ಅಸ್ಸಾಂ: ಯುವಕರಿಗೆ ಚಿತ್ರಹಿಂಸೆ, ಲೈಂಗಿಕ ದೌರ್ಜನ್ಯ; ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಿದ ಮಾನವ ಹಕ್ಕುಗಳ ಆಯೋಗ

Update: 2022-10-12 18:14 GMT
PC: eastmojo

ಅಸ್ಸಾಂ: ಕಸ್ಟಡಿಯಲ್ಲಿದ್ದಾಗ ಹತ್ತು ಯುವಕರಿಗೆ ಚಿತ್ರಹಿಂಸೆ ಮತ್ತು ಲೈಂಗಿಕ ಕಿರುಕುಳ ನೀಡಿದ ಘಟನೆಗೆ ಸಂಬಂಧಿಸಿದಂತೆ ಅಸ್ಸಾಂ ಮಾನವ ಹಕ್ಕುಗಳ ಆಯೋಗವು ಬುಧವಾರ ರಾಜ್ಯ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಿದೆ ಎಂದು ಅಧಿಕಾರಿಯೊಬ್ಬರು Scroll.in ಗೆ ತಿಳಿಸಿದ್ದಾರೆ. ಕಳೆದ ವಾರ ದಿಬ್ರುಗಢ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಪ್ರವಾಸೋದ್ಯಮ ಉದ್ಯಮಿ ಗ್ಯಾಂಡಿಪ್ ಬೊರ್ಗೊಹೈನ್ ಪರವಾಗಿ ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಅಖಿಲ ಭಾರತೀಯ ಕಿಸಾನ್ ಸಭಾದ ಸದಸ್ಯರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಅಕ್ಟೋಬರ್ 7 ರಂದು ಅಧಿಕಾರಿ ಬಿಜೋಯ್ ಡೈಮರಿ ಮತ್ತು ಮೂವರು ನಾಗರಿಕರು ಜಿಲ್ಲೆಯ ಮೊರಾನ್ ಪೊಲೀಸ್ ಠಾಣೆಯಲ್ಲಿ ಹಲವಾರು ಗಂಟೆಗಳ ಕಾಲ ತನಗೆ, ತನ್ನ ಸಿಬ್ಬಂದಿ ಮತ್ತು ತನ್ನ ಕೆಲವು ಸ್ನೇಹಿತರನ್ನು ಥಳಿಸಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಬೊರ್ಗೊಹೈನ್ ಆರೋಪಿಸಿದ್ದಾರೆ.

"ಮೊರನ್ ಪೊಲೀಸ್ ಠಾಣೆಯಲ್ಲಿ, ನಾವೆಲ್ಲರೂ ನಿಂತಿದ್ದೆವು, ಅಲ್ಲಿ ಇಬ್ಬರು ನಾಗರಿಕರ ಜೊತೆಗೆ ಪೊಲೀಸರು ನಮ್ಮ ಮೇಲೆ ದಾಳಿ ಮಾಡಿದ್ದಾರೆ" ಎಂದು ಬೋರ್ಗೊಹೈನ್ ಹೇಳಿ. "ನಮ್ಮನ್ನು ಪೊಲೀಸ್ ಠಾಣೆಗೆ ಏಕೆ ಕರೆತರಲಾಗಿದೆ ಎಂದು ಕೇಳಿದ್ದಕ್ಕೆ ತನ್ನ ತೊಡೆ ಸಂದು ಭಾಗಕ್ಕೆ ಒದ್ದು ದೌರ್ಜನ್ಯ ನಡೆಸಲಾಗಿದೆ." ಎಂದು ಆರೋಪಿಸಿದ್ದಾರೆ. 

ಇಬ್ಬರು ನಾಗರಿಕರ ಜೊತೆಗೂಡಿ ಪೊಲೀಸರು ತಮ್ಮ ತಂಡವನ್ನು ಅಪಹರಿಸಿ ಲೈಂಗಿಕವಾಗಿ ಹಲ್ಲೆ ನಡೆಸಿದರು ಎಂದು ಬೋರ್ಗೊಹೈನ್ ಮತ್ತು ಇತರರು ಆರೋಪಿಸಿದ್ದಾರೆ. ಹಲವಾರು ಗಂಟೆಗಳ ಕಾಲ ಶಸ್ತ್ರಾಸ್ತ್ರಗಳು ಮತ್ತು ಪೊಲೀಸ್ ಲಾಠಿಗಳಿಂದ ನಮ್ಮನ್ನು ಹಿಂಸಿಸಿದರು ಎಂದು ಅವರು ಹೇಳಿದ್ದಾರೆ. ಸಂತ್ರಸ್ತರಲ್ಲಿ ನಾಗಾಲ್ಯಾಂಡ್‌ನ ವೆಸ್ಟರ್ನ್ ಅಂಗಮಿ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕೆವಿಲೆಟೊ ವಿಸೊ ಕೂಡ ಸೇರಿದ್ದಾರೆ. ಇವರು ಹಾರ್ನ್‌ಬಿಲ್ ಉತ್ಸವಕ್ಕೆ ಭೇಟಿ ನೀಡುವವರಿಗೆ ಶಿಬಿರವನ್ನು ಆಯೋಜಿಸಲು ತಂಡಕ್ಕೆ ಸಹಾಯ ಮಾಡುತ್ತಿದ್ದರು ಎಂದು ವರದಿಯಾಗಿದೆ.

ಘಟನೆಯನ್ನು ಖಂಡಿಸಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ, ಆಲ್ ಅಸ್ಸಾಂ ತೈ-ಅಹೋಮ್ ಸ್ಟೂಡೆಂಟ್ಸ್ ಯೂನಿಯನ್, ಅಸೋಮ್ ಜತಿಯತಬಾದಿ ಯುಬಾ-ಛತ್ರ ಪರಿಷತ್ (ಎಜೆವೈಸಿಪಿ), ಆಲ್ ಅಸ್ಸಾಂ ಆದಿವಾಸಿ ವಿದ್ಯಾರ್ಥಿಗಳ ಒಕ್ಕೂಟ, ಆಲ್ ಡಿಯೋರಿ ವಿದ್ಯಾರ್ಥಿಗಳ ಒಕ್ಕೂಟ, ಆಲ್ ಮೆಚ್ ಸ್ಥಳೀಯ ಅಧ್ಯಾಯಗಳು ಸೇರಿದಂತೆ ಹಲವಾರು ಸ್ಥಳೀಯ ಸಂಸ್ಥೆಗಳು ಪ್ರತಿಭಟನೆ ನಡೆಸುತ್ತಿದ್ದು, ಆರೋಪಿ ಪೊಲೀಸ್ ಅಧಿಕಾರಿಗಳು ಮತ್ತು ಚಿತ್ರಹಿಂಸೆ ಪ್ರಕರಣದಲ್ಲಿ ಭಾಗಿಯಾಗಿರುವ ನಾಗರಿಕರನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.  

ಮಾಹಿತಿ ಕೃಪೆ: Scroll.in, eastmojo.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News