×
Ad

ಭಾರತದ ಆರ್ಥಿಕ ಬೆಳವಣಿಗೆಗೆ ಬೇಕು ಮಧ್ಯಮ ಗಾತ್ರದ ಕಂಪೆನಿಗಳು

Update: 2022-10-12 14:12 IST

ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ಉದ್ಯಮಗಳು ವಹಿಸುವ ಮತ್ತು ವಹಿಸಬೇಕಾದ ಪಾತ್ರ ಅಪಾರವಾಗಿದೆ. ಕೈಗಾರಿಕೆಗಳ ಬಗ್ಗೆ ಮಾಹಿತಿಗಳನ್ನು ಪಡೆಯಲು ನಾನಿಲ್ಲಿ ‘Pಡಿoತಿess’ ಮಾಹಿತಿ ಕೋಶವನ್ನು ಬಳಸಿದ್ದೇನೆ. ಈ ಮಾಹಿತಿ ಕೋಶವನ್ನು ಭಾರತೀಯ ಆರ್ಥಿಕತೆ ನಿಗಾ ಕೇಂದ್ರವು ನಿರ್ವಹಿಸುತ್ತಿದೆ. ಇದು ಭಾರತೀಯ ಉದ್ಯಮಗಳ ಪ್ರಾಯ ಮತ್ತು ಗಾತ್ರದ ಬಗ್ಗೆ ಮಾಹಿತಿಗಳನ್ನು ಒದಗಿಸುತ್ತದೆ.

2016-21ರ ಅವಧಿಯಲ್ಲಿ, ಈ ಮಾಹಿತಿ ಕೋಶವು 12,460 ಉದ್ಯಮಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದೆ. ಇದರಲ್ಲಿ ಶೇರು ವಿನಿಮಯ ಕೇಂದ್ರದಲ್ಲಿ ನೋಂದಣಿಯಾಗಿರುವ ಬಹುತೇಕ ಎಲ್ಲ ಉದ್ಯಮಗಳಿವೆ. ಹೆಚ್ಚಿನ ಖಾಸಗಿ ಉದ್ಯಮಗಳ ಅಂಕಿಅಂಶಗಳು ಇಲ್ಲಿ ಇವೆಯಾದರೂ, ಎಲ್ಲಾ ಕಂಪೆನಿಗಳನ್ನು ಇದು ಒಳಗೊಂಡಿಲ್ಲ.

ಈ ಮಾಹಿತಿ ಕೋಶದಲ್ಲಿ ಕೆಲವು ಕೊರತೆಗಳೂ ಇವೆ. ಬೃಹತ್ ಸಂಖ್ಯೆಯಲ್ಲಿರುವ ಸಣ್ಣ ಉದ್ಯಮಗಳನ್ನು ಇದು ಒಳಗೊಂಡಿಲ್ಲ. ವೇಗವಾಗಿ ಬೆಳೆಯುತ್ತಿರುವ ಹಲವು ನವೋದ್ಯಮಗಳ ಮಾಹಿತಿಗಳು ಈ ಮಾಹಿತಿ ಕೋಶದಲ್ಲಿವೆ. ಈ ಪೈಕಿ 100ಕ್ಕೂ ಅಧಿಕ ಕಂಪೆನಿಗಳು ಇಂದು ‘ಯೂನಿಕಾರ್ನ್’ (ಸುಮಾರು 8,250 ಕೋಟಿ ರೂಪಾಯಿ ತಲುಪಿರುವ ಹಾಗೂ ಶೇರು ವಿನಿಮಯ ಕೇಂದ್ರದಲ್ಲಿ ನೋಂದಣಿಯಾಗದ ನವೋದ್ಯಮಗಳು)ಗಳಾಗಿವೆ. ಉದಾಹರಣೆಗೆ; ಫ್ಲಿಪ್‌ಕಾರ್ಟ್, ರೆಹೊ ಮತ್ತು ಝೀರೋದಾಗಳನ್ನು ‘Pಡಿoತಿess’ ಮಾಹಿತಿ ಕೋಶಕ್ಕೆ ಸೇರ್ಪಡೆಗೊಳಿಸಲಾಗಿದೆ; ಆದರೆ ಬೈಜೂಸ್, ಉಡಾನ್ ಮತ್ತು ಓಯೊ ಕಂಪೆನಿಗಳ ಸೇರ್ಪಡೆಯಾಗಿಲ್ಲ. ಹಲವು ಸರಕಾರಿ ಒಡೆತನದ ಕಂಪೆನಿಗಳೂ ಇದರಲ್ಲಿಲ್ಲ ಹಾಗೂ ಇಲ್ಲಿರುವ ಕೆಲವು ಕಂಪೆನಿಗಳು ವಿದೇಶಿ ಕಂಪೆನಿಗಳ ಉಪ ಕಂಪೆನಿಗಳು.

