×
Ad

ವೈಎಸ್‌ಆರ್‌ಸಿ ನಾಯಕಿ ರೋಜಾ ಕಾರಿನ ಮೇಲೆ ನಟ ,ರಾಜಕಾರಣಿ ಪವನ್ ಕಲ್ಯಾಣ್ ಬೆಂಬಲಿಗರ ದಾಳಿ

Update: 2022-10-16 10:43 IST
ಆರ್‌.ಕೆ. ರೋಜಾ, Photo:twitter

ವಿಶಾಖಪಟ್ಟಣ: ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿ) ನಾಯಕಿ ಆರ್‌.ಕೆ. ರೋಜಾ ಅವರ ಕಾರಿನ ಮೇಲೆ ನಟ ಹಾಗೂ  ರಾಜಕಾರಣಿ ಪವನ್ ಕಲ್ಯಾಣ್ ಬೆಂಬಲಿಗರು ನಿನ್ನೆ ವಿಶಾಖಪಟ್ಟಣ ವಿಮಾನ ನಿಲ್ದಾಣದ ಹೊರಗೆ ದಾಳಿ ನಡೆಸಿದ್ದಾರೆ ಎಂದು NDTV ವರದಿ ಮಾಡಿದೆ.

ಜೋಗಿ ರಮೇಶ್ ಹಾಗೂ  ಟಿಟಿಡಿ ಅಧ್ಯಕ್ಷ ವೈ. ವಿ. ಸುಬ್ಬಾ ರೆಡ್ಡಿ ಅವರ ವಾಹನಗಳ ಮೇಲೂ ದಾಳಿ ನಡೆದಿದೆ ಎಂದು ವರದಿಯಾಗಿದೆ.

ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷೆಯಾಗಿರುವ ರೋಜಾ ಅವರು ಮುಖ್ಯಮಂತ್ರಿ ವೈ. ಎಸ್. ಜಗನ್ ಮೋಹನ್ ರೆಡ್ಡಿ ಅವರು ಪ್ರಸ್ತಾಪಿಸಿದ ಮೂರು ರಾಜಧಾನಿ ಯೋಜನೆಯನ್ನು ಬೆಂಬಲಿಸುವ ರ್ಯಾಲಿಯಲ್ಲಿ ಭಾಗವಹಿಸಲು ವೈಝಾಗ್‌ಗೆ ಬರುತ್ತಿದ್ದರು.

ದಾಳಿಯಲ್ಲಿ ರೋಜಾ ಅವರ ಚಾಲಕನ ತಲೆಗೆ ಗಾಯವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ದಾಳಿ ನಡೆಸಿದವರು ಯಾರು ಎಂಬುದನ್ನು ಪತ್ತೆ ಹಚ್ಚಲು ವಿಮಾನ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡುವುದಾಗಿ ಪೊಲೀಸರು ತಿಳಿಸಿದ್ದಾರೆ

ಜನಸೇನಾ ಕಾರ್ಯಕರ್ತರು ಮತ್ತು ಪವನ್ ಕಲ್ಯಾಣ್ ಬೆಂಬಲಿಗರು ತಮ್ಮ ನಾಯಕನನ್ನು ಸ್ವಾಗತಿಸಲು ವಿಮಾನ ನಿಲ್ದಾಣದಲ್ಲಿ ಜಮಾಯಿಸಿದ್ದರು. ಕಲ್ಯಾಣ್‌ ಮೇಲೆ ರಾಜ್ಯ ಸಚಿವರು ಮತ್ತು ವೈಎಸ್‌ಆರ್‌ಸಿಪಿ ನಾಯಕರು ನಡೆಸಿದ ಮಾತಿನ ದಾಳಿಯಿಂದ ಅವರು ಕೋಪಗೊಂಡಿದ್ದರು. ಮೂರು ರಾಜಧಾನಿಯ ಪ್ರಸ್ತಾವದ ವಿರುದ್ಧವೂ ಘೋಷಣೆ ಕೂಗಿದರು ಎಂದು ವರದಿಯಾಗಿದೆ.

ವೈ.ಎಸ್. ಜಗನ್ಮೋಹನ್ ರೆಡ್ಡಿ 2019 ರಲ್ಲಿ ಅಧಿಕಾರಕ್ಕೆ ಬಂದ ನಂತರ ಅವರು ವಿಕೇಂದ್ರೀಕರಣ ಹಾಗೂ  ಮೂರು-ರಾಜಧಾನಿ ಯೋಜನೆಯನ್ನು ಪ್ರಸ್ತಾಪಿಸಿದ್ದರು. ಕರಾವಳಿ ನಗರ ವಿಶಾಖಪಟ್ಟಣಂ ಅನ್ನು ಸೆಕ್ರೆಟರಿಯೇಟ್ ಮತ್ತು ಅಧಿಕಾರದ ಸ್ಥಾನದೊಂದಿಗೆ ಆಡಳಿತ ಮತ್ತು ಕಾರ್ಯಕಾರಿ ರಾಜಧಾನಿಯಾಗಿ ಮಾಡುವುದಾಗಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News