ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವಂತೆ ಸೋನಿಯಾ ಗಾಂಧಿ ನನ್ನನ್ನು ಕೇಳಿಕೊಂಡಿದ್ದರು: ಮಲ್ಲಿಕಾರ್ಜುನ ಖರ್ಗೆ

Update: 2022-10-11 13:02 GMT
Photo: PTI

ಹೊಸದಿಲ್ಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, "ಪಕ್ಷದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಸೋನಿಯಾ ಗಾಂಧಿ ನನ್ನನ್ನು ಕೇಳಿಕೊಂಡಿದ್ದರು" ಎಂದು ಹೇಳಿದ್ದಾಗಿ PTI ವರದಿ ಮಾಡಿದೆ.

ಸೋನಿಯಾ ಗಾಂಧಿ ತನ್ನ ಮನೆಗೆ ಕರೆಸಿಕೊಂಡು ಕಾಂಗ್ರೆಸ್ ಅನ್ನು ಮುನ್ನಡೆಸುವಂತೆ ಕೇಳಿಕೊಂಡಿದ್ದರು ಎಂದು ರಾಜ್ಯಸಭಾ ಸಂಸದರು ಹೇಳಿದ್ದಾರೆ. "ನಾನು ಮೂರು ಹೆಸರುಗಳನ್ನು ಸೂಚಿಸುತ್ತೇನೆ ಎಂದು ಅವರಿಗೆ ಹೇಳಿದರೂ, ತಾನು ಹೆಸರುಗಳನ್ನು ಕೇಳುತ್ತಿಲ್ಲ ಎಂದು ಅವರು ಹೇಳಿದರು" ಎಂದು ಖರ್ಗೆ ತಿಳಿಸಿದ್ದಾರೆ.

ಗುವಾಹಟಿಯಲ್ಲಿ ಈಶಾನ್ಯ ಭಾಗದ ಕಾಂಗ್ರೆಸ್ ಘಟಕಗಳ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ ಈ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್‌ನ ನೂತನ ಅಧ್ಯಕ್ಷರ ಆಯ್ಕೆಗೆ ಅಕ್ಟೋಬರ್ 17ರಂದು ಚುನಾವಣೆ ನಡೆಯಲಿದ್ದು, ಎರಡು ದಿನಗಳ ನಂತರ ಫಲಿತಾಂಶ ಪ್ರಕಟವಾಗಲಿದೆ. ಖರ್ಗೆ ಅವರು ತಿರುವನಂತಪುರಂ ಸಂಸದ ಶಶಿ ತರೂರ್ ಅವರನ್ನು ಚುನಾವಣೆಯಲ್ಲಿ ಎದುರಿಸುತ್ತಿದ್ದಾರೆ.

ಪಿಟಿಐ ವರದಿ ಪ್ರಕಾರ, "ನಾನು ಸಮಾಲೋಚನೆ ಮತ್ತು ಸಾಮೂಹಿಕ ನಾಯಕತ್ವವನ್ನು ನಂಬುತ್ತೇನೆ" ಎಂದು ಖರ್ಗೆ ಹೇಳಿದರು. "... ಜನರು ನನ್ನನ್ನು ಹಿಂಬಾಲಿಸುವುದರಲ್ಲಿ ನನಗೆ ನಂಬಿಕೆಯಿಲ್ಲ, ಅವರು ನನ್ನ ಪಕ್ಕದಲ್ಲಿ ನಡೆಯಬೇಕೆಂದು ನಾನು ಬಯಸುತ್ತೇನೆ. ಒಟ್ಟಾಗಿ, ಪಕ್ಷದ ಸಂಘಟನೆಯನ್ನು ಬಲಪಡಿಸಲು ನಾವು ಕೆಲಸ ಮಾಡುತ್ತೇವೆ" ಎಂದು ಖರ್ಗೆ ಹೇಳಿದರು.

"ಈ ಹಿಂದೆ ಇಂದಿರಾ ಮತ್ತು ರಾಜೀವ್ ಗಾಂಧಿಯವರು ಮುಂದಕ್ಕೆ ಕೊಂಡೊಯ್ದ ಜವಾಹರಲಾಲ್ ನೆಹರೂ ಅವರ ಪರಂಪರೆಯನ್ನು ಕಾಂಗ್ರೆಸ್ ರಕ್ಷಿಸಬೇಕಾಗಿದೆ" ಎಂದು ಅವರು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News