ಲಕ್ಷ್ಮಣ ರೇಖೆಯ ಅರಿವಿದೆ, ಆದರೆ ನೋಟ್ ಬ್ಯಾನ್ ಕುರಿತು ವಿಚಾರಣೆ ನಡೆಸುತ್ತೇವೆ: ಸುಪ್ರೀಂ ಕೋರ್ಟ್
ಹೊಸದಿಲ್ಲಿ,ಅ.12: ಸರಕಾರದ ನೀತಿ ನಿರ್ಧಾರಗಳ ಕುರಿತು ನ್ಯಾಯಾಂಗದವಿಮರ್ಶೆಗೆ ಒಳಪಡಿಸುವುದಕ್ಕೆ ಒಂದು ‘ಲಕ್ಷಣ ರೇಖೆ’ಯಿದೆಯೆಂಬದು ತನಗೆ ಅರಿವಿದೆ. ಆದಾಗ್ಯೂ 2016ರ ನಗದು ಅಮಾನ್ಯೀಕರಣದ ಕೇಂದ್ರ ಸರಕಾರದ ನಿರ್ಧಾರದ ಬಗ್ಗೆ ತಾನು ಪರಿಶೀಲನೆ ನಡೆಸುವುದಾಗಿ ೆ ಎಂದು ಸುಪ್ರೀಂಕೋರ್ಟ್ ಬುಧವಾರ ತಿಳಿಸಿದೆ. ಯಾವುದೇ ವಿಷಯವು ಸಾಂವಿಧಾನಿಕ ಪೀಠದ ಮುಂದೆ ಬಂದಾಗ, ಅದಕ್ಕೆ ಉತ್ತರಿಸುವುದು ಅದರ ಕರ್ತವ್ಯವಾಗುತ್ತದೆ ಎಂದು ನ್ಯಾಯಮೂರ್ತಿ ಎಸ್.ಎ. ನಝೀರ್ ನೇತೃತ್ವದ ನ್ಯಾಯಪೀಠ ತಿಳಿಸಿದೆ.
ನಗದು ಅಮಾನ್ಯೀಕರಣದ ಕಾಯ್ದೆಯನ್ನು ಸಮರ್ಪಕ ಗ್ರಹಿಕೆಯೊಂದಿಗೆ ಪ್ರಶ್ನಿಸಿದೇ ಇದ್ದಲ್ಲಿ ಆ ವಿಷಯವು ಕೇವಲ ಶೈಕ್ಷಣಿಕ ಚರ್ಚಾವಿಷಯವಾಗಿ ಉಳಿಯುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಿಸಿದೆ.
ಅಧಿಕ ಮುಖಬೆಲೆಯ ಬ್ಯಾಂಕ್ ನೋಟುಗಳ (ನಗದು ಅಮಾನ್ಯೀಕರಣ) ಕಾಯ್ದೆಯು 1978ರಲ್ಲಿ ಅಂಗೀಕಾರಗೊಂಡಿತ್ತು.. ದೇಶದ ಆರ್ಥಿಕತೆಗೆ ಹಾನಿಕರವಾದ ಅಕ್ರಮ ಹಣ ವರ್ಗಾವಣೆಯನ್ನು ನಿರ್ಬಂಧಿಸುವ ಉದ್ದೇಶದಿಂದ ಈ ಕಾಯ್ದೆ ಜಾರಿಗೆ ಬಂದಿತ್ತು.
ನಗದು ಅಮಾನ್ಯೀಕರಣ ಪ್ರಕ್ರಿಯೆಯು ಕೇವಲ ಶೈಕ್ಷಣಿಕ ಸ್ವರೂಪದ್ದೇ ಅಥವಾ ಅಲ್ಲವೇ ಮತ್ತು ನ್ಯಾಯಾಂಗದ ಪರಾಮರ್ಶೆಗೆ ಒಳಪಡತಕ್ಕದ್ದೇ ಎಂಬ ಬಗ್ಗೆ ವಿಚಾರಣೆ ನಡೆಸಿ ನಾವು ಉತ್ತರಿಸಲಿದ್ದೇವೆ ಎಂದರು.
