ರಶ್ಯದ ವಿರುದ್ಧ ದಾಳಿ ನಡೆಸಿದರೆ ಉಗ್ರ ಪ್ರತಿದಾಳಿ: ಉಕ್ರೇನ್ ಗೆ ಪುಟಿನ್ ಎಚ್ಚರಿಕೆ

Update: 2022-10-10 18:44 GMT
PTI

ಮಾಸ್ಕೋ, ಅ.10: ಮುಂದಿನ ದಿನಗಳಲ್ಲಿ ರಶ್ಯದ ವಿರುದ್ಧ ಉಕ್ರೇನ್ (Ukraine) ದಾಳಿ ನಡೆಸಿದರೆ ನಾವು ಉಕ್ರೇನ್ ದೇಶದಾದ್ಯಂತ ಉಗ್ರ ಪ್ರತಿದಾಳಿ ನಡೆಸುತ್ತೇವೆ. ಇದರ ಒಂದು ಸ್ಯಾಂಪಲ್ ಅನ್ನು ಸೋಮವಾರದ ಸರಣಿ ಕ್ಷಿಪಣಿ ದಾಳಿಯ ಮೂಲಕ ತೋರಿಸಿಕೊಟ್ಟಿದ್ದೇವೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin)ಉಕ್ರೇನ್‌ಗೆ ಎಚ್ಚರಿಕೆ ನೀಡಿದ್ದಾರೆ.

2014ರಲ್ಲಿ ಉಕ್ರೇನ್‌ನಿಂದ ವಶಕ್ಕೆ ಪಡೆದಿರುವ ಕ್ರಿಮಿಯಾ ಪ್ರಾಂತ ಮತ್ತು ಮಾಸ್ಕೋವನ್ನು ಸಂಪರ್ಕಿಸುವ ಪ್ರಮುಖ ಸೇತುವೆಯನ್ನು ಉಕ್ರೇನ್ ಧ್ವಂಸಗೊಳಿಸಿದ್ದಕ್ಕೆ ಪ್ರತಿಯಾಗಿ ಸೋಮವಾರ ರಶ್ಯ ಉಕ್ರೇನ್ ಮೇಲೆ ನಿರಂತರ ಕ್ಷಿಪಣಿ ದಾಳಿ ನಡೆಸಿದ್ದು ಮಧ್ಯಾಹ್ನದ ಒಳಗೆ ಕನಿಷ್ಟ 75 ಕ್ಷಿಪಣಿ ಪ್ರಯೋಗಿಸಿದೆ. ಇಂತಹ ದಾಳಿ ಮುಂದುವರಿಯಲಿದೆಯೇ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಪುಟಿನ್ `ಅದರಲ್ಲಿ ಸಂದೇಹವೇ ಬೇಡ' ಎಂದರು. ಈ ಪ್ರಹಾರ ಮೊದಲನೆಯ ಕಂತು ಮಾತ್ರ. ಉಕ್ರೇನ್‌ನ ಆಡಳಿತವನ್ನು ಸಂಪೂರ್ಣ ಕಿತ್ತುಹಾಕುವುದು ರಶ್ಯದ ಗುರಿಯಾಗಿರಬೇಕು ಎಂದು ರಶ್ಯದ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವಡೇವ್ ಪ್ರತಿಕ್ರಿಯಿಸಿದ್ದಾರೆ.

 ಈ ಮಧ್ಯೆ, ಸರಣಿ ವಾಯುದಾಳಿ ಉದ್ದೇಶವನ್ನು ಸಾಧಿಸಿದೆ. ಎಲ್ಲಾ ಗುರಿಗಳನ್ನೂ ನಿಖರವಾಗಿ ತಲುಪಲಾಗಿದೆ ಎಂದು ರಶ್ಯದ ರಕ್ಷಣಾ ಸಚಿವಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News