ನಾನು ಎರಡು ಪ್ರಶ್ನೆಗಳಿಗೆ ಉತ್ತರಿಸಲು ಈ ಮಾಹಿತಿಕೋಶವನ್ನು ಬಳಸುತ್ತೇನೆ. ಮೊದಲನೆಯದು, ಭಾರತೀಯ ಉದ್ಯಮಗಳು ಗಾತ್ರ ಮತ್ತು ಪ್ರಾಯದಲ್ಲಿ ಹೇಗೆ ಹಂಚಿಕೆಯಾಗಿವೆ? ಅಂದರೆ, ಎಷ್ಟು ಉದ್ಯಮಗಳು ದೊಡ್ಡದಾಗಿವೆ (ವಾರ್ಷಿಕವಾಗಿ ಸುಮಾರು 8,250 ಕೋಟಿ ರೂಪಾಯಿ ಗಿಂತಲೂ ಹೆಚ್ಚಿನ ಉತ್ಪತ್ತಿ ಹೊಂದಿರುವ ಉದ್ಯಮಗಳು), ಎಷ್ಟು ಉದ್ಯಮಗಳು ಮೇಲ್ಮಧ್ಯಮ ಗಾತ್ರ (ವಾರ್ಷಿಕ ಸುಮಾರು 4,125 ಕೋಟಿ ರೂಪಾಯಿಯಿಂದ ಸುಮಾರು 8,250 ಕೋಟಿ ರೂಪಾಯಿ ನಡುವಿನ ಉತ್ಪತ್ತಿ ಹೊಂದಿರುವ ಕಂಪೆನಿಗಳು) ಹೊಂದಿವೆ, ಎಷ್ಟು ಉದ್ಯಮಗಳು ಕೆಳ ಮಧ್ಯಮ ಗಾತ್ರ (ಸುಮಾರು 410 ಕೋಟಿ ರೂಪಾಯಿ ಮತ್ತು 4,125 ಕೋಟಿ ರೂಪಾಯಿ ನಡುವಿನ ಉತ್ಪತ್ತಿ ಹೊಂದಿರುವ ಕಂಪೆನಿಗಳು) ಹೊಂದಿವೆ ಮತ್ತು ಎಷ್ಟು ಸಣ್ಣ  ಉದ್ಯಮಗಳು (ವಾರ್ಷಿಕ 410 ಕೋಟಿ ರೂಪಾಯಿಗಿಂತ ಕಡಿಮೆ ಉತ್ಪತ್ತಿ ಹೊಂದಿರುವ ಕಂಪೆನಿಗಳು) ಇವೆ? ಹಾಗೂ ಎಷ್ಟು ಕಂಪೆನಿಗಳು ಹಳೆಯವು (10 ವರ್ಷಕ್ಕಿಂತಲೂ ಹಿಂದೆ ಸ್ಥಾಪನೆಯಾದವುಗಳು) ಮತ್ತು ಎಷ್ಟು ಹೊಸ ಕಂಪೆನಿಗಳು (10 ವರ್ಷಕ್ಕಿಂತ ಕೆಳಗಿನ ಕಂಪೆನಿಗಳು)?

ಎರಡನೆಯದಾಗಿ, 2016ರ ಬಳಿಕ, ಪ್ರತೀ ಗಾತ್ರ ವಿಭಾಗದ ಉದ್ಯಮಗಳ ಉತ್ಪತ್ತಿ ಹಂಚಿಕೆಗಳು ಮತ್ತು ಉತ್ಪತ್ತಿ ಅಭಿವೃದ್ಧಿ ದರಗಳು ಹೇಗೆ ಬದಲಾಗಿವೆ? ಮುಂದಿನ ಹಲವು ದಶಕಗಳ ಆರ್ಥಿಕ ಬೆಳವಣಿಗೆಯನ್ನು ರೂಪಿಸುವ ನೀತಿಗಳಿಗೆ ಈ ಅಂಕಿಅಂಶಗಳು ಯಾವ ರೀತಿಯಲ್ಲಿ ಮಹತ್ವದ್ದಾಗಿವೆ?

