ಡಿವಿಕಾನ್ ಇಂಡಿಯಾ ಹ್ಯಾಕಥಾನ್-2022: ಎಂಐಟಿ ಮಾಹೆ ತಂಡಕ್ಕೆ ರನ್ನರ್‌ ಅಪ್ ಸ್ಥಾನ

Update: 2022-10-07 16:32 GMT

ಮಣಿಪಾಲ, ಅ.7: ಸ್ಥಳೀಯ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯ ವಿದ್ಯಾರ್ಥಿಗಳ ತಂಡ ‘ಪ್ರಾಜೆಕ್ಟ್ ಸನಂ’ ಡಿವಿಕಾನ್ ಇಂಡಿಯಾ ಹ್ಯಾಕಥಾನ್-೨೦೨೨ರಲ್ಲಿ ಎರಡನೇ ರನ್ನರ್‌ಅಪ್ ಸ್ಥಾನ ಗೆದ್ದುಕೊಂಡಿದೆ.

ಕಳೆದ ತಿಂಗಳು ಆನ್‌ಲೈನ್‌ನಲ್ಲಿ ನಡೆದ ಈ ಸ್ಪರ್ಧೆಯಲ್ಲಿ ತುಷಾರ್ ಉಪಾಧ್ಯಾಯ, ಎಲ್ಲೂರು ವಿಶಾಲ್ ರಾವ್ ಹಾಗೂ ಆಯುಷ್ ಕುಮಾರ್ ಇವರನ್ನೊಳಗೊಂಡ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದೆ. ಸ್ಪರ್ಧೆಯ ಫಲಿತಾಂಶವನ್ನು ನಿನ್ನೆ ಪ್ರಕಟಿಸಲಾಗಿದೆ. ಪ್ರಶಸ್ತಿಯೊಂದಿಗೆ ವಿದ್ಯಾರ್ಥಿಗಳಿಗೆ ಸ್ಮರಣಿಗೆ ಹಾಗೂ 30,000 ರೂ.ನಗದು ಬಹುಮಾನ ದೊರೆತಿದೆ.

ಎಂಐಟಿಯ ಪ್ರಾಜೆಕ್ಟ್ ಸನಂ ತಂಡದ ಸಾಧನೆಯನ್ನು ಅಭಿನಂದಿಸಿರುವ ಸಂಸ್ಥೆಯ ನಿರ್ದೇಶಕ ಕಮಾಂಡರ್ (ಡಾ.)ಅನಿಲ್ ರಾಣಾ, ತಂಡದ ಈ ಸಾಧನೆ ನಮಗೆ ಅತೀವ ಹೆಮ್ಮೆ ಹಾಗೂ ಸಂತೋಷವನ್ನು ತಂದಿದೆ. ಹ್ಯಾಕಥಾನ್‌ನಲ್ಲಿ ದೇಶದ ಪ್ರತಿಷ್ಠಿತ ತಾಂತ್ರಿಕ ವಿದ್ಯಾಸಂಸ್ಥೆಗಳು ಭಾಗವಹಿಸಿದ್ದು, ನಮ್ಮ ಹುಡುಗರು ರನ್ನರ್‌ಅಪ್ ಸ್ಥಾನ ಗೆಲ್ಲುವ ಮೂಲಕ ಎಂಐಟಿಯ ಕೀರ್ತಿಪತಾಕೆಯನ್ನು ಮೇಲಕ್ಕೆ ಹಾರಿಸಿದ್ದಾರೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News