ಗಣಿಗಾರಿಕೆ ಗುತ್ತಿಗೆ ಪಡೆದ ಬಳಿಕ ಬಿಜೆಪಿ ಸೇರಿರುವ ರಾಜಗೋಪಾಲ್ ರೆಡ್ಡಿಯನ್ನು ಅನರ್ಹಗೊಳಿಸುವಂತೆ ಟಿಆರ್ ಎಸ್ ಮನವಿ

Update: 2022-10-10 06:17 GMT
Photo:twitter

ಹೈದರಾಬಾದ್: 18,000 ಕೋಟಿ ರೂ. ಮೊತ್ತದ ಕಲ್ಲಿದ್ದಲು ಗಣಿಗಾರಿಕೆ ಗುತ್ತಿಗೆ ಪಡೆದ ಬಳಿಕ ಕೋಮಟಿರೆಡ್ಡಿ ರಾಜಗೋಪಾಲ್ ರೆಡ್ಡಿ ಬಿಜೆಪಿಗೆ ಸೇರಿದ್ದಾರೆ ಎಂದು ಆರೋಪಿಸಿರುವ ತೆಲಂಗಾಣ ರಾಷ್ಟ್ರ ಸಮಿತಿ ಅಥವಾ ಟಿಆರ್‌ಎಸ್ Telangana Rashtra Samithi or TRS  ಮುಂಬರುವ ಮುನುಗೋಡು ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಕೋಮಟಿರೆಡ್ಡಿ ರಾಜಗೋಪಾಲ್ ರೆಡ್ಡಿ ಅವರನ್ನು ಅನರ್ಹಗೊಳಿಸುವಂತೆ ಕೋರಿದೆ.

ಮುನುಗೋಡು ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕರಾಗಿದ್ದ ಕೋಮಟಿರೆಡ್ಡಿ ರಾಜಗೋಪಾಲ್ ರೆಡ್ಡಿ ಅವರು ತಮ್ಮ ಕುಟುಂಬದ ಒಡೆತನದ ಕಂಪನಿಯು ಕೇಂದ್ರ ಸರ್ಕಾರದಿಂದ  18,000 ಕೋಟಿ ರೂ. ಗುತ್ತಿಗೆ ಪಡೆದ ನಂತರ ಬಿಜೆಪಿ ಸೇರಿದ್ದಾರೆ ಎಂದು ಮುಖ್ಯಮಂತ್ರಿ ಕೆ.  ಚಂದ್ರಶೇಖರ ರಾವ್ ನೇತೃತ್ವದ ಟಿಆರ್‌ಎಸ್ ಆರೋಪಿಸಿದೆ.

ರೆಡ್ಡಿ ಬಿಜೆಪಿ ಸೇರಲು ಆಗಸ್ಟ್‌ನಲ್ಲಿ ಕಾಂಗ್ರೆಸ್ ತೊರೆದಿದ್ದರು, ರೆಡ್ಡಿರಾಜೀನಾಮೆಯಿಂದಾಗಿ ನವೆಂಬರ್ 3 ರಂದು ಉಪಚುನಾವಣೆ ಅನಿವಾರ್ಯವಾಗಿದೆ.

ಟಿಆರ್ ಎಸ್  ಪಕ್ಷದ ನಿಯೋಗವೊಂದು ನಿನ್ನೆ ಮುಖ್ಯ ಚುನಾವಣಾಧಿಕಾರಿ ವಿಕಾಸ್ ರಾಜ್ ಅವರನ್ನು ಭೇಟಿ ಮಾಡಿ ರೆಡ್ಡಿ ಅವರನ್ನು ಅನರ್ಹಗೊಳಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದೆ.

ಟಿಆರ್‌ಎಸ್ ಶಾಸಕರು ಮುಖ್ಯ ಚುನಾವಣಾಧಿಕಾರಿಗೆ ಬರೆದ ಪತ್ರದಲ್ಲಿ ಕೆ. ರಾಜಗೋಪಾಲ್ ರೆಡ್ಡಿ ಅವರು ಕಾಂಗ್ರೆಸ್‌ನಲ್ಲಿದ್ದಾಗ ಗುತ್ತಿಗೆ ಪಡೆದಿರುವುದಾಗಿ ಟಿವಿ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದಾರೆ.  ಆದ್ದರಿಂದ ಅವರನ್ನು ಅನರ್ಹಗೊಳಿಸಬೇಕು ಎಂದು ಹೇಳಿದ್ದಾರೆ.

ಮೂರು ವರ್ಷಗಳ ಹಿಂದೆ ಬಿಜೆಪಿ ಸೇರುವ ಇಚ್ಛೆ ಹೊಂದಿದ್ದೆ..  ಆದರೆ ನಾನು  ಇತ್ತೀಚೆಗೆ ಗುತ್ತಿಗೆ ಪಡೆದಿದ್ದೆ. ಬಿಜೆಪಿಗೆ ಸೇರುವ ತನ್ನ ರಾಜಕೀಯ ನಿರ್ಧಾರಕ್ಕೂ ತನ್ನ  ವ್ಯವಹಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಇತ್ತೀಚೆಗೆ ಟಿವಿ ಸಂದರ್ಶನವೊಂದರಲ್ಲಿ ರಾಜಗೋಪಾಲ್ ರೆಡ್ಡಿ ಅವರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News