ರಷ್ಯಾ ಸೇನಾ ತರಬೇತಿ ಮೈದಾನದಲ್ಲಿ ದಾಳಿ: ಕನಿಷ್ಠ 11 ಮಂದಿ ಮೃತ್ಯು

Update: 2022-10-16 01:49 GMT

ಮಾಸ್ಕೊ: ಉಕ್ರೇನ್ ಯುದ್ಧದಲ್ಲಿ ಭಾಗವಹಿಸಲು ಉದ್ದೇಶಿಸಿದ್ದ ರಷ್ಯಾದ ಸ್ವಯಂಸೇವಕರತ್ತ ಇಬ್ಬರು ಅಪರಿಚಿತರು ಗುಂಡಿನ ದಾಳಿ ನಡೆಸಿದ ಘಟನೆಯಲ್ಲಿ ಕನಿಷ್ಠ 11 ಮಂದಿ ಮೃತಪಟ್ಟು, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ರಷ್ಯಾದ ಮಿಲಿಟರಿ ತರಬೇತಿ ಮೈದಾನದಲ್ಲಿ ಈ ದಾಳಿ ನಡೆದಿದೆ ಎಂದು ಆರ್‌ಐಎ ಸುದ್ದಿಸಂಸ್ಥೆ (RIA news agency) ವರದಿ ಮಾಡಿದೆ.

ಫೆಬ್ರುವರಿ 24ರಂದು ಉಕ್ರೇನ್ ಮೇಲೆ ದಾಳಿ ಮಾಡಿದ ಬಳಿಕ ರಷ್ಯಾಗೆ ಆಗಿರುವ ದೊಡ್ಡ ಹಿನ್ನಡೆಗಳ ಸರಣಿಯಲ್ಲಿ ಈ ಘಟನೆ ಇತ್ತೀಚಿನದು ಎಂದು ವಿಶ್ಲೇಷಿಸಲಾಗುತ್ತಿದೆ.

ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ವಿಶೇಷ ಮಿಲಿಟರಿ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲು ಅಪೇಕ್ಷಿಸಿದ ಸ್ವಯಂಸೇವಕರಿಗಾಗಿ ಬಂದೂಕು ತರಬೇತಿ ನಡೆಯುತ್ತಿದ್ದ ವೇಳೆ ಉಗ್ರರು ಸೇನಾ ಸಿಬ್ಬಂದಿ ಮೇಲೆ ಈ ದಾಳಿ ನಡೆಸಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಹೇಳಿಕೆಯನ್ನು ಉಲ್ಲೇಖಿಸಿ RIA ವರದಿ ಮಾಡಿದೆ.

ಉಕ್ರೇನ್ ಗಡಿಗೆ ಹೊಂದಿಕೊಂಡಿರುವ ನೈರುತ್ಯ ಬೆಲ್ಗಾರ್ಡ್ ಪ್ರದೇಶದಲ್ಲಿ ನಡೆದ ಈ ಘಟನೆಯಲ್ಲಿ ಇಬ್ಬರು ದಾಳಿಕೋರರನ್ನು ತಕ್ಷಣವೇ ಹತ್ಯೆ ಮಾಡಲಾಗಿದೆ. ಇಬ್ಬರೂ ಮಾಜಿ ಸೋವಿಯತ್ ರಿಪಬ್ಲಿಕ್‍ನ ರಾಷ್ಟ್ರೀಯತೆ ಹೊಂದಿದ್ದವರು ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಆದರೆ ಈ ಬಗ್ಗೆ ಹೆಚ್ಚಿನ ವಿವರ ನೀಡಿಲ್ಲ ಎಂದು timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News