ನೈಜೀರಿಯಾ ಪ್ರವಾಹ: ಮೃತರ ಸಂಖ್ಯೆ 603ಕ್ಕೆ ಏರಿಕೆ
Update: 2022-10-17 23:34 IST
ಲಾಗೊಸ್, ಅ.17. ದಶಕದಲ್ಲೇ ಅತ್ಯಂತ ಭೀಕರ ಪ್ರವಾಹದಿಂದ ತತ್ತರಿಸಿರುವ ನೈಜೀರಿಯಾದಲ್ಲಿ ಪ್ರವಾಹದಿಂದ ಮೃತಪಟ್ಟಿರುವವರ ಸಂಖ್ಯೆ 603ಕ್ಕೆ ಏರಿಕೆಯಾಗಿದೆ ಎಂದು ನೈಜೀರಿಯಾದ ಮಾನವೀಯ ವ್ಯವಹಾರಗಳ ಇಲಾಖೆ ಹೇಳಿದೆ.
1.3 ದಶಲಕ್ಷಕ್ಕೂ ಅಧಿಕ ಜನತೆಯನ್ನು ಸ್ಥಳಾಂತರಿಸಲಾಗಿದೆ. 82,000ಕ್ಕೂ ಅಧಿಕ ಮನೆಗಳು , 1,10,000 ಹೆಕ್ಟೇರ್ನಷ್ಟು ಕೃಷಿ ಭೂಮಿಗೆ ಸಂಪೂರ್ಣ ಹಾನಿಯಾಗಿದೆ. ತಗ್ಗು ಪ್ರದೇಶಗಳಲ್ಲಿ ನೆರೆನೀರು ತುಂಬಿದ್ದು ಜನಜೀವನ ಅಸ್ತವ್ಯಸ್ತವಾಗಿದೆ ಎಂದು ಇಲಾಖೆಯ ಸಚಿವ ಸದಿಯಾ ಉಮರ್ ಫರೂಕ್ ಹೇಳಿದ್ದಾರೆ.