಯಾಪ್ಮಿ ಕಟ್ಟಡದಲ್ಲಿ  ನಡೆಯಲಿದೆ.

ಗಾಂಧಿ ಮತ್ತು ವಿನೋಬಾ ಭಾವೆ ಅವರ ವಿಚಾರಗಳಲ್ಲಿ ಆಸಕ್ತರಾದ  ವಿಷಂಭರನಾಥ ಅಗರವಾಲ್ ಭಾವೆ ಕುರಿತು ವಿಶೇಷ ಉಪನ್ಯಾಸವನ್ನು ನಡೆಸಿಕೊಡಲಿದ್ದಾರೆಎಂದು ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಚಾರ್ಯ ವಿನೋಬಾ ಭಾವೆ ಅಹಿಂಸಾ ಹೋರಾಟಗಾರರು, ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸುಧಾರಕರು ಮತ್ತು ಆಧ್ಯಾತ್ಮಿಕ ಗುರುಗಳು. ಮಹಾತ್ಮ ಗಾಂಧಿಯವರ ಕಟ್ಟಾ ಅನುಯಾಯಿಯಾಗಿದ್ದ ವಿನೋಬಾ ಅವರು ಅಹಿಂಸೆ ಮತ್ತು ಸಮಾನತೆಯ ಸಿದ್ಧಾಂತಗಳನ್ನು ಎತ್ತಿ ಹಿಡಿದವರು. ಬಡವರ ಮತ್ತು ದೀನದಲಿತರ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಅವರು  ಧಮನಿತರ ಹಕ್ಕುಗಳಿಗೆ ಹೋರಾಡಿದವರು.

ವಿಷಂಭರನಾಥ್ ಅಗರ್ವಾಲ್ ಐಐಟಿ ಮುಂಬಯಿಂದ  ಇಂಜಿನಿಯರಿಂಗ್ ಪಧವೀಧರರು. ದೇಶದ ವಿವಿಧ ಭಾಗ ಗಳಲ್ಲಿ ವೃತ್ತಿ ಜೀವನವನ್ನು ನಡೆಸಿರುವ ಇವರು ಗಾಂಧಿ-ವಿನೋಬಾರ ವಿಚಾರಗಳ ಕುರಿತು ಮಾತನಾಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News