ಚಿತ್ತೂರು: 'ಎಚ್ಐಎಫ್‌ ಎಂಡಿಪಿ' ವತಿಯಿಂದ ಬದ್ರಿಯಾ ಫ್ರೆಂಡ್ಸ್ ದುಬೈ ಸಹಯೋಗದೊಂದಿಗೆ ನೂತನ ಮಸೀದಿ ಲೋಕಾರ್ಪಣೆ

Update: 2022-10-20 04:54 GMT

ಚಿತ್ತೂರು: 'ಎಚ್ಐಎಫ್‌ ಇಂಡಿಯಾ' ವತಿಯಿಂದ ಬದ್ರಿಯಾ ಫ್ರೆಂಡ್ಸ್ ದುಬೈ ಸಹಯೋಗದೊಂದಿಗೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲೆ ತಾಲೂಕಿನ ಅಬ್ದುಲ್ಲಾ ಸಾಬ್ ಬಸ್ತಿ ಎಂಬಲ್ಲಿ ಸುಸಜ್ಜಿತ ನೂತನ ಮಸೀದಿಯನ್ನು ನಿರ್ಮಿಸಲಾಯಿತು.

ಮುಖ್ಯ ಅತಿಥಿ ಮೊಹಿಯುದ್ದೀನ್ ಉಸ್ಮಾನ್ ಕಂದಕ್ ಅವರು ನೂತನ ಮಸೀದಿಯನ್ನು ಉದ್ಘಾಟಿಸಿದರು. ಸ್ಥಳೀಯ ಖಾಝಿ ಮೌಲಾನ ರಿಯಾಝ್ ಅಹ್ಮದ್ ದುವಾ ನೆರವೇರಿಸಿದರು.

ಇಹ್ಸಾನ್ ಮಸೀದಿಯ ಕಾರ್ಯದರ್ಶಿ ಹನೀಫ್ ಪಿಎಸ್, ಬಾವ ಉಳ್ಳಾಲ್, ಉದ್ಯಮಿ ತಸ್ಲಿಮ್ ಹಾಗೂ ಇತರ ಗಣ್ಯರು ಈ ಸಂದರ್ಭ ಉಪಸ್ಥಿತರಿದ್ದರು.

ಎಚ್ಐಎಫ್ ಅಧ್ಯಕ್ಷರಾದ ನಾಝಿಮ್ AK ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ನೂತನ ಮಸೀದಿಯಲ್ಲಿ ಸುಮಾರು 500ಕ್ಕೂ ಹೆಚ್ಚು ಮಂದಿ ಒಂದೇ ಸಮಯದಲ್ಲಿ ನಮಾಝ್ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುವ ಜುಮಾ ಮಸೀದಿಯಾಗಿದೆ. ಬದ್ರಿಯಾ ಫ್ರೆಂಡ್ಸ್ ದುಬೈ ವತಿಯಿಂದ ಮಸೀದಿಯ ನಿರ್ಮಾಣ ವೆಚ್ಚವನ್ನು ಭರಿಸಲಾಯಿತು. ಇದು 'ಎಚ್ಐಎಫ್ ಎಂಡಿಪಿ' (ಮಸ್ಜಿದ್ ಡೆವಲಪ್ಮೆಂಟ್ ಪ್ರಾಜೆಕ್ಟ್) ವತಿಯಿಂದ ನಿರ್ಮಿತವಾದ 7ನೆ ಮಸೀದಿಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News