ಕಾಡಿನ ಮಕ್ಕಳ ಬಣ್ಣದ ಹೆಜ್ಜೆ: ಕೊರಗ ಮಕ್ಕಳ ರಂಗ ತರಬೇತಿ ಶಿಬಿರ ಸಮಾರೋಪ
ಕುಂದಾಪುರ, ಅ.19: ಆಲೂರು ಗ್ರಾಮದ ಹಾಡಿಮನೆಯಲ್ಲಿ 7 ದಿನಗಳ ಕೊರಗ ಮಕ್ಕಳ ರಂಗ ತರಬೇತಿ ಶಿಬಿರ ಅ.16ರಂದು ಸಮಾಪನಗೊಂಡಿದೆ.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಡಾ.ಎಸ್.ವೈ.ಗುರು ಶಾಂತ್ ಮಾತನಾಡಿ, ಈ ರೀತಿಯ ರಂಗ ತರಬೇತಿ ಶಿಬಿರ ಈ ಸಮುದಾಯದ ನಡುವೆ ಹೆಚ್ಚು ಹೆಚ್ಚು ನಡೆಯಬೇಕು. ಕೊರಗ ಸಮುದಾಯದ ಮಕ್ಕಳಿಗೆ ಪ್ರತಿಭೆಗೆ ಸೂಕ್ತ ವೇದಿಕೆಯನ್ನು ಒದಗಿಸುವ ಕೆಲಸ ಆಗಬೇಕು. ಸ್ಥಳೀಯ ಕೊರಗ ಮಕ್ಕಳಲ್ಲಿ ಪ್ರತಿಭಾವಂತರು ಇದ್ದಾರೆ. ಅವರನು ಗುರಿ ತಲುಪಿಸುವ ಮಹತ್ತರ ವಾದ ಜವಾಬ್ದಾರಿ ಇದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕುಂದಾಪುರ ಸಮುದಾಯ ಅಧ್ಯಕ್ಷ ಉದಯ ಗಾವಂಕರ್ ಮಾತನಾಡಿ, ಈ ಮಕ್ಕಳಿಗೆ ನಾವು ಏನನ್ನು ಕಲಿಸಲು, ಹೊಸತನ್ನು ಅವರ ತಲೆಗೆ ತುಂಬುವ ಕೆಲಸವನ್ನು ನಾವು ಮಾಡಿಲ್ಲ. ಈ ಸಮುದಾಯ ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತವಾಗಿದೆ. ಈ ಸಮುದಾಯದ ನಡುವೆ ನಾವು ಕಲಿಯಬೇಕಾದ ಸಾಕಷ್ಟು ವಿಷಯಗಳಿವೆ ಎಂದರು.
ರೇವತಿ ಸ್ವಾಗತಿಸಿದರು. ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಅಧ್ಯಕ್ಷ ಶ್ರೀಧರ ನಾಡ ವಂದಿಸಿದರು. ರಮೇಶ್ ಗುಲ್ವಾಡಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಶಿಬಿರದ ಮಕ್ಕಳಿಂದ ಹುಭಾಶಿಕ ನಾಟಕ ಪ್ರಸುತ್ತ ಪಡಿಸಿದರು.