×
Ad

ಭಾರತದ ಪ್ರಮುಖ ಆಟಗಾರರಿರುವ ಐಸಿಸಿ ವೀಡಿಯೊದಲ್ಲಿ ವಿರಾಟ್ ಕೊಹ್ಲಿ ಕಾಣೆಯಾಗಿದ್ದನ್ನು ಪ್ರಶ್ನಿಸಿದ ಅಭಿಮಾನಿಗಳು

Update: 2022-10-19 13:33 IST
 Virat Kohli, photo:PTI

ಹೊಸದಿಲ್ಲಿ: ‘ಭಾರತೀಯ ಕ್ರಿಕೆಟ್‌ನ ಪೋಸ್ಟರ್ ಬಾಯ್’ ವಿರಾಟ್ ಕೊಹ್ಲಿ  Virat Kohli ಅವರ ಹೆಸರನ್ನು  ಜಾಗತಿಕ ಕ್ರಿಕೆಟ್ ವಲಯದಲ್ಲಿ ಪರಿಚಯ ಮಾಡುವ ಅಗತ್ಯವಿಲ್ಲ. ಕೊಹ್ಲಿ ವರ್ಷಗಳಿಂದ ಕ್ರಿಕೆಟಿಗ ದೊಡ್ಡ ಸೇವಕರಾಗಿದ್ದಾರೆ ಮತ್ತು ಭಾರತೀಯ ಕ್ರಿಕೆಟ್‌ಗೆ ಬ್ಯಾಟರ್ ಹಾಗೂ ನಾಯಕನಾಗಿ ಹೊಸ ಆಯಾಮಗಳನ್ನು ನೀಡಿದ್ದಾರೆ. ಅವರು ಪ್ರಸ್ತುತ ಭಾರತೀಯ ನಾಯಕನಾಗಿರದೆ ಇರಬಹುದು. ಆದರೆ ಅವರು ಇನ್ನೂ ಭಾರತೀಯ ತಂಡದ ಪ್ರಬಲ ಸ್ತಂಭಗಳಲ್ಲಿ ಒಬ್ಬರಾಗಿ ಉಳಿದಿದ್ದಾರೆ. ಆದಾಗ್ಯೂ, ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಭಾರತೀಯ ತಂಡದ ಕೆಲವು ಪ್ರಮುಖರನ್ನು ಒಳಗೊಂಡ ವೀಡಿಯೊವನ್ನು ಹಂಚಿಕೊಂಡಿದೆ. ಆದರೆ ವೀಡಿಯೊದಲ್ಲಿ ಕೊಹ್ಲಿ ಎಲ್ಲಿಯೂ ಕಾಣಿಸಿಲ್ಲ.

ಐಸಿಸಿ ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ರೋಹಿತ್ ಶರ್ಮಾ, ಕೆ.ಎಲ್.  ರಾಹುಲ್, ಸೂರ್ಯಕುಮಾರ್ ಯಾದವ್ ಹಾಗೂ ಯಜುವೇಂದ್ರ ಚಹಾಲ್ ಇದ್ದಾರೆ. ಆದರೆ, ವೀಡಿಯೊದಲ್ಲಿ ಕೊಹ್ಲಿ  ಇಲ್ಲದಿರುವುದನ್ನು ನೋಡಿ ಅನೇಕ ಅಭಿಮಾನಿಗಳು ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದರು.ಕೊಹ್ಲಿ ಎಲ್ಲಿದ್ದಾರೆಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News