ಏಶ್ಯಾಕಪ್‌ ಮಹಿಳಾ ಕ್ರಿಕೆಟ್‌ ಫೈನಲ್‌ ಪಂದ್ಯಾಟದಲ್ಲಿ ಶ್ರೀಲಂಕಾ ವಿರುದ್ಧ ಭಾರತ ಜಯಭೇರಿ

Update: 2022-10-15 09:44 GMT
Photo: Twitter/ICC

ಸಿಲ್ಹೆಟ್:‌ ಇಲ್ಲಿನ ಸಿಲ್ಹೆಟ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಶ್ಯಾಕಪ್‌ ಕ್ರಿಕೆಟ್‌ ನ ಫೈನಲ್‌ ಪಂದ್ಯಾಟದಲ್ಲಿ ಶ್ರೀಲಂಕಾ ತಂಡವನ್ನು ಭಾರತ ಮಹಿಳಾ ತಂಡ ಸೋಲಿಸುವ ಮೂಲಕ ಸರಣಿಯನ್ನು ತನ್ನ ಮುಡಿಗೇರಿಸಿದೆ. ಶ್ರೀಲಂಕಾ ತಂಡವನ್ನು ಅತಿಕಡಿಮೆ ಮೊತ್ತಕ್ಕೆ ಕಟ್ಟಿಹಾಕಿದ್ದ ಭಾರತ ತಂಡವು ಕೇವಲ 2 ವಿಕೆಟ್‌ ನಷ್ಟಕ್ಕೆ ಗುರಿ ಮುಟ್ಟಿತು. 

ಮೊದಲು ಬ್ಯಾಟಿಂಗ್‌ ಮಾಡಿದ್ದ ಶ್ರೀಲಂಕಾ ತಂಡದಲ್ಲಿ ಇಬ್ಬರು ಆಟಗಾರ್ತಿಯರು ಮಾತ್ರ ಎರಡಂಕೆಯ ಗಡಿ ದಾಟಿದರು. ರೇಣುಕಾ ಸಿಂಗ್‌ ಮೂರು ವಿಕೆಟ್‌ ಗಳಿಸಿದರೆ, ಸ್ನೇಹ್‌ ರಾಣಾ ಹಾಗೂ ಗಾಯಕ್ವಾಡ್‌ ತಲಾ ಎರಡು ವಿಕೆಟ್‌ ಗಳಿಸಿದರು. ಇವರ ಬೌಲಿಂಗ್‌ ದಾಳಿಯ ಕಾರಣದಿಂದ 20 ಓವರ್‌ ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ ಕೇವಲ 65 ರನ್‌ ಗಳಿಸಲಷ್ಟೇ ಶ್ರೀಲಂಕಾ ತಂಡ ಶಕ್ತವಾಯಿತು.

ಬಳಿಕ ಬ್ಯಾಟಿಂಗ್‌ ಮಾಡಿದ ಭಾರತ ತಂಡದಲ್ಲಿ ಸ್ಮೃತಿ ಮಂದಾನ 51 ರನ್ ಹಾಗೂ ಹರ್ಮನ್‌ ಪ್ರೀತ್‌ ಕೌರ್‌ ಆಟದ ನೆರವಿನಿಂದ ಎರಡು ವಿಕೆಟ್‌ ನಷ್ಟಕ್ಕೆ ಗುರಿ ಮುಟ್ಟಿದ ತಂಡವು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News