ನಾಪತ್ತೆಯಾಗಿರುವ ಮಧ್ಯಮ ಗಾತ್ರ

ಇಲ್ಲಿ ಐದು ಪ್ರಮುಖ ಅಂಶಗಳನ್ನು ಗುರುತಿಸಬಹುದಾಗಿದೆ. ಮೊದಲನೆಯದು, ಭಾರತೀಯ ಉದ್ಯಮಗಳ ಪೈಕಿ ಶೇ.91 ಹಳೆಯವು, ಶೇ. 78 ಸಣ್ಣ ಗಾತ್ರದವು ಮತ್ತು ಶೇ. 71 ಹಳೆಯದು ಮತ್ತು ಸಣ್ಣವು.

ಎರಡು, ದೇಶದಲ್ಲಿ 220 ಬೃಹತ್ ಕಂಪೆನಿಗಳಿವೆ. ಇದು ‘ಪ್ರೋವೆಸ್’ ಮಾಹಿತಿಕೋಶದಲ್ಲಿರುವ ಎಲ್ಲಾ ಉದ್ಯಮಗಳ ಪೈಕಿ ಶೇ.1.75ಕ್ಕಿಂತಲೂ ಕಡಿಮೆ. ಹೆಚ್ಚಿನ ಹಳೆಯ ಮತ್ತು ಬೃಹತ್ ಕಂಪೆನಿಗಳು ಎಲ್ಲರಿಗೂ ಚಿರಪರಿಚಿತವಾಗಿವೆ. ಅವುಗಳ ಪೈಕಿ ಕೆಲವು: ರಿಲಯನ್ಸ್ ಜಿಯೋ, ಪತಂಜಲಿ ಅಯುರ್ವೇದ, ಅಮೆಝಾನ್ ಇಂಡಿಯಾ ಮತ್ತು ಆ್ಯಪಲ್ ಇಂಡಿಯಾ. ಹದಿನಾಲ್ಕು ನೂತನ ಹಾಗೂ ಬೃಹತ್ ಕಂಪೆನಿಗಳಲ್ಲಿ ಕಿಯಾ ಮೋಟಾರ್ಸ್, ಶಾವೊಮಿ, ವಿವೋ ಮೊಬೈಲ್ ಮತ್ತು ಸುಝುಕಿ ಮೋಟಾರ್ ಗುಜರಾತ್ ಇವುಗಳು ವಿದೇಶಿ ಕಂಪೆನಿಗಳ ಉಪ ಕಂಪೆನಿಗಳಾಗಿವೆ. ಅದಾನಿ ಪವರ್ ಮುಂಡ್ರಾ ಮತ್ತು ಜಿಂದಾಲ್ ಸ್ಟೇನ್‌ಲೆಸ್ ಕೆಲವು ಕಂಪೆನಿಗಳು ಸ್ಥಾಪಿತ ಉದ್ಯಮಿಗಳು ಸ್ಥಾಪಿಸಿರುವ ನೂತನ ಉದ್ಯಮಗಳಾಗಿವೆ.

