ಬ್ರಿಟನ್‌ನ ಗೃಹ ಸಚಿವೆ ಸುಯೆಲ್ಲಾ ಬ್ರಾವರ್‌ಮನ್ ರಾಜೀನಾಮೆ

Update: 2022-10-20 06:50 GMT
Photo:twitter

ಲಂಡನ್: ಬ್ರಿಟನ್‌ನ ಗೃಹ ಸಚಿವೆ ಸುಯೆಲ್ಲಾ ಬ್ರಾವರ್‌ಮನ್ ಬುಧವಾರ ಸರಕಾರವನ್ನು ತೊರೆದರು.

ಸಹೋದ್ಯೋಗಿಗೆ ಅಧಿಕೃತ ದಾಖಲೆಯನ್ನು ಕಳುಹಿಸಲು ತನ್ನ ವೈಯಕ್ತಿಕ ಇಮೇಲ್ ಅನ್ನು ಬಳಸಿದ ನಂತರ ತಾನು ರಾಜೀನಾಮೆ ನೀಡಿದ್ದೇನೆ ಎಂದು ಬ್ರಾವರ್‌ಮನ್ ಹೇಳಿದರು.

ಇದನ್ನು ಸರಕಾರದ ನಿಯಮಗಳ "ತಾಂತ್ರಿಕ ಉಲ್ಲಂಘನೆ" ಎಂದು ಹೇಳುತ್ತಿರುವಾಗಲೇ, "ನಾನು ತಪ್ಪು ಮಾಡಿದ್ದೇನೆ; ನಾನು ಜವಾಬ್ದಾರಿಯನ್ನು ಸ್ವೀಕರಿಸುತ್ತೇನೆ. ನಾನು ರಾಜೀನಾಮೆ ನೀಡುತ್ತೇನೆ’’ ಎಂದು ಬ್ರಾವರ್‌ಮನ್  ತಮ್ಮ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.

ಬ್ರಾವರ್ ಮನ್ ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ, ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಅಡಿಯಲ್ಲಿ ಮಾಜಿ ಸಾರಿಗೆ ಸಚಿವರಾಗಿದ್ದ  ಗ್ರಾಂಟ್ ಶಾಪ್ಸ್ ಅವರನ್ನುಗೃಹ  ಸಚಿವರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಪ್ರಧಾನಿ  ಕಚೇರಿ ಘೋಷಿಸಿತು.

42 ವರ್ಷದ ಸಚಿವೆ ಸುಯೆಲ್ಲಾ  ರಾಜೀನಾಮೆಯಿಂದಾಗಿ  ಪ್ರಧಾನಿ ಲಿಝ್  ಟ್ರಸ್ ಅವರ ಕ್ಯಾಬಿನೆಟ್‌ನಿಂದ  ಒಂದು ವಾರದೊಳಗೆ ಎರಡನೇ ಹಿರಿಯ ಸಚಿವರ ನಿರ್ಗಮನವಾಗಿದೆ. ಅಕ್ಟೋಬರ್ 14 ರಂದು, ಕ್ವಾಸಿ ಕ್ವಾರ್ಟೆಂಗ್ ಅವರನ್ನು ಹಣಕಾಸು ಸಚಿವ ಸ್ಥಾನದಿಂದ ತೆಗೆದುಹಾಕಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News