ಕಾಡುಪ್ರಾಣಿ ಓಡಿಸುವ ಭರದಲ್ಲಿ ಕೆರೆಗೆ ಬಿದ್ದು ಕೃಷಿಕ ಮೃತ್ಯು
Update: 2022-10-11 19:38 IST
ಗಂಗೊಳ್ಳಿ, ಅ.11: ಗದ್ದೆಗೆ ನುಗ್ಗಿದ ಕಾಡು ಪ್ರಾಣಿಗಳನ್ನು ಓಡಿಸುವ ಭರದಲ್ಲಿ ಕೃಷಿಕರೊಬ್ಬರು ಕೆರೆಗೆ ಬಿದ್ದು ಮೃತಪಟ್ಟ ಘಟನೆ ಅ.10ರಂದು ರಾತ್ರಿ ವೇಳೆ ನಾಡ ಗ್ರಾಮದ ಗುಡ್ಡೆಯಂಗಡಿ ಬೆಳ್ಳಾಡಿಜೆಡ್ಡು ನಡೆದಿದೆ.
ಮೃತರನ್ನು ಬೆಳ್ಳಾಡಿಜೆಡ್ಡುವಿನ ನಿವಾಸಿ ವೆಂಕಟ ಮೊಗವೀರ(79) ಎಂದು ಗುರುತಿಸಲಾಗಿದೆ. ಇವರು ಮನೆಯ ಬಳಿಯ ಗದ್ದೆಗೆ ನುಗ್ಗಿದ ಕಾಡುಪ್ರಾಣಿ ಗಳನ್ನು ಓಡಿಸಲು ಹೋಗಿದ್ದು, ಈ ವೇಳೆ ಗದ್ದೆಯ ಪಕ್ಕದಲ್ಲಿರುವ ಕೆರೆಗೆ ಆಕಸ್ಮಿಕ ವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.