×
Ad

ಅಂಜಾರಿನಲ್ಲಿ ನವರಾತ್ರಿ ಕಾರ್ಯಕ್ರಮ

Update: 2022-10-11 19:41 IST

ಉಡುಪಿ, ಅ.11: ಅಂಜಾರು ದುರ್ಗಾಪರಮೇಶ್ವರಿ ಮರಾಟಿ ಸಮುದಾಯ ಕಲಾ ಸಂಘದ ವಾರ್ಷಿಕ ನವರಾತ್ರಿ ಉತ್ಸವ ಇತ್ತೀಚೆಗೆ ನಡೆಯಿತು.

ಅಧ್ಯಕ್ಷತೆಯನ್ನು ವಹಿಸಿದ್ದ ಅಂಜಾರು ಮಠದ ಅರ್ಚಕ ಸೀತಾರಾಮ ಆಚಾರ್ಯ ಮಾತನಾಡಿ, ಕನ್ನಡ ನಾಡಿನಲ್ಲಿ ನವರಾತ್ರಿ ಹಬ್ಬವು ಧಾರ್ಮಿಕ ಕಾರ್ಯಕ್ರಮದ ಜೊತೆಗೆ ಸಾಂಸ್ಕೃತಿಕ ಹಬ್ಬವಾಗಿ ವಿಜಯನಗರದ ಕಾಲ ದಿಂದಲೂ ಆಚರಿಸಲ್ಪಡುತ್ತಿದೆ. ಕಲೆ, ಸಾಹಿತ್ಯ, ಸಂಸ್ಕೃತಿಗೆ ದೇವಿ ಶಾರದೆ ಆದಿ ದೇವತೆ ಶಾರದೆಯನ್ನು ಪೂಜಿಸಿ ದರೆ ಭಕ್ತರ ಇಷ್ಟಾರ್ಥ ಈಡೇರುವುದು ಎಂದರು.

ಮುಖ್ಯ ಅತಿಥಿಯಾಗಿ ಕಾಪು ಶಾಸಕ ಲಾಲಾಜಿ ಮೆಂಡನ್ ಮಾತನಾಡಿ ದೇವಿಯ ಆರಾಧನೆಯಿಂದ ಮನಸ್ಸಿಗೆ ನೆಮ್ಮದಿ ಸಿಗುವುದು ಎಂದರು. ಸಭೆಯಲ್ಲಿ ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ, ಯಕ್ಷಗಾನ ಕೇಂದ್ರದ ಸಲಹಾ ಸಮಿತಿಯ ಸದಸ್ಯ ಡಾ.ಮಂಜುನಾಥ ಮಯ್ಯ, ತಾಪಂ ಮಾಜಿ ಅಧ್ಯಕ್ಷೆ ಸಂಧ್ಯಾ ಕಾಮತ್, ಕೊಡಿಬೆಟ್ಟು ಗ್ರಾಪಂ ಅಧ್ಯಕ್ಷೆ  ಆಶಾ ಶೆಟ್ಟಿ, ಉಪಾಧ್ಯಕ್ಷ ಸದಾನಂದ ಪ್ರಭು, ಸದಸ್ಯೆ ಯಶೋಧ ಮುಂತಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಾಸ್ತುತಜ್ಞ ಅನಂತ ನಾಯ್ಕ್ ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ವೆಂಕಟೇಶ್ ನಾಯ್ಕ್ ಸ್ವಾಗತಿಸಿದರು. ವಿಠಲ್ ನಾಯ್ಕ್ ವಂದಿಸಿದರು. ಹಿರಿಯಡ್ಕ ಮೋಹನ್ ಕಡಬ ಮತ್ತು ಬಳಗದವರಿಂದ ಸುಗಮ ಸಂಗೀತ ಹಾಗೂ ಇಂದ್ರಾಳಿ ಯಕ್ಷಗಾನ ಕೇಂದ್ರದ ಕಲಾವಿದರಿಂದ ಯಕ್ಷಗಾನ ಕಾರ್ಯಕ್ರಮ ನಡೆಯಿತು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News