ಮಂಗಳೂರು: ಸಾಮಾಜಿಕ ಕಾರ್ಯಕರ್ತ ಸುನೀಲ್ ಬಜಿಲಕೇರಿ ಪೊಲೀಸ್ ವಶಕ್ಕೆ

Update: 2022-10-07 19:20 GMT
ಸುನೀಲ್ ಬಜಿಲಕೇರಿ

ಮಂಗಳೂರು: ಸಾಮಾಜಿಕ ಕಾರ್ಯಕರ್ತ ಸುನೀಲ್ ಬಜಿಲಕೇರಿ ಅವರ ಮನೆಗೆ ತೆರಳಿ ಮಧ್ಯರಾತ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. 

ಫೇಸ್ ಬುಕ್ ಪೋಸ್ಟ್ ಒಂದಕ್ಕೆ ಸಂಬಂಧಿಸಿ ಸುನೀಲ್ ಬಜಿಲಕೇರಿ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದೆನ್ನಲಾಗಿದ್ದು,  ಸದ್ಯ ಅವರನ್ನು ಉರ್ವ ಪೊಲೀಸ್ ಠಾಣೆಯಲ್ಲಿರಿಸಲಾಗಿದೆ ಎಂದು ತಿಳಿದು ಬಂದಿದೆ. 

ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಸುನೀಲ್ ಬಜಿಲಕೇರಿ ಅವರ ಮನೆಗೆ ತೆರಳಿ ಪೊಲೀಸರು ವಶಕ್ಕೆ ಪಡೆದಿದ್ದು, ಈ ವೇಳೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಳಿಕ ಅವರನ್ನು ಊರ್ವ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಹೇಳಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ. ಸ್ಥಳೀಯರು ಠಾಣೆ ಗೆ ತೆರಳಿದ್ದಾರೆ. ಸಂಘ ಪರಿವಾರದ ಮಾಜಿ ಕಾರ್ಯಕರ್ತ ಸುನೀಲ್ ಬಜೀಲಕೆರಿ ಅವರು ಸದ್ಯ ಬಿಜೆಪಿ ನಾಯಕರ ಕಾರ್ಯವೈಖರಿಯ ಕಟುಟೀಕಾಕಾರರಾಗಿದ್ದಾರೆ.

''ಸುನಿಲ್ ಬಜಿಲಕೇರಿಯ ಮಧ್ಯರಾತ್ರಿಯ ಬಂಧನ ನಾಚಿಕೆಗೇಡು'': ಮುನೀರ್ ಕಾಟಿಪಳ್ಳ ಖಂಡನೆ

''ಬಂಧನ ನಡೆಸುವ ಮುನ್ನ‌ ಆರೋಪಿಗೆ ಬಂಧನದ ಸ್ಪಷ್ಟ ಕಾರಣ ನೀಡಬೇಕಾಗುತ್ತದೆ. ಸಾಮಾಜಿಕ ಜಾಲತಾಣದ ಪ್ರಕರಣ ಆದರೆ ಸೈಬರ್ ವಿಭಾಗದ ಪೊಲೀಸರ ವ್ಯಾಪ್ತಿಗೆ ಬರುತ್ತದೆ. ನೋಟೀಸ ನೀಡಿ ವಿಚಾರಣೆಗೆ ಕರೆಸುವುದು ಕ್ರಮ. fIR ಆಗಿದೆ ಅಂತ ಹೇಳಿ‌ ದೂರಿನ ವಿವರ ನೀಡದೆ ಬಲವಂತವಾಗಿ ಮನೆಗೆ ನುಗ್ಗಿ ಬಂಧಿಸುವುದು ಗೂಂಡಾಗಿರಿಯಾಗುತ್ತದೆ. ಮಂಗಳೂರು ಪೊಲೀಸರ ನಢೆ ಖಂಡನೀಯ. ಪೊಲೀಸ್ ಇಲಾಖೆ ಬಿಜೆಪಿಯ ಅಂಗ ಸಂಸ್ಥೆ ಅಲ್ಲ. ನ್ಯಾಯಯುತವಾಗಿ ನಡೆದುಕೊಳ್ಳಿ ಪೊಲೀಸರೆ. ಬಿಜೆಪಿಯ ಶಾಸಕರು ಶಾಶ್ವತ ಶಾಸಕರಲ್ಲ''. ಎಂದು ಡಿವೈಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಫೇಸ್ ಬುಕ್ ನಲ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News