×
Ad

ಉಡುಪಿ: ಎಸ್‌ಬಿಐ ಸ್ಟಾಫ್ ಫೆಡರೇಶನ್ ಅಮೃತ ಮಹೋತ್ಸವ ಸಂಭ್ರಮಾಚರಣೆ

Update: 2022-10-16 22:38 IST

ಉಡುಪಿ, ಅ.16: ಸ್ಟೇಟ್ ಬ್ಯಾಂಕ್ಸ್ ಸ್ಟಾಫ್ ಯೂನಿಯನ್ (ಕರ್ನಾಟಕ) ಮಂಗಳೂರು ಮತ್ತು ಉಡುಪಿ ವಲಯಗಳ ಆತಿಥ್ಯದಲ್ಲಿ ‘ಅಖಿಲ ಭಾರತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಟಾಫ್ ಫೆಡರೇಶನ್’ ಇದರ ಅಮೃತ ಮಹೋತ್ಸವ ಸಂಭ್ರಮಾಚರಣೆಯು ಉಡುಪಿಯ ಅಮೃತ್ ಗಾರ್ಡನ್ ಸಭಾಂಗಣದಲ್ಲಿ ರವಿವಾರ ನಡೆಯಿತು.

ಫೆಡರೇಶನ್ ಅಧ್ಯಕ್ಷ ಅರುಣ್ ಭಗೋಲಿವಾರ್, ಉಪಾಧ್ಯಕ್ಷರಾದ ಕೃಪಾಕರನ್, ಪ್ರದೀಪ್ ಕುಮಾರ್ ಬೈಶ್ಯ, ಮಹಾ ಕಾರ್ಯದರ್ಶಿಗಳಾದ ಸಂಜೀವ್ ಕೆ.ಬಂದ್ಲಿಶ್, ಸ್ಟೇಟ್ ಬ್ಯಾಂಕ್ಸ್ ಸ್ಟಾಫ್ ಯೂನಿಯನ್ ರಾಜ್ಯ ಕಾರ್ಯ ದರ್ಶಿ ಎಂ.ರವಿಕುಮಾರ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಮಾಜಸೇವಕ ವಿಶುಶೆಟ್ಟಿ ಅಂಬಲಪಾಡಿ ಅವರನ್ನು ಗೌರವಿಸಲಾಯಿತು.

ಸಮಾಜ ಸೇವಾನಿರತ ಎರಡು ಸಂಸ್ಥೆಗಳಾದ ಮಂಗಳ ಸೇವಾ ಸಮಿತಿ ಟ್ರಸ್ಟ್ ಮಂಗಳೂರು ಮತ್ತು ಸೈಂಟ್ ಜೋಸೆಫ್ ಆರ್ಫನೇಜ್ ಕುಂದಾಪುರ ಇವುಗಳ ಸೇವೆಯನ್ನು ಗುರುತಿಸಿ ಸಹಾಯಧನದೊಂದಿಗೆ ಗೌರವಿಸಲಾ ಯಿತು. ಸ್ವಾತಂತ್ರ್ಯೋತ್ಸವದ ಹಾಗೂ ಫೆಡರೇಶನ್‌ನ ಅಮೃತಮಹೋತ್ಸವವನ್ನು ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ಆಚರಿಸಲಾಯಿತು.

ಸ್ಟೇಟ್ ಬ್ಯಾಂಕ್ಸ್ ಸ್ಟಾಫ್ ಯೂನಿಯನ್ ರಾಜ್ಯಾಧ್ಯಕ್ಷ ಬಿ.ಎಸ್.ನಟೇಶ್ ಅಧ್ಯಕ್ಷತೆ ವಹಿಸಿದ್ದರು. ಸ್ಟೇಟ್ ಬ್ಯಾಂಕ್ಸ್ ಸ್ಟಾಫ್ ಯೂನಿಯನ್‌ನ ವಿವಿಧ ವೃತ್ತಗಳ ಅಧ್ಯಕ್ಷರಾದ ಎಸ್.ಕಿರಣ್ ಕುಮಾರ್ ರೆಡ್ಡಿ, ಪ್ರಣಾಭ್ ಕುಮಾರ್ ಟಾಕುರಿಯ, ನಳಿನ್ ಶರ್ಮ, ಇಕ್ಬಾಲ್ ಸಿಂಗ್ ಮಲ್ಹಿ, ವಿ.ಶ್ರೀಧರನ್, ಪಂಕಜ್ ಕೌಶಿಕ್, ಕೆ.ಶ್ರೀನಿವಾಸ ಶರ್ಮ, ಅಖಿಲ್ ಎಸ್., ಉಪಾಧ್ಯಕ್ಷ ಶ್ಯಾಮಂತ ಕೊನ್ವಾರ್, ಸಹಕಾರ್ಯದರ್ಶಿಗಳಾದ ಎಲ್.ಚಂದ್ರಶೇಖರ್, ರಘುನಾಥ್ ಪ್ರಸಾದ್ ದಾಸ್, ಅಜಯ್ ಜಗ್ಗಿ, ಆರ್.ಶ್ರೀರಾಮ್, ಫಿಲಿಪ್ ಕೊಶೈ, ಗೌತಮ್ ನಿಯೋಗಿ, ಅಖಿಲೇಶ್ ಮೋಹನ್, ಸಂಜಯ್ ಸಿಂಗ್, ಪಿ.ಎ.ಕ್ವಾಝಾ ಫಕ್ರುದ್ದೀನ್, ಕೆ.ಎಸ್.ಸ್ಯಾಂಡಿಲ್ಯಾ, ಅಶೋಕ್ ಶರ್ಮ ಮತ್ತಿತರರು ಉಪಸ್ಥಿತರಿದ್ದರು.

ಉಡುಪಿ ವಲಯದ ಅಸಿಸ್ಟೆಂಟ್ ಜನರಲ್ ಸೆಕ್ರೆಟರಿ ಚಂದ್ರಕಾಂತ್ ಕೆ.ಎನ್. ಸ್ವಾಗತಿಸಿದರು. ಮಂಗಳೂರು ವಲಯದ ಡೆಪ್ಯೂಟಿ ಜನರಲ್ ಸೆಕ್ರೆಟರಿ ಪ್ರಶಾಂತ್ ವಂದಿಸಿದರು. ಕೆ.ಮುರಳೀಧರ್ ಹಾಗೂ ಸುಷ್ಮಾ ರತನ್ ಕಾರ್ಯ ಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News