ಬಾಂಗ್ಲಾ: ನಿರಾಶ್ರಿತರ ಶಿಬಿರದಲ್ಲಿ ಇಬ್ಬರು ರೊಹಿಂಗ್ಯಾ ಮುಖಂಡರ ಹತ್ಯೆ
Update: 2022-10-17 23:18 IST
ಢಾಕಾ, ಅ.17: ಬಾಂಗ್ಲಾದೇಶ(Bangladesh)ದಲ್ಲಿರುವ ರೊಹಿಂಗ್ಯಾ ನಿರಾಶ್ರಿತರ ಶಿಬಿರದಲ್ಲಿ ಇಬ್ಬರು ರೊಹಿಂಗ್ಯಾ ಮುಖಂಡರನ್ನು ಹತ್ಯೆ ಮಾಡಲಾಗಿದೆ ಎಂದು ಬಾಂಗ್ಲಾ ಪೊಲೀಸ್(Police) ವಕ್ತಾರರು ಹೇಳಿದ್ದಾರೆ.
12ಕ್ಕೂ ಹೆಚ್ಚು ರೊಹಿಂಗ್ಯಾ ದುಷ್ಕರ್ಮಿಗಳು ಕ್ಯಾಂಪ್ ನಂಬರ್ 13ರ ರೊಹಿಂಗ್ಯಾ ಮುಖಂಡ ಮೌಲ್ವಿ ಮುಹಮ್ಮದ್ ಯೂನಸ್(Maulvi Muhammad Yunus) ಮತ್ತು ಉಪಮುಖಂಡ ಮುಹಮ್ಮದ್ ಅನ್ವರ್ (Muhammad Anwar)ಮೇಲೆ ದಾಳಿ ನಡೆಸಿ ಇಬ್ರ್ನನ್ನೂ ಹತ್ಯೆಗೈದಿವೆ ಎಂದು ಪೊಲೀಸರು ಹೇಳಿದ್ದಾರೆ.
ಮ್ಯಾನ್ಮಾರ್ನಲ್ಲಿ ಸೇನೆಯ ವಿರುದ್ಧ ಹೋರಾಡುತ್ತಿರುವ ಬಂಡುಗೋರ ಪಡೆ ಅರಾಕನ್ ರೊಹಿಂಗ್ಯಾ ಸಾಲ್ವೇಷನ್ ಆರ್ಮಿ(ಎಆರ್ಎಸ್ಎ) ಈ ಹತ್ಯೆ ನಡೆಸಿದೆ ಎಂದು ರೊಹಿಂಗ್ಯಾ ನಿರಾಶ್ರಿತರ ಶಿಬಿರದಲ್ಲಿನ ಭದ್ರತೆಯ ಹೊಣೆ ವಹಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿರುವುದಾಗಿ ವರದಿಯಾಗಿದೆ.