ಬ್ರಿಟನ್: ಪ್ರತಿಭಟನಾಕಾರರನ್ನು ಥಳಿಸಿದ ಚೀನಾ ದೂತಾವಾಸದ ಸಿಬ್ಬಂದಿ
Update: 2022-10-17 23:32 IST
ಲಂಡನ್, ಅ.17: ಬ್ರಿಟನ್ ನ ಮ್ಯಾಂಚೆಸ್ಟರ್ನ(Manchester)ಲ್ಲಿರುವ ಚೀನಾ ದೂತಾವಾಸದ ಎದುರು ಹಾಂಕಾಂಗ್ ಪ್ರಜಾಪ್ರಭುತ್ವ ಪರ ಪ್ರತಿಭಟನೆ ನಡೆಸುತ್ತಿದ್ದ ವ್ಯಕ್ತಿಯನ್ನು ದೂತಾವಾಸದ ಸಿಬಂದಿಗಳು ದೂತಾವಾಸದ ಆವರಣದ ಒಳಗೆ ಎಳೆದುಕೊಂಡು ಹೋಗಿ ಥಳಿಸಿದ ವೀಡಿಯೊ ವೈರಲ್ ಆಗಿದೆ.
ದೂತಾವಾಸದ ಎದುರು ಪ್ರತಿಭಟನೆ ನಡೆಸುತ್ತಿದ್ದ ವ್ಯಕ್ತಿಯನ್ನು ಆವರಣದ ಒಳಗೆ ಎಳೆದೊಯ್ದು ಸಿಬಂದಿಗಳು ಹಲ್ಲೆ ನಡೆಸುವುದು, ಬಳಿಕ ಪೊಲೀಸರು ಧಾವಿಸಿ ಆ ವ್ಯಕ್ತಿಯನ್ನು ಹೊರಗೆ ಕರೆತರುವ ವೀಡಿಯೊ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಪ್ರಕರಣ ಅತ್ಯಂತ ಕಳವಳಕಾರಿ ಎಂದು ಬ್ರಿಟನ್ ಪ್ರಧಾನಿಯ ವಕ್ತಾರರು ಪ್ರತಿಕ್ರಿಯಿಸಿದ್ದಾರೆ.