ಮೂರು, ನಾಪತ್ತೆಯಾಗಿರುವ ಮಧ್ಯಮ ಗಾತ್ರದ ಉದ್ಯಮಗಳು. ಮೇಲ್ಮಧ್ಯಮ ಗಾತ್ರದ ಕಂಪೆನಿಗಳ ಸಂಖ್ಯೆ ಸರಿ ಸುಮಾರು ಬೃಹತ್ ಗಾತ್ರದ ಕಂಪೆನಿಗಳ ಸಂಖ್ಯೆಯಷ್ಟೇ ಇದೆ. ‘ಮಧ್ಯಮ ಗಾತ್ರದ ಕಂಪೆನಿಗಳು ನಾಪತ್ತೆ’ಯಾಗಿರುವ ಪ್ರವೃತ್ತಿ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಅಭಿವೃದ್ಧಿಶೀಲ ದೇಶಗಳಲ್ಲಿರುವ ಹೆಚ್ಚಿನ ಸಣ್ಣ ಉದ್ಯಮಗಳು ದೊಡ್ಡ ಉದ್ಯಮಗಳಾಗಿ ಬೆಳೆಯುವುದಿಲ್ಲ; ಯಾಕೆಂದರೆ ಆ ಕಂಪೆನಿಗಳು ಆಡಳಿತವು ನಿರ್ವಹಣಾ ಕೌಶಲದ ಕೊರತೆ ಮತ್ತು ಆರ್ಥಿಕ ಮುಗ್ಗಟ್ಟುಗಳನ್ನು ಎದುರಿಸುತ್ತವೆ ಎಂದು ಆರ್ಥಿಕ ತಜ್ಞರಾದ ಹಸಿಯ ಮತ್ತು ಕ್ಲೆನೊವ್ ಹೇಳುತ್ತಾರೆ. ಗುರಿಗಳನ್ನು ನಿಗದಿಪಡಿಸುವುದು, ನಿರ್ವಹಣೆಯ ಮೇಲೆ ನಿಗಾ ಇಡುವುದು ಮತ್ತು ಭತ್ತೆಗಳನ್ನು ನೀಡುವುದು- ಉತ್ತಮ ಆಡಳಿತದ ಅಂಶಗಳಾಗಿವೆ. ಹೆಚ್ಚಿನ ಸಣ್ಣ ಉದ್ಯಮಗಳು ಬೆಳೆಯದಿರಲು ಅವುಗಳ ಆಡಳಿತಗಳು ಇಂಥ ಅಂಶಗಳನ್ನು ಅಳವಡಿಸಿಕೊಳ್ಳದಿರುವುದೇ ಕಾರಣ ಎಂದು ಆರ್ಥಿಕ ವಿಶ್ಲೇಷಕರಾದ ಬ್ಲೂಮ್, ಮಹಾಜನ್, ಮೆಕೆಂಝಿ ಮತ್ತು ರಾಬರ್ಟ್ಸ್ ಅಭಿಪ್ರಾಯಪಡುತ್ತಾರೆ. 2010ರಲ್ಲಿ 620 ಭಾರತೀಯ ಉದ್ಯಮಗಳ ಬಗ್ಗೆ ಅಧ್ಯಯನ ಮಾಡಿರುವ ಬ್ಲೂಮ್ ಮತ್ತು ವಾನ್ ರೀನೆನ್, ಚೀನಾ, ಗ್ರೀಸ್ ಮತ್ತು ಬ್ರೆಝಿಲ್‌ನ ಕಂಪೆನಿಗಳಂತೆಯೇ, ಹೆಚ್ಚಿನ ಭಾರತೀಯ ಕಂಪೆನಿಗಳು ಹಲವು ಆಡಳಿತಾತ್ಮಕ ವಿಚಾರಗಳಲ್ಲಿ ವಿಫಲಾಗುತ್ತವೆ ಎಂಬುದಾಗಿ ಅಭಿಪ್ರಾಯಪಟ್ಟಿದ್ದಾರೆ.

ನಾಲ್ಕನೆಯದು, 2,279 ಕೆಳಮಧ್ಯಮ ಗಾತ್ರದ ಕಂಪೆನಿಗಳು ದೇಶದಲ್ಲಿರುವ ಒಟ್ಟು ಉದ್ಯಮಗಳ ಪೈಕಿ ಶೇ.18.30ದಷ್ಟಿವೆ ಹಾಗೂ ಭಾರತದ ಕಾರ್ಪೊರೇಟ್ ಉತ್ಪತ್ತಿ ಮತ್ತು ಉತ್ಪತ್ತಿ ಬೆಳವಣಿಗೆಗೆ ಅವುಗಳ ದೇಣಿಗೆ ಗಮನಾರ್ಹವಾಗಿವೆ.  ಇಂಥ ಕಂಪೆನಿಗಳ ಪೈಕಿ ಕೆಲವು ಪರಿಚಿತ ಹೆಸರುಗಳೆಂದರೆ- ಕಾಫಿ ಡೇ ಗ್ಲೋಬಲ್, ಅಮಾಲ್ಗಮೇಶನ್ಸ್, ಯುನೈಟೆಡ್ ಬ್ರೂವರೀಸ್, ಆಡಿ ಇಂಡಿಯಾ ಮತ್ತು ಚೆಟ್ಟಿನಾಡ್ ಸಿಮೆಂಟ್. ಕಡಿಮೆ ಪರಿಚಿತ ಹೆಸರುಗಳೆಂದರೆ- ಶ್ರೀ ಮಹಾವೀರ್ ಪಲ್ಸಸ್, ಪೆಂಟ ಗೋಲ್ಡ್, ವಾಂಟೇಜ್ ನಾಲೇಜ್ ಅಕಾಡಮಿ, ಮಹಾರಾಣಿ ಪೇಂಟ್ಸ್ ಮತ್ತು ಎಮ್.ಕೆ. ಪ್ರೊಟೀನ್ಸ್.

