×
Ad

7 ನವಜಾತ ಶಿಶುಗಳ ಹತ್ಯೆಗೈದ ನರ್ಸ್

Update: 2022-10-13 23:27 IST

ಲಂಡನ್, ಅ.13: 7 ನವಜಾತ ಶಿಶು(newborn baby)ಗಳನ್ನು ಹತ್ಯೆಗೈದ ಆರೋಪಿ ವಾಯವ್ಯ ಬ್ರಿಟನ್‌ನ ಕೌಂಟೆಸ್ ಆಫ್ ಚೆಸ್ಟರ್ (Countess of Chester) ಆಸ್ಪತ್ರೆಯ ನರ್ಸ್ ಲೂಸಿ ಲೆಟ್ಬಿ(Nurse Lucy Letby)ಯ ವಿರುದ್ದದ ಕಾನೂನು ಪ್ರಕ್ರಿಯೆ ಆರಂಭವಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.

2015ರ ಜೂನ್‌ನಿಂದ 2016ರ ಜೂನ್‌ವರೆಗಿನ ಅವಧಿಯಲ್ಲಿ 7 ಶಿಶುಗಳನ್ನು ಹತ್ಯೆ ಮಾಡಿರುವ ಮತ್ತು 10 ಶಿಶುಗಳ ಹತ್ಯೆಗೆ ಪ್ರಯತ್ನಿಸಿದ ಆರೋಪ ಲೂಸಿಯ ಮೇಲಿದೆ.

ಈಕೆ ಆಸ್ಪತ್ರೆಯ ನವಜಾತ ಶಿಶುಗಳ ವಿಭಾಗದಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಳು. ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಮರಣದ ಪ್ರಮಾಣ ಏಕಾಏಕಿ ಹೆಚ್ಚಿದ್ದರಿಂದ ಆತಂಕದ ಸ್ಥಿತಿ ನೆಲೆಸಿತ್ತು. ಶಿಶುಗಳು ಹಠಾತ್ತಾಗಿ ಅಸ್ವಸ್ಥಗೊಂಡು ಸಾವನ್ನಪ್ಪುತ್ತಿದ್ದವು. ಲೂಸಿ ಕರ್ತವ್ಯ ನಿರ್ವಹಿಸುತ್ತಿದ್ದ ಪಾಳಿಯ ಸಂದರ್ಭ ಇಂತಹ ಪ್ರಕರಣ ಹೆಚ್ಚಿರುವುದು ಬೆಳಕಿಗೆ ಬಂದ ಬಳಿಕ ಸೂಕ್ತ ತನಿಖೆ ನಡೆಸಿದಾಗ ಈಕೆ ನವಜಾತ ಶಿಶುಗಳಿಗೆ ವಿಷದ ಇಂಜೆಕ್ಷನ್ ನೀಡುತ್ತಿರುವುದು ಪತ್ತೆಯಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾರೆ.

ಎಲ್ಲಾ ಹತ್ಯೆಗಳಿಗೆ ತುಸು ವಿಭಿನ್ನ ವಿಧಾನಗಳನ್ನು ಲೂಸಿ ಬಳಸಿದ್ದಾಳೆ. ಶಿಶುಗಳ ಹತ್ಯೆಯ ಬಳಿಕ ನರ್ಸ್ ಲೂಸಿ ತನ್ನ ಕೃತ್ಯವನ್ನು ಮರೆಮಾಚಲು  ಮೋಸದ ಶುಶ್ರೂಷಾ ಟಿಪ್ಪಣಿ (Nursing note)ಗಳನ್ನು ಮಾಡಿಕೊಳ್ಳುತ್ತಿದ್ದಳು. ಶಿಶುಗಳು ನೈಸರ್ಗಿಕ ಕಾರಣಗಳಿಂದ ಮೃತಪಟ್ಟಿವೆ ಎಂದು ತನ್ನ ಸ್ನೇಹಿತೆಯರಿಗೆ ಸಂದೇಶ ರವಾನಿಸುತ್ತಿದ್ದಳು ಎಂದು ವಕೀಲರು ವಾದ ಮಂಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News