ಟರ್ಕಿ: ಬಿಸಿಗಾಳಿ ಬಲೂನು ದುರಂತ ಇಬ್ಬರ ಮೃತ್ಯು
Update: 2022-10-18 23:02 IST
ಇಸ್ತಾನ್‌ಬುಲ್, ಅ.18: ಟರ್ಕಿಯ ಆಕರ್ಷಣೀಯ ಪ್ರವಾಸೀ ತಾಣ ಕ್ಯಪಡೋಕಿ(Padoky)ಯದಲ್ಲಿ ಬಿಸಿಗಾಳಿಯ ಬಲೂನ್ ನೆಲಕ್ಕೆ ಅಪ್ಪಳಿಸಿದ ದುರಂತದಲ್ಲಿ ಸ್ಪೇನ್‌ನ ಇಬ್ಬರು ಪ್ರವಾಸಿಗರು ಮೃತಪಟ್ಟಿರುವುದಾಗಿ ವರದಿಯಾಗಿದೆ.
ಅನಿರೀಕ್ಷಿತವಾಗಿ ಭಾರೀ ಗಾಳಿ ಬೀಸಿದ್ದರಿಂದ ಬಿಸಿಗಾಳಿಯ ಬಲೂನ್ ಥಟ್ಟನೆ ಕೆಳಗೆ ಬಿತ್ತು. ಅದರೊಳಗೆ ಇದ್ದ ಪ್ರವಾಸಿಗರಲ್ಲಿ ಇಬ್ಬರು ಮೃತಪಟ್ಟಿದ್ದು ಇತರ ಮೂವರು ಗಾಯಗೊಂಡರು ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ. ಬಲೂನ್‌ನಲ್ಲಿ 28 ಪ್ರವಾಸಿಗರು ಹಾಗೂ ಇಬ್ಬರು ಸಿಬಂದಿಗಳಿದ್ದರು. ದುರಂತದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಪ್ರಾಂತದ ಗವರ್ನರ್ ಹೇಳಿದ್ದಾರೆ.