ಮೊಬೈಲ್, ಬ್ರಾಡ್‌ಬ್ಯಾಂಡ್ ವೇಗದಲ್ಲಿ ಜಾಗತಿಕ ಮಟ್ಟದಲ್ಲಿ ಕುಸಿದ ಭಾರತದ ಸ್ಥಾನ: ಊಕ್ಲಾ ವರದಿ

Update: 2022-10-19 14:16 GMT
PHOTO :ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ,ಅ.19: ಭಾರತದಲ್ಲಿ 5ಜಿ ವೇಗವು ಪರೀಕ್ಷಾ ನೆಟ್ವರ್ಕ್(network) ಗಳಲ್ಲಿ 500 ಎಂಬಿಪಿಎಸ್ ತಲುಪಿದೆ ಎಂದು ಊಕ್ಲಾ ಸ್ಪೀಡ್ಟೆಸ್ಟ್(Ookla Speedtest) ಜಾಗತಿಕ ಸೂಚಿಯು ಕಳೆದ ವಾರ ತಿಳಿಸಿತ್ತು. ಕಂಪನಿಯು ತನ್ನ ಇತ್ತೀಚಿನ ವರದಿಯಲ್ಲಿ ಭಾರತವು ಸೆಪ್ಟಂಬರ್ನಲ್ಲಿ ಸರಾಸರಿ ಮೊಬೈಲ್ ಡಾಟಾ ಮತ್ತು ಸ್ಥಿರ ಬ್ರಾಡ್ಬ್ಯಾಂಡ್(Broadband) ವೇಗಗಳಲ್ಲಿ ಒಂದು ಸ್ಥಾನ ಕೆಳಕ್ಕೆ ಕುಸಿದಿದೆ ಎಂದು ಹೇಳಿದೆ. 

ಆಗಸ್ಟ್ ನಲ್ಲಿ ಭಾರತವು ಸರಾಸರಿ ಮೊಬೈಲ್ ಡಾಟಾ ಮತ್ತು ಸ್ಥಿರ ಬ್ರಾಡ್ಬ್ಯಾಂಡ್(Data and fixed broadband) ವೇಗಗಳಲ್ಲಿ ಜಾಗತಿಕವಾಗಿ ಅನುಕ್ರಮವಾಗಿ 117 ಮತ್ತು 78ನೇ ಸ್ಥಾನಗಳಲ್ಲಿತ್ತು. ಆದರೆ ಸೆಪ್ಟಂಬರ್ ವರದಿಯು ದೇಶವು ಅನುಕ್ರಮವಾಗಿ 118 ಮತ್ತು 79ನೇ ಸ್ಥಾನಗಳಲ್ಲಿದೆ ಎನ್ನುವುದನ್ನು ತೋರಿಸಿದೆ.

ಶ್ರೇಯಾಂಕದಲ್ಲಿ ಕುಸಿತವಾಗಿದ್ದರೂ ಆಗಸ್ಟ್ನಲ್ಲಿ 13.52 ಎಂಬಿಪಿಎಸ್ ಇದ್ದ ಸರಾಸರಿ ಡೌನ್ಲೋಡ್ ವೇಗವು ಸೆಪ್ಟಂಬರ್‌ನಲ್ಲಿ 13.87 ಎಂಬಿಪಿಎಸ್ಗೆ ಅಲ್ಪಪ್ರಮಾಣದಲ್ಲಿ ಏರಿಕೆಯಾಗಿದೆ. ಸ್ಥಿರ ಬ್ರಾಡ್ಬ್ಯಾಂಡ್ ಸರಾಸರಿ ವೇಗದಲ್ಲಿಯೂ ಇಂತಹುದೇ ಪ್ರವೃತ್ತಿ ಕಂಡು ಬಂದಿದ್ದು,ಆಗಸ್ಟ್ ನಲ್ಲಿ 48.29 ಎಂಬಿಪಿಸ್ ಇದ್ದುದು ಸೆಪ್ಟಂಬರ್ನಲ್ಲಿ 48.59 ಎಂಬಿಪಿಎಸ್ಗೆ ಏರಿಕೆಯಾಗಿದೆ.

ಜಾಗತಿಕ ಸೂಚಿಯಲ್ಲಿ ಸರಾಸರಿ ಮೊಬೈಲ್ ವೇಗದಲ್ಲಿ ನಾರ್ವೆ ಮೊದಲ ಸ್ಥಾನದಲ್ಲಿದ್ದರೆ, ಸ್ಥಿರ ಬ್ರಾಡ್‌ಬ್ರ್ಯಾಂಡ್ ವೇಗದಲ್ಲಿ ಚಿಲಿ ಅಗ್ರಸ್ಥಾನದಲ್ಲಿದೆ. ಭಾರತದಲ್ಲಿಯ ಶೇ.89ರಷ್ಟು ಬಳಕೆದಾರರು 5ಜಿಗೆ ಅಪ್ಡೇಟ್ ಆಗಲು ಬಯಸಿದ್ದಾರೆ ಎಂದು ಊಕ್ಲಾದ ಇನ್ನೊಂದು ಸಮೀಕ್ಷೆಯು ತೋರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News