ಝುಬೈರ್ ವಿರುದ್ಧ ಶೀಘ್ರ ತನಿಖೆ ನಡೆಸಲು ಪೊಲೀಸರಿಗೆ ಆದೇಶಿಸುವಂತೆ ಮಕ್ಕಳ ಆಯೋಗ ಆಗ್ರಹ
ಹೊಸದಿಲ್ಲಿ: ಟ್ವಿಟರ್‌ನಲ್ಲಿ ಬಾಲಕಿಗೆ ಬೆದರಿಕೆ ಹಾಕಿದ ಆರೋಪದ ಬಗ್ಗೆ ಫ್ಯಾಕ್ಟ್ ಚೆಕರ್ ಮಹಮ್ಮದ್ ಝುಬೈರ್ ವಿರುದ್ಧ ದಿಲ್ಲಿ ಪೊಲೀಸರು ನೀಡಿದ "ಗುರುತಿಸಲಾಗದ ಅಪರಾಧ" ಎಂಬ ಹೇಳಿಕೆ ಸುಳ್ಳು ಎಂದು ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗ (NCPCR) ಇಂದು ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
ದಿಲ್ಲಿ ಪೊಲೀಸರ ನಿಲುವು ಅಧಿಕಾರಿಗಳ ʼಅಸಡ್ಡೆ ವರ್ತನೆʼಯನ್ನು ಸೂಚಿಸುತ್ತದೆ. ಈ ವಿಷಯದಲ್ಲಿ ಸಂಪೂರ್ಣ ತನಿಖೆ ನಡೆಸಲು ಹಾಗೂ ಅದನ್ನು ಶೀಘ್ರವಾಗಿ ಪೂರ್ಣಗೊಳಿಸಲು ಪೊಲೀಸರಿಗೆ ಆದೇಶಿಸುವಂತೆ NCPCR ಹೈಕೋರ್ಟ್ ಅನ್ನು ಕೇಳಿದೆ.
ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 7 ರಂದು ನಡೆಯಲಿದೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ದಿಲ್ಲಿ ಪೊಲೀಸರು ಝುಬೈರ್ ವಿರುದ್ಧ ಟ್ವಿಟರ್‌ನಲ್ಲಿ ಬಾಲಕಿಗೆ ಬೆದರಿಕೆ ಹಾಕಿದ್ದಕ್ಕಾಗಿ ಎಫ್‌ಐಆರ್ ದಾಖಲಿಸಿದ್ದರು. ಈ ಬಗ್ಗೆ ಎನ್‌ಸಿಪಿಸಿಆರ್ ಪೊಲೀಸರಿಗೆ ಮಾಹಿತಿ ನೀಡಿತ್ತು.
ಟ್ವಿಟರ್ ನಲ್ಲಿ ನಡೆದ ವಾಗ್ವಾದದ ನಡುವೆ ವ್ಯಕ್ತಿಯೊಬ್ಬರ ಚಿತ್ರವನ್ನು ಝುಬೈರ್ ಟ್ವೀಟ್ ಮಾಡಿದ್ದರು. ಆ ಚಿತ್ರದಲ್ಲಿ ವ್ಯಕ್ತಿಯ ಜೊತೆ ಅವರ ಮಗಳೂ ಇದ್ದಳು. ಇದು ಮಕ್ಕಳ ರಕ್ಷಣಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿತ್ತು.
ಝುಬೈರ್ ತನಿಖೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಮತ್ತು ಪೊಲೀಸರೊಂದಿಗೆ ಸಹಕರಿಸುತ್ತಿಲ್ಲ ಎಂದು ಪೊಲೀಸರ ಈ ಹಿಂದಿನ ವರದಿಯನ್ನು ಮಕ್ಕಳ ಹಕ್ಕುಗಳ ಸಂಸ್ಥೆ ಉಲ್ಲೇಖಿಸಿದೆ.
“ಅರ್ಜಿದಾರರು ಸತ್ಯವನ್ನು ನಿಗ್ರಹಿಸುವ ದುರುದ್ದೇಶಪೂರಿತ ಉದ್ದೇಶವು ಸ್ಪಷ್ಟವಾಗಿದೆ, ಇದು ವಿಷಯದ ತನಿಖೆಯಲ್ಲಿ ಗಂಭೀರ ವಿಳಂಬವನ್ನು ಉಂಟುಮಾಡುತ್ತದೆ. ಅರ್ಜಿದಾರರ ವಿರುದ್ಧ ದಿಲ್ಲಿ ಪೊಲೀಸರು ಯಾವುದೇ ಅಪರಾಧವನ್ನು ಮಾಡಿಲ್ಲ ಎಂಬ ಸಲ್ಲಿಕೆಯೂ ತಪ್ಪಾಗಿದೆ. ಈ ವಿಷಯದಲ್ಲಿ ಪೊಲೀಸರ ಅಸಡ್ಡೆ ಧೋರಣೆ ತೋರಿಸುತ್ತದೆ" ಎಂದು ಎನ್‌ಸಿಪಿಸಿಆರ್ ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಹೇಳಿದೆ.
ಹುಡುಗಿಯ ಚಿತ್ರವನ್ನು ರೀಟ್ವೀಟ್ ಮಾಡುವುದರಿಂದ ಆಕೆಯ ಗುರುತನ್ನು ಬಹಿರಂಗಪಡಿಸಲು ಸಹಾಯ ಮಾಡಿತು, ಆಕೆಯ ಭದ್ರತೆಯನ್ನು ರಾಜಿ ಮಾಡಿಕೊಂಡಿತು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಕಿರುಕುಳಕ್ಕೆ ಕಾರಣವಾಯಿತು ಎಂದು NCPCR ಹೇಳಿದೆ.