ಇಂಥ ಕಂಪೆನಿಗಳ ಪೈಕಿ ಕೆಲವು ಪರಿಚಿತ ಹೆಸರುಗಳೆಂದರೆ- ಕಾಫಿ ಡೇ ಗ್ಲೋಬಲ್, ಅಮಾಲ್ಗಮೇಶನ್ಸ್, ಯುನೈಟೆಡ್ ಬ್ರೂವರೀಸ್, ಆಡಿ ಇಂಡಿಯಾ ಮತ್ತು ಚೆಟ್ಟಿನಾಡ್ ಸಿಮೆಂಟ್. ಕಡಿಮೆ ಪರಿಚಿತ ಹೆಸರುಗಳೆಂದರೆ- ಶ್ರೀ ಮಹಾವೀರ್ ಪಲ್ಸಸ್, ಪೆಂಟ ಗೋಲ್ಡ್, ವಾಂಟೇಜ್ ನಾಲೇಜ್ ಅಕಾಡೆಮಿ, ಮಹಾರಾಣಿ ಪೇಂಟ್ಸ್ ಮತ್ತು ಎಮ್.ಕೆ. ಪ್ರೊಟೀನ್ಸ್.

ಐದನೆಯದು, ಸಣ್ಣ ಉದ್ದಿಮೆಗಳು ಭಾರತೀಯ ಉದ್ಯಮಗಳ ಶೇ.78ದಷ್ಟಿವೆ. ಗಮನಾರ್ಹ ಅಂಶವೆಂದರೆ, ಸಣ್ಣ ಉದ್ದಿಮೆಗಳ ಪೈಕಿ ಶೇ. 67 ವಾರ್ಷಿಕ 10 ಮಿಲಿಯ ಡಾಲರ್ (ಸುಮಾರು 82.5 ಕೋಟಿ ರೂಪಾಯಿ)ಗಿಂತಲೂ ಕಡಿಮೆ ಉತ್ಪತ್ತಿ ಹೊಂದಿವೆ ಹಾಗೂ ಅವುಗಳು ವರ್ಷದಿಂದ ವರ್ಷಕ್ಕೆ ಬೆಳೆಯುವುದೇ ಇಲ್ಲ. ಯಾಕೆ ಹೀಗೆ ಎಂದು ಯಾರಾದರೂ ಯೋಚಿಸಬಹುದು. ಹೆಚ್ಚಿನ ಸಣ್ಣ ಉದ್ದಿಮೆಗಳು ಸಣ್ಣದಾಗಿಯೇ ಉಳಿಯುತ್ತವೆ. ಯಾಕೆಂದರೆ, ಅವುಗಳ ಮಾಲಕರಿಗೆ ಬೆಳೆಯುವುದಕ್ಕೆ ಅಗತ್ಯವಾದ ಮಹತ್ವಾಕಾಂಕ್ಷೆಗಳು, ವಿಶ್ವನೋಟ ಅಥವಾ ಸಾಮರ್ಥ್ಯಗಳಿಲ್ಲ ಎಂಬುದಾಗಿ ಹರ್ಸ್ಟ್ ಮತ್ತು ಪಗ್ಸ್‌ಲೇ 2011ರಲ್ಲಿ ಬರೆದಿದ್ದಾರೆ. ಕೆಲವು ಉದ್ಯಮಿಗಳಿಗೆ ಕಂಪೆನಿಯನ್ನು ಬೆಳೆಸುವ ಮಹತ್ವಾಕಾಂಕ್ಷೆ ಇದೆಯಾದರೂ, ಅದನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಆಡಳಿತ ಜ್ಞಾನದ ಕೊರತೆ, ಬಂಡವಾಳ ಕೊರತೆ, ಸರಕಾರಿ ನಿಯಮಗಳನ್ನು ಪಾಲಿಸುವ ಹೊರೆ ಮತ್ತು ಸಾಮಾಜಿಕ ಬಂಡವಾಳ (ಸಂಪರ್ಕಗಳು) ಕೊರತೆ- ಅದಕ್ಕೆ ಪ್ರಮುಖ ಕಾರಣಗಳು.

