ಯುದ್ಧ ಪೀಡಿತ ಉಕ್ರೇನ್ಗೆ ನೆರವು ಘೋಷಿಸಿದ ಸೌದಿ ಅರೇಬಿಯಾ

Update: 2022-10-15 16:44 GMT

ರಿಯಾದ್: ರಷ್ಯಾ ಆಕ್ರಮಣದಿಂದ ಕಂಗೆಟ್ಟಿರುವ ಉಕ್ರೇನ್ಗೆ 400 ದಶಲಕ್ಷ ಡಾಲರ್ ಮಾನವೀಯ ನೆರವು ನೀಡಲು ಸೌದಿ ಅರೇಬಿಯಾ ಮುಂದಾಗಿದೆ.

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರಿಗೆ ಶುಕ್ರವಾರ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ (Crown Prince Mohammed bin Salman) ಈ ಮಾನವೀಯ ನೆರವು ಪ್ರಕಟಿಸಿದ್ದಾರೆ ಎಂದು ಸರ್ಕಾರಿ ಸುದ್ದಿಸಂಸ್ಥೆ ಎಸ್ಪಿಎ ವರದಿ ಮಾಡಿದೆ.

ಯುದ್ಧ ಸಂಘರ್ಷ ಸ್ಥಿತಿಯನ್ನು ತಿಳಿಗೊಳಿಸಲು ಮಧ್ಯಸ್ಥಿಕೆ ನಡೆಸುವ ಪ್ರಯತ್ನವನ್ನು ಮುಂದುವರಿಸಲು ಸೌದಿ ಅರೇಬಿಯಾ ಬದ್ಧ ಎಂದು ಮೊಹಮ್ಮದ್ ಬಿನ್ ಸಲ್ಮಾನ್ ಈ ಸಂದರ್ಭದಲ್ಲಿ ಹೇಳಿದರು. ಜತೆಗೆ ಅಗತ್ಯ ನೆರವು ನೀಡಲು ಕೂಡಾ ಬದ್ಧ ಎಂದು ತಿಳಿಸಿದರು ಎಂದು ಎಸ್ಪಿಎ ಹೇಳಿದೆ. ಈ ಬಗ್ಗೆ ndtv.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News