×
Ad

ಶಾಮಿಯಾನ ಸಂಘದ ರಾಜ್ಯಮಟ್ಟದ ಮಹಾ ಅಧೀವೇಶನಕ್ಕೆ ಚಾಲನೆ

Update: 2022-10-16 19:46 IST

ಉಡುಪಿ, ಅ.16: ಕರ್ನಾಟಕ ರಾಜ್ಯ ಶಾಮಿಯಾನ, ಡಕೋರೇಶನ್, ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘ ಗಂಗಾವತಿ, ಆಲ್ ಇಂಡಿಯಾ ಟೆಂಟ್ ಆ್ಯಂಡ್ ಡೆಕೋರೇಟರ್ಸ್ ವೆಲ್‌ಫೇರ್ ಅಸೋಸಿಯೇಶನ್ ನವದೆಹಲಿ, ಹಾಗೂ ಧ್ವನಿ ಬೆಳಕು ಸಂಯೋಜಕರ ಸಂಘಟನೆ ಉಡುಪಿ ಜಿಲ್ಲೆ ಇದರ ಸಂಯುಕ್ತ ಆಶ್ರಯ ದಲ್ಲಿ ಉಡುಪಿಯ ಬೀಡಿನಗುಡ್ಡೆಯ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾದ ಮೂರು ದಿನಗಳ ರಾಜ್ಯಮಟ್ಟದ 2ನೇ ಮಹಾ ಅಧಿವೇಶನ ಹಾಗೂ ಉಡುಪಿ ಜಿಲ್ಲಾ ದಶಮಾನೋತ್ಸವದ ಉಡುಪಿ ವೈಭವ ಕಾರ್ಯಕ್ರಮಕ್ಕೆ ರವಿವಾರ ಚಾಲನೆ ನೀಡಲಾಯಿತು.

ಧ್ವನಿ ಮತ್ತು ಬೆಳಕಿನ ವಸುತಿ ಪ್ರದರ್ಶನ  ಮಾರಾಟ ಮಾಳಿಗೆಯನ್ನು ಅಂಬಲ ಪಾಡಿ ಶ್ರೀಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ  ಧರ್ಮದರ್ಶಿ ಡಾ . ವಿಜಯ ಬಲ್ಲಾಳ  ಉದ್ಘಾಟಸಿ ಶುಭ ಹಾರೈಸಿದರು. ಉಡುಪಿ ವೈಭವದ  ರಾಜ್ಯ ಮಟ್ಟದ 2ನೇ ಅಧಿವೇಶನವನ್ನು ಉಡುಪಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್ ಉದ್ಘಾಟಿಸಿದರು.

ದಶಮಾನೋತ್ಸವ ಸಮಿತಿಯ ಅಧ್ಯಕ್ಷ ಶಿವರಾಜ್ ಮಲ್ಲಾರ್, ಅಲ್ ಇಂಡಿಯಾ ಟೆಂಟ್ ಡೆಕೋರೇಷನ ವೆಲ್‌ಫೇರ್ ಅಸೋಸಿಯೇಶನ್ ಚೇಯರ್ ಮೆನ್ ರವಿ ಜಿಂದಾಲ್, ಪ್ರಧಾನ ಕಾರ್ಯದರ್ಶಿ ಅನಿಲ್ ರಾವ್, ರಾಜ್ಯಾಧ್ಯಕ್ಷ ಶಿವಕುಮಾರ್ ಹಿರೇಮಠ, ನಗರಸಭೆ ಸದಸ್ಯರಾದ ರಜನಿ ಹೆಬ್ಬಾರ್, ಗಿರೀಶ್ ಅಂಚನ್, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಾಮೋದರ್, ಜಿಲ್ಲಾ ಶಾಮಿಯಾನ ಅಧ್ಯಕ್ಷ ಉದಯ ಕುಮಾರ್ ಮೊದ ಲಾದವರು ಉಪಸ್ಥಿತರಿದ್ದರು.

ಸಂಘಟನೆಯ  ಸಂಸ್ಥಾಪಕ ಮಹೆಬೂಬ ಮುಲ್ಲಾ ಸಿದ್ದಾಪುರ  ಪ್ರಾಸ್ತಾವಿಕ ವಾಗಿ ಮಾತನಾಡಿದರು. ಸಂಘದ ಜಿಲ್ಲಾಧ್ಯಕ್ಷ ರಾಮಕೃಷ್ಣ ಕುಂದರ್ ಸ್ವಾಗತಿಸಿ ದರು. ಬಳಿಕ ಸಂಘದ ಸದಸ್ಯರಿಂದ ಮನೋರಂಜನಾ ಕಾರ್ಯಕ್ರಮ ಜರಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News