ಇಲ್ಲಿ ಇನ್ನೂ ಮೂರು ಪ್ರಮುಖ ಅಂಶಗಳನ್ನು ಗಮನಿಸಬಹುದಾಗಿದೆ. ಮೊದಲನೆಯದು, ಒಟ್ಟು ಉದ್ಯಮಗಳ ಪೈಕಿ ಬೃಹತ್ ಉದ್ಯಮಗಳ ಪ್ರಮಾಣ ಶೇ.2ಕ್ಕಿಂತಲೂ ಕಡಿಮೆಯಾದರೂ, ಉತ್ಪತ್ತಿಗಳಲ್ಲಿ ಪ್ರಮಾಣ ಮೀರಿದ ಪಾಲು ಹೊಂದಿವೆ. ಬೃಹತ್ ಉದ್ಯಮಗಳು ಭಾರತದಲ್ಲಿ ಆರ್ಥಿಕ ಬೆಳವಣಿಗೆಯ ಪ್ರಮುಖ ಚಾಲಕ ಶಕ್ತಿಗಳಾಗಿವೆ ಹಾಗೂ ಮುಂದೆಯೂ ಆಗಿರುತ್ತವೆ. ಅವುಗಳು ಆಡಳಿತಾತ್ಮಕ ಕೌಶಲಗಳನ್ನು ಹೊಂದಿವೆ, ಉದ್ಯೋಗಿಗಳನ್ನು ನೇಮಿಸುವ, ಅವರಿಗೆ ತರಬೇತಿ ನೀಡುವ ಮತ್ತು ಶ್ರೇಷ್ಠ ಪ್ರತಿಭೆಗಳನ್ನು ಉಳಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ ಹಾಗೂ ಆರ್ಥಿಕ ಸಂಪನ್ಮೂಲಗಳನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿವೆ. ಬೃಹತ್ ಕಂಪೆನಿಗಳ ಉತ್ಪತ್ತಿಯು 2020ರ ಕೊರೋನ ವೈರಸ್ ಸಾಂಕ್ರಾಮಿಕದ ದಾಳಿಯ ವೇಳೆ ಕುಸಿದಿತ್ತು. ಆದರೆ, ಅವುಗಳು 2021ರಲ್ಲಿ ಸಂಪೂರ್ಣವಾಗಿ ಚೇತರಿಸಿಕೊಂಡಿವೆ.

ಎರಡನೆಯದು, ಕೆಳ ಮಧ್ಯಮ ಗಾತ್ರದ ಕಂಪೆನಿಗಳಿಗೆ ಹೋಲಿಸಿದರೆ, ಮೇಲ್ಮಧ್ಯಮ ಗಾತ್ರದ ಕಂಪೆನಿಗಳ ಸಂಖ್ಯೆ ತುಂಬಾ ಕಡಿಮೆಯಿದೆ. ಮೇಲ್ಮಧ್ಯಮ ಗಾತ್ರದ ಕಂಪೆನಿಗಳು ಒಟ್ಟು ಉತ್ಪತ್ತಿಯ ಕೇವಲ ಶೇ.10ವನ್ನು ಮಾತ್ರ ತಮ್ಮದಾಗಿಸಿವೆ. ಅಂದರೆ, ತಮ್ಮ ವರ್ಗದ ಬೆಳವಣಿಗೆಯನ್ನು ಖಾತರಿಪಡಿಸಲು ಅವುಗಳು ಸಾಕಷ್ಟು ಸಂಖ್ಯೆಯಲ್ಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಕೆಳ ಮಧ್ಯಮ ಗಾತ್ರದ ಕಂಪೆನಿಗಳು ಒಟ್ಟು ಉತ್ಪತ್ತಿಯ ಶೇ.23ಕ್ಕಿಂತಲೂ ಅಧಿಕ ಭಾಗವನ್ನು ಪಡೆದುಕೊಂಡು ನಿರಂತರ ಅಭಿವೃದ್ಧಿಯನ್ನು ಸಾಧಿಸುತ್ತಿವೆ. ಸಣ್ಣ ಉದ್ದಿಮೆಗಳು ಸಣ್ಣ ಪ್ರಮಾಣದಲ್ಲಿ, ಆದರೂ ನಿರಂತರವಾಗಿ ಕೆಳ ಮಧ್ಯಮ ವರ್ಗಕ್ಕೆ ಹರಿದುಬರುತ್ತಿರುವುದರಿಂದ ಇದು ಸಾಧ್ಯವಾಗಿದೆ.

