ಉಡುಪಿ: ಮಾದಕ ವಸ್ತು ಮಾರಾಟಕ್ಕೆ ಯತ್ನ; ಓರ್ವ ಆರೋಪಿ ಬಂಧನ
Update: 2022-10-16 21:09 IST
ಉಡುಪಿ, ಅ.16: ನಿಷೇದಿತ ಮಾದಕ ವಸ್ತು ಎಂಡಿಎಂಎ ಪೌಡರ್ ಮಾರಾಟ ಮಾಡಲು ಯತ್ನಿಸುತ್ತಿದ್ದ ಓರ್ವ ಆರೋಪಿಯನ್ನು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಅ.15ರಂದು ಹೆರ್ಗಾ ಗ್ರಾಮದ ಶೇಷಾದ್ರಿ ನಗರ ಎಂಬಲ್ಲಿ ಬಂಧಿಸಿದ್ದಾರೆ.
ಹಿರಿಯಡ್ಕ ಬೆಲ್ಲಾರ್ ದೇವಸ್ಥಾನ ಬೆಟ್ಟು ನಿವಾಸಿ ರಾಘವೇಂದ್ರ ದೇವಾಡಿಗ (41) ಬಂಧಿತ ಆರೋಪಿ.
ಈತನಿಂದ 4.61 ಗ್ರಾಂ ತೂಕದ ಎಂಡಿಎಂಎ ಪೌಡರ್, ಸ್ಕೂಟರ್, ಮೊಬೈಲ್ ಫೋನ್, ವೇಯಿಂಗ್ ಮೆಷಿನ್, 2300 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 59,545 ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.