ಟೋಲ್ ಗೇಟ್ ವಿರುದ್ಧದ ಹೋರಾಟಗಾರರನ್ನು ಹತ್ತಿಕ್ಕಲು ಯತ್ನ: ಕರವೇ ಆರೋಪ
Update: 2022-10-16 19:52 IST
ಉಡುಪಿ, ಅ.16: ಸರಕಾರದ ತಾಕತ್ತು ಅಕ್ರಮ ಟೋಲ್ ಗೇಟ್ ವಿರುದ್ಧ ಸಾಬೀತಾಗಬೇಕೇ ಹೊರತು ಹೋರಾಟಗಾರರ ಮೇಲಲ್ಲ. ಸರಕಾರ ಇದೇ ರೀತಿ ಹೋರಾಟಗಾರರನ್ನು ಹತ್ತಿಕುವ ಕೆಲಸವನ್ನು ಮುಂದುವರಿ ಸಿದರೆ ಅದಕ್ಕೆ ತಕ್ಕ ಬೆಲೆ ತರ ಬೇಕಾಗಿತ್ತು ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಉಡುಪಿ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮದ್ ಎಚ್ಚರಿಕೆ ನೀಡಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಸುರತ್ಕಲ್‌ನಲ್ಲಿ ಅಕ್ರಮ ಟೋಲ್ ಗೇಟ್‌ನ ವಿರುದ್ಧ ಅದೆಷ್ಟೋ ಮನವಿ ಹೋರಾ ಟಗಳು ನಡೆದರೂ ಸರಕಾರ ಅಕ್ರಮ ಟೋಲ್ ಗೇಟ್ ತೆರವುಗೊಳಿಸುವ ಬದಲಾಗಿ ಅದರ ಬೆಂಬಲಕ್ಕೆ ನಿಂತಿರು ವುದು ವಿಪರ್ಯಾಸವೇ ಸರಿ. ಅ.18ರ ಟೋಲ್ ಗೇಟ್ ತೆರವುಗೊಳಿಸುವ ಹೋರಾಟ ಸರಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದು ಇದೀಗ ಸರಕಾರ ಹೋರಾಟ ಗಾರರನ್ನು ಹತ್ತಿಕ್ಕಲು ಶತಾಯಗತಾಯವಾಗಿ ಪ್ರಯತ್ನಿಸುತ್ತಿದೆ. ಇದು ಸರಕಾರದ ಹೇಡಿತನವನ್ನು ಎತ್ತಿ ತೋರಿಸುತ್ತದೆಂದು ಅವರು ಹೇಳಿಕೆಯಲ್ಲಿ ದೂರಿದ್ದಾರೆ.