ಮೂರನೆಯದಾಗಿ, ಸಣ್ಣ ಉದ್ದಿಮೆಗಳು ಅತ್ಯಧಿಕ ಸಂಖ್ಯೆಯಲ್ಲಿದ್ದರೂ ಉದ್ದಿಮೆಗಳ ಒಟ್ಟಾರೆ ಉತ್ಪನ್ನಕ್ಕೆ ಅವುಗಳ ದೇಣಿಗೆ 5ರಿಂದ 7 ಶೇಕಡಾ ಮಾತ್ರ. ಅವುಗಳ ಉತ್ಪತ್ತಿಯ ಪಾಲು ಗಣನೀಯವಾಗಿ ಏರುವ ಸಾಧ್ಯತೆಯಿಲ್ಲದಿದ್ದರೂ, ನವೋದ್ಯಮಗಳು ಮತ್ತು ಸಣ್ಣ ಉದ್ದಿಮೆಗಳ ನಿರಂತರ ಸ್ಥಾಪನೆಯು ಈ ವರ್ಗವನ್ನು ಬಲಪಡಿಸುತ್ತಾ ಹೋಗುತ್ತದೆ.

2016-21ರ ಅವಧಿಯು ಉದ್ಯಮಗಳಿಗೆ ಸಂಕಷ್ಟದ ಕಾಲವಾಗಿತ್ತು. 2017ರ ಸಾಧಾರಣ ಬೆಳವಣಿಗೆಯ ಬಳಿಕ, ಕಾರ್ಪೊರೇಟ್ ಉತ್ಪತ್ತಿಯು 2020ರಲ್ಲಿ ಸಂಪೂರ್ಣವಾಗಿ ಕುಸಿಯಿತು. ಆದರೆ, 2021ರಲ್ಲಿ ಎಲ್ಲಾ ನಾಲ್ಕು ಗಾತ್ರಗಳ ಉದ್ದಿಮೆಗಳು ಪ್ರಬಲವಾಗಿ ಚೇತರಿಸಿಕೊಂಡವು. ಮೇಲ್ಮಧ್ಯಮ ಮತ್ತು ಕೆಳಮಧ್ಯಮ ವರ್ಗಗಳ ಉದ್ದಿಮೆಗಳು ಈ ಅವಧಿಯಲ್ಲಿ ಅತ್ಯುತ್ತಮ ನಿರ್ವಹಣೆ ನೀಡಿದವು. ಇದು, ಈ ಗಾತ್ರದ ಉದ್ದಿಮೆಗಳ ವರ್ಗದಲ್ಲಿ ಬರುವ ಹಲವು ಕಂಪೆನಿಗಳು ಮುಂದಿನ ದಶಕದಲ್ಲಿ ಉತ್ತಮ ಬೆಳವಣಿಗೆಯನ್ನು ಸಾಧಿಸಬಹುದು ಎನ್ನುವ ಭರವಸೆಯನ್ನು ನೀಡಿದೆ.

ಆರ್ಥಿಕ ಬೆಳವಣಿಗೆಗೆ ಶಕ್ತಿಯನ್ನು ತುಂಬುವುದು ಉದ್ದಿಮೆಗಳು. ಅವುಗಳ ಎದ್ದು ಕಾಣುವ ಪಾತ್ರವೆಂದರೆ, ಶ್ರಮ, ಬಂಡವಾಳ ಮತ್ತು ಇತರ ಸಂಪನ್ಮೂಲಗಳನ್ನು ಒಗ್ಗೂಡಿಸಿ ಗ್ರಾಹಕರು ಬಯಸುವ ವಸ್ತುಗಳು ಮತ್ತು ಸೇವೆಗಳನ್ನು ನೀಡುವುದು. ಗಮನಕ್ಕೆ ಹೆಚ್ಚಾಗಿ ಬಾರದ ಅದರ ಪಾತ್ರವೆಂದರೆ, ಅದು ಬದಲಾವಣೆಯ ಹರಿಕಾರನಾಗಿರುವುದು. 75 ವರ್ಷಗಳ ಹಳೆಯ ಆರ್ಥಿಕತೆಯ ಸ್ಥಾನದಲ್ಲಿ ಹೊಸದನ್ನು ತರಲು ಖಂಡಿತವಾಗಿಯೂ ಹೊಸ ಕಲ್ಪನೆಗಳು, ತಂತ್ರಜ್ಞಾನಗಳು,ವ್ಯಾಪಾರ ಮಾದರಿಗಳು ಮತ್ತು ಹಿನ್ನೆಲೆ ಪರಿಸರಗಳು ಬೇಕು.

