ಮೂರನೇ ಏಕದಿನ: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ, ಸರಣಿ ಕೈವಶ

Update: 2022-10-11 13:41 GMT
photo: @BCCI

 ಹೊಸದಿಲ್ಲಿ, ಅ.11: ಸರಣಿ ನಿರ್ಣಾಯಕ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 7 ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ. ಸತತ ಐದನೇ ಸರಣಿಯನ್ನು ಜಯಿಸಿ ಗಮನ ಸೆಳೆದಿದೆ.

   ದಕ್ಷಿಣ ಆಫ್ರಿಕಾವನ್ನು 28 ಓವರ್‌ ರೊಳಗೆ ಕೇವಲ 99 ರನ್‌ಗೆ ನಿಯಂತ್ರಿಸಿದ ಭಾರತ ಗೆಲ್ಲಲು 100 ರನ್ ಸವಾಲು ಪಡೆಯಿತು. ಆರಂಭಿಕ ಬ್ಯಾಟರ್ ಶುಭಮನ್ ಗಿಲ್(49 ರನ್, 57 ಎಸೆತ, 8 ಬೌಂಡರಿ)ಹಾಗೂ ಶ್ರೇಯಸ್ ಅಯ್ಯರ್(ಔಟಾಗದೆ 28, 23 ಎಸೆತ)ನೆರವಿನಿಂದ 19.1 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 105 ರನ್ ಗಳಿಸಿತು.

ಗಿಲ್‌ರೊಂದಿಗೆ ಇನಿಂಗ್ಸ್ ಆರಂಭಿಸಿದ ನಾಯಕ ಶಿಖರ್ ಧವನ್(8 ರನ್)ಬೇಗನೆ ರನೌಟಾದರು.


ಟಾಸ್ ಜಯಿಸಿದ ಭಾರತದ ನಾಯಕ ಶಿಖರ್ ಧವನ್ ದಕ್ಷಿಣ ಆಫ್ರಿಕಾವನ್ನು ಮೊದಲು ಬ್ಯಾಟಿಂಗ್‌ಗೆ ಇಳಿಸಿದರು.

ಸ್ಪಿನ್ನರ್ ಕುಲದೀಪ್ ಯಾದವ್(4-18)ನೇತೃತ್ವದ ಬೌಲರ್‌ಗಳ ಶಿಸ್ತುಬದ್ದ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ 27.1 ಓವರ್‌ಗಳಲ್ಲಿ 99 ರನ್‌ಗೆ ಆಲೌಟಾಯಿತು.  ವಾಶಿಂಗ್ಟನ್ ಸುಂದರ್(2-15), ಮುಹಮ್ಮದ್ ಸಿರಾಜ್(2-17) ಹಾಗೂ ಶಹಬಾಝ್ ಅಹ್ಮದ್(2-32)ತಲಾ ಎರಡು ವಿಕೆಟ್‌ಗಳನ್ನು ಪಡೆದರು.

ಭಾರೀ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾದ ದಕ್ಷಿಣ ಆಫ್ರಿಕಾದ ಪರ ಹೆನ್ರಿಕ್ ಕ್ಲಾಸೆನ್(34 ರನ್, 42 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು. ಉಳಿದವರು ಪೆವಿಲಿಯನ್‌ಗೆ ಪರೇಡ್ ನಡೆಸಿದರು.
 

ಇದನ್ನೂ ಓದಿ : ಮಡಿಕೇರಿ: ಹಾಡಹಗಲೇ ಮನೆಗೆ ನುಗ್ಗಿ ಮಹಿಳೆ ಧರಿಸಿದ್ದ ಚಿನ್ನಾಭರಣ ದರೋಡೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News