×
Ad

ಟ್ರಕ್‌ಗೆ ಡಬಲ್ ಡೆಕ್ಕರ್ ಬಸ್ ಡಿಕ್ಕಿ: ಭಾರತೀಯ ಸೇನೆಯ ಯೋಧ ಮೃತ್ಯು, 8 ಮಂದಿ ಚಿಂತಾಜನಕ

Update: 2022-10-12 14:53 IST
ಸಾಂದರ್ಭಿಕ ಚಿತ್ರ 

ಹೊಸದಿಲ್ಲಿ: ನೋಯ್ಡಾ ಬಳಿಯ ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಮಂಗಳವಾರ ಬೆಳಗ್ಗೆ 70 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ಡಬಲ್ ಡೆಕ್ಕರ್ ಬಸ್ ಕಲ್ಲು ತುಂಬಿದ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಭಾರತೀಯ ಸೇನೆಯ ಯೋಧನೊಬ್ಬ ಸಾವನ್ನಪ್ಪಿದ್ದು, An Indian Army soldier died ಎಂಟು ಮಂದಿಯ ಸ್ಥಿತಿ  ಚಿಂತಾಜನಕವಾಗಿದೆ ಎಂದು NDTV ವರದಿ ಮಾಡಿದೆ.

ಗೋರಖ್‌ಪುರದಿಂದ ಲೂಧಿಯಾನಕ್ಕೆ ತೆರಳುತ್ತಿದ್ದ ಬಸ್ಸಿನ ಒಂದು ಭಾಗವನ್ನು ತುಂಡರಿಸಿ ಒಳಗೆ ಸಿಲುಕಿದ್ದ ಪ್ರಯಾಣಿಕರನ್ನು ರಕ್ಷಿಸಲಾಯಿತು.

ಬಸ್ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡು ಹಿಂದಿನಿಂದ ಟ್ರಕ್‌ಗೆ ಅತಿ ವೇಗದಿಂದ ಡಿಕ್ಕಿ ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಬಸ್ ಎಕ್ಸ್‌ಪ್ರೆಸ್‌ವೇಯಿಂದ ಬಿದ್ದಿದೆ.

ವಾಹನದ ಒಂದು ಭಾಗವನ್ನು ಕತ್ತರಿಸಿದ ನಂತರ ಗಾಯಗೊಂಡ ಪ್ರಯಾಣಿಕರನ್ನು ಗ್ರೇಟರ್ ನೋಯ್ಡಾದ ಎರಡು ಆಸ್ಪತ್ರೆಗಳಿಗೆ ರವಾನಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ (ಎಡಿಸಿಪಿ) ವಿಶಾಲ್ ಪಾಂಡೆ ತಿಳಿಸಿದ್ದಾರೆ.

ಡೋಗ್ರಾ ರೆಜಿಮೆಂಟ್ ಯೋಧ ಲವಿ ಕುಮಾರ್ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದು, ಎಂಟು ಮಂದಿ ಚಿಂತಾಜನಕ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News