‘‘ಸರಕಾರದ ನೀತಿನಿರ್ಧಾರಗಳ ವಿಮರ್ಶೆಗೆ ನ್ಯಾಯಾಲಯಕ್ಕೊಂದು ಲಕ್ಷ್ಮಣ ರೇಖೆಯಿರುತ್ತದೆ , ಆದರೆ ಅದನ್ನು ನಡೆಸಿರುವ ರೀತಿಯನ್ನು ಪರಿಶೀಲಿಸಬಹುದಾಗಿದೆ. ಅದನ್ನು ನಿರ್ಧರಿಸಲು ನಾವುವಿಷಯದ ವಿಚಾರಣೆ ನಡೆಸಬೇಕಾಗಿದೆ’’ಎಂದು ಬಿ.ಆರ್.ಗವಾಯಿ, ಎ.ಎಸ್.ಬೋಪಣ್ಣ, ವಿ. ಬಾಲಸುಬ್ರಮಣಿಯನ್ ಹಾಗೂ ಬಿ.ವಿ. ನಾಗರತ್ನ ಅವರನ್ನೂ ಕೂಡಾ ಒಳಗೊಂಡಿರುವ ನ್ಯಾಯಪೀಠ ತಿಳಿಸಿತು.
ಸಾಲಿಸಿಟರ್ ಜನರಲ್ ತುಶಾರ್ ಮೆಹ್ತಾ ಅವರು ಸರಕಾರದ ಪರವಾಗಿ ವಾದ ಮಂಡಿಸುತ್ತಾ ಇಂತಹ ‘ಶೈಕ್ಷಣಿಕ ಚರ್ಚೆ’ಯ ವಿಷಯಗಳಿಗಾಗಿ ನ್ಯಾಯಾಲಯದ ಸಮಯವನ್ನು ವ್ಯರ್ಥಗೊಳಿಸಬಾರದು ಎಂದರು.
ತುಷಾರ್ ಮೆಹ್ತಾ ಅವರ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹಿರಿಯ ನ್ಯಾಯವಾದಿ ಶ್ಯಾಮ್ ದಿವಾನ್ ಅವರು, ನಗದು ಅಮಾನ್ಯೀಕರಣದಂತಹ ವಿಷಯಗಳ ಬಗ್ಗೆ ವಿಚಾರಣೆ ನಡೆಸುವುದರಿಂದ ನ್ಯಾಯಾಲಯದ ಸಮಯ ವ್ಯರ್ಥವಾಗುತ್ತದೆ ಎಂಬ ಸಾಲಿಸಿಟರ್ ಜನರಲ್ ಅವರ ವಾದವು ತನಗೆ ಅಚ್ಚರಿಯುಂಟು ಮಾಡಿದೆ ಎಂದರು. ಇಂತಹ ಪ್ರಕರಣಗಳನ್ನು ಸಾಂವಿಧಾನಿಕ ಪೀಠದ ಮುಂದಿರಿಸಬೇಕು ಎಂದರು.
ಕಕ್ಷಿದಾರರಲ್ಲೊಬ್ಬರ ಪರವಾಗಿ ವಾದಿಸಿದ ಹಿರಿಯ ನ್ಯಾಯವಾದಿ ಪಿ.ಚಿದಂಬರಂ ಅವರು ಈ ವಿಷಯವು ಶೈಕ್ಷಣಿಕವಾದುದದಲ್ಲಿ ಹಾಗೂ ಅದನ್ನು ಸರ್ವೋಚ್ಛ ನ್ಯಾಯಾಲಯ ನಿರ್ಧರಿಸಬೇಕಾಗಿದೆ ಎಂದರು