ಹಾವಿನ ಭಯ: ಮಹಿಳೆ ಆತ್ಮಹತ್ಯೆ
Update: 2022-10-11 19:32 IST
ಹಿರಿಯಡ್ಕ, ಅ.11: ಹಾವಿನ ವಿಚಾರದಲ್ಲಿ ಭಯಗೊಂಡು ಮಾನಸಿಕ ಕಾಯಿಲೆಗೆ ಒಳಗಾದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಅ.10ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ಪೆರ್ಡೂರು ಹೋಳಿಂಜೆ ನಿವಾಸಿ ಇಂದಿರಾ ಶೆಟ್ಟಿ (61) ಎಂದು ಗುರುತಿಸಲಾಗಿದೆ. ಹಾವಿನ ಬಗ್ಗೆ ಹೆಚ್ಚು ಭಯ ಹೊಂದಿದ್ದ ಇವರು, 3 ತಿಂಗಳ ಹಿಂದೆ ನಾಗರ ಪಂಚಮಿ ದಿನದಂದು ತನ್ನ ಕಾಲಿನ ಮೇಲೆ ಹಾವೊಂದು ಹರಿದು ಹೋಗಿದೆ ಎಂದು ಮಾನಸಿಕ ಕಾಯಿಲೆಗೆ ತುತ್ತಾಗಿದ್ದರು. ಇದೇ ವಿಷಯದಲ್ಲಿ ಮಾನಸಿಕವಾಗಿ ನೊಂದ ಅವರು ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಬಾವಿಯ ಸಿಮೆಂಟ್ ಕಂಬಕ್ಕೆ ನೇಣು ಬಿಗಿದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.