ಭಾರತೀಯ ಉದ್ದಿಮೆಗಳಿಗೆ ಸಂಬಂಧಿಸಿದ ಸರಕಾರಿ ನೀತಿಗಳು ಎರಡು ಉದ್ದೇಶಗಳನ್ನು ಸಾಧಿಸುವ ಗುರಿಯನ್ನು ಹೊಂದಿರಬೇಕು. ಮೊದಲನೆಯದು, ಎಲ್ಲಾ ಗಾತ್ರಗಳ ಉದ್ದಿಮೆಗಳ ಸಂಖ್ಯೆಯನ್ನು ಹೆಚ್ಚಿಸುವುದು. ಇತರ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ಕಡಿಮೆ ಬೃಹತ್ ಮತ್ತು ಮಧ್ಯಮ ಗಾತ್ರದ ಕಂಪೆನಿಗಳಿವೆ. ಭಾರತೀಯ ಬೃಹತ್ ಉದ್ದಿಮೆಗಳಿಗೆ ಹೋಲಿಸಿದರೆ, ಚೀನಾದಲ್ಲಿ ಎರಡು ಪಟ್ಟು ಮತ್ತು ದಕ್ಷಿಣ ಕೊರಿಯದಲ್ಲಿ ಮೂರು ಪಟ್ಟು ಅಂಥ ಉದ್ದಿಮೆಗಳಿವೆ ಎಂದು ಮೆಕಿನ್ಸಿ ಗ್ಲೋಬಲ್ ಇನ್‌ಸ್ಟಿಟ್ಯೂಟ್ (ಎಮ್‌ಜಿಐ) ಹೇಳಿದೆ. ಉದ್ಯಮಶೀಲತೆಯನ್ನು ರಾಷ್ಟ್ರೀಯ ಮೋಹವಾಗಿಸಲು ತಳಮಟ್ಟದಲ್ಲಿ ನಡೆಸುವ ಪ್ರಯತ್ನಗಳು ಭಾರತದ ಸ್ಥಿತಿಗತಿಯನ್ನು ಬದಲಿಸಬಹುದು.

ಸರಕಾರಿ ನೀತಿಗಳ ಇನ್ನೊಂದು ಉದ್ದೇಶವು, ತಮ್ಮ ಉತ್ಪಾದಕತೆಯನ್ನು ಹೆಚ್ಚಿಸಲು ಎಲ್ಲಾ ಗಾತ್ರಗಳ ಉದ್ದಿಮೆಗಳಿಗೆ ನೆರವು ನೀಡುವುದಾಗಬೇಕು. ಭಾರತದ ಅತಿ ದೊಡ್ಡ ಹಾಗೂ ಅತ್ಯಂತ ಉತ್ಪಾದನಾಶೀಲ ಕಂಪೆನಿಗಳೂ ತಮ್ಮ ಸಮಾನ ವಿದೇಶಿ ಕಂಪೆನಿಗಳಿಗೆ ಹೋಲಿಸಿದರೆ ಉತ್ಪಾದನಶೀಲತೆಯಲ್ಲಿ ಹಿಂದೆ ಬೀಳುತ್ತವೆ. ಚೀನಾ, ದಕ್ಷಿಣ ಕೊರಿಯ, ಮಲೇಶ್ಯ ಮತ್ತು ಥಾಯ್ಲೆಂಡ್‌ನ ಸಾಧಾರಣ ಕಂಪೆನಿಗಳೂ ತಮ್ಮ ಸಮಾನ ಭಾರತೀಯ ಕಂಪೆನಿಗಳಿಗೆ ಹೋಲಿಸಿದರೆ ಗಣನೀಯ ಪ್ರಮಾಣದಲ್ಲಿ ಹೆಚ್ಚಿನ ಉತ್ಪಾದನಾಶೀಲತೆಯನ್ನು ಹೊಂದಿವೆ. ತಮ್ಮ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಹಾಗೂ ಕ್ಷಿಪ್ರವಾಗಿ ಪರಿಹರಿಸಿಕೊಳ್ಳಲು ಉದ್ದಿಮೆಗಳಿಗೆ ನೆರವು ನೀಡುವ ಪರಿಸರವೊಂದನ್ನು ಸೃಷ್ಟಿಸುವುದು ಭಾರತದ ಗುರಿಯಾಗಬೇಕು.

ಕೃಪೆ: ಖಿhePಡಿiಟಿಣ

Writer - ರಾಮ್ ಶಿವಕುಮಾರ್

contributor

Editor - ರಾಮ್ ಶಿವಕುಮಾರ್

